ಪುಟ:Mrutyunjaya.pdf/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೧ ಮೃತ್ಯುಂಜಯ

  ನೀಲಾಂಜನಗಳನ್ನೂ ಹಣತೆಗಳನ್ನೂ ಹಚ್ಚಿದರು. ಲಿಪಿಕಾರ ತಾನು ಬರೆದುದನ್ನು ಓದಿದ, ಹೆಖ್ವೆಟ್ ಅಲ್ಲೊಂದು ಪದ ಇಲ್ಲೊಂದು ಪದ ತಿದ್ದಿದ.
  ಅವನು ಗದರಿದ :
 "ನಾನು ಹೇಳೋದೊಂದು,ನೀನು ಬರೆಯೋದೊಂದು."
 ಲಿಪಿಕಾರನೆಂದ:
 “ಕ್ಷಮಿಸ್ಬೇಕು ಸ್ವಾಮಿ. ತಾವು ಹೇಳಿದ್ದೇ ಹಾಗೆ.”
 “ಆದರೇನಂತೆ ? ಉದಾತ್ತ ವಿಚಾರಗಳನ್ನು ಮತ್ತೆ ಮತ್ತೆ ಪರಿಷ್ಕ್ ರಿಸ್ಬೇಕು.”

ಓದಿ ಕೇಳಿಸಿಕೊಂಡರಷ್ಟೇ ಸಾಕೆ ? ಹೆಖ್ವೆಟ್ ಪುನಃ ಪುನಃ ಅವನ್ನು ವಿವರಿಸಿದ. ಇದು ತಾಳಲಾರದ ಹಿಂಸೆ ಎನಿಸಿತು ಲಿಪಿಕಾರನಿಗೆ. ಮುದುಕನ ಏರಿಳಿತವಿಲ್ಲದ ಗೊರ ಗೊರ ಸದ್ದು ಕೇಳಿ ಅವನಿಗೆ ಜೊಂಪು ಅಡರಿತು.

 “ಇನ್ನು ಪ್ರಚಲಿತ ಪರಿಸ್ಥಿತಿಯ ವಿಷಯವಾಗಿ----”
  ನಿದ್ದೆಯ ಲೋಕದಲ್ಲಿ ಹೊಸ ಸದು ಕೇಳಿಸಿದವನಂತೆ ಲಿಪಿಕಾರ ಬೆಚ್ಚಿ ಬಿದ್ದು, “ಹ್ಞ ?" ಎಂದ.
  ಹೆಖ್ವೆಟ್ ಕೂಗಿ ನುಡಿದ:
  “ನಿದ್ದೆ ಹೋಗಿದ್ದೆಯೇನೋ ಕತ್ತೆ ?”
  “ಇಲ್ಲ ಸ್ವಾಮಿ, ಇಲ್ಲ,” ಎಂದ ಲಿಪಿಕಾರ, ನೊಂದ ಸ್ವರದಲ್ಲಿ.
  ಒಡೆಯನ ರೇಗಾಟ ಕೇಳಿ ಆಪ್ತ ಸೇವಕ ಓಡಿ ಬಂದು, ಸನ್ನಿವೇಶ ಇಂಥದೇ ಎಂದು ಊಹಿಸಿ, ಪಡಸಾಲೆಯ         ಮೂಲೆಯಲ್ಲಿ, ಕತ್ತಲಿರುವ ಕಡೆ, ಮಾನವಾಗಿ ನಗುತ್ತ ನಿಂತ.
 “ಬರಕೋ....ಐಗುಪ್ತದಲ್ಲಿ ನಡೆದಿರುವ ರಾಜಕೀಯ ಚೌಕಮಣೆ ಆಟದಿಂದ ಯಾರಿಗೂ ಹಿತವಿಲ್ಲ. ದೇವರಿಲ್ಲದೆ, ಆಕಾಶದಲ್ಲಿ ಹಕ್ಕಿ ಹಾರದು, ನೀರಿ ನಲ್ಲಿ ಮೀನು ಚಲಿಸದು. ಆಳುವ ಮಹಾಪ್ರಭು ಆ ದೇವರ ಪ್ರತಿನಿಧಿ. ಅರಸನ ಪರವಾಗಿ ದೇವರನ್ನು ಅರ್ಚನೆ ನಿವೇದನೆಗಳಿಂದ ಸಂತೃಪ್ತಗೊಳಿಸುವವನು ಮಹಾ ಅರ್ಚಕ.....ಲೌಕಿಕ ವಿಚಾರಗಳನ್ನು ದೇವರು....-ಯಾವ ದೇವರೇ ಇರಲಿ-ರಾ, ಅಮನ್, ಪ್ಟಾ-ಮಹಾಪ್ರಭುವಿನ ಮೂಲಕ ನಡೆಸಿಕೊಡುತ್ತಾನೆ....ಧಾರ್ಮಿಕ ಕ್ರಿಯೆಗಳನ್ನೂ ಪೂಜಾವಿಧಿಗಳನ್ನೂ ಮಹಾ ಅರ್ಚಕನ