ಪುಟ:Mrutyunjaya.pdf/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೫೨

ಮೃತ್ಯುಂಜಯ

ಮೇಲ್ವಿಚಾರಣೆಯಲ್ಲಿ ದೇವರು ಆಗಗೊಳಿಸುತ್ತಾನೆ. ನೀರು ಎರಡು ಕಾಲುವೆಗಳಲ್ಲಿ ಹರಿದರೂ ಅದು ಹೋಗಿ ಸೇರುವುದು ಒಂದೇ ಹೊಲಕ್ಕೆ. ಆ ಹೊಲ ರಾನ ಸೊತ್ತು....ಮಾಟ್,ಮಾಟ್! ಪ್ರತಿಯೊಬ್ಬನ ನಡೆಯೂ ನುಡಿಯೂ ಮಾಟ್‌ನಂತೆ ಮಂದಿರದ ವಿಷಯದಲ್ಲಿಯೂ ಮಾಟ್, ಮಹಾಮನೆಯ ವಿಷಯದಲ್ಲಿಯೂ ಮಾಟ್. ಸಹನೆ, ಸಮತೋಲನ, ಸಮನ್ವಯ.... ಸುಖ, ಶಾಂತಿ....ಹುಂ. ಸಾಕು. ಒಮ್ಮೆ ಓದಿ ಬಿಡು."
ಓದಿದಂತೆ ಮಧ್ಯೆ ಮಧ್ಯೆ ಪರಿಷ್ಕರಣ. ದಣಿದು ಬಾಯಿ ಒಣಗಿದ್ದುದರಿಂದ, ವಿವರಿಸುವ ಗೊಡವೆಗೆ ಹೆಖ್ವೆಟ್ ಮತ್ತೆ ಹೋಗಲಿಲ್ಲ.
ಕೊನೆಯಲ್ಲಿ ಆತ ದೊಡ್ಡದಾಗಿ ಆಕಳಿಸಿ, ಎದ್ದು, ಅಂಗಾಂಗಗಳಿಂದ ಲಟಲಟನೆ ನೆಟಕೆ ಮುರಿದ.
ಮಸಿ ಆರಲೆಂದು, ಬರೆದುದರ ಮೇಲೆ ಲಿಪಿಕಾರ ಉಸಿರು ಊದಿದ.
ಹೆಖ್ವೆಟ್ ಅಂದ:
“ಸುರುಳಿ ಸುತ್ತಿ ಜೋಪಾನವಾಗಿಡು. ಆ ಅಮಾತ್ಯನಿಂದ ಆದಾತಾ ಹೀಗೆ ಬರೆಸೋದು? ಹುಂ!" ಸೆರ್ಕೆಟ್ ಎರಡು ಬಾರಿ ಇಣಿಕಿ ನೋಡಿ ಹಿಂದಕ್ಕೆ ಸರಿದಿದ್ದ. ಅರ್ಥವಾಗದ ಕೆಲವು ಪದಗಳು ಲಿಪಿ ಸುರುಳಿ ಸೃಷ್ಟಿಯಾಗುತ್ತಿದ್ದ ಅಪೂರ್ವ ಸನ್ನಿವೇಶ. ಹೆಖ್ವೆಟ್‌ನ ಹಿರಿಮೆಯ ವಿಷಯದಲ್ಲಿ ಅವನಿಗೆ ಯಾವ ಸಂಶಯವೂ ಉಳಿಯಲಿಲ್ಲ.
(ಹೆಖ್ವೆಟ್ ಏನೂ ಮಾಡುತ್ತಿದ್ದಾನೆ ಎಂದು ತಿಳಿಯಲು ಮಂದಿರದಿಂದ ಬಂದವನಿಗೆ, ಪಿಸುದನಿಯಲ್ಲಿ ಆತ ಹೇಳಿದ:
“ಕೂತ್ಕೋಂಡು ಏನೇನೋ ಅನ್ತಿದ್ದಾರೆ ; ಲಿಪಿಕಾರ ಬರಕೊಳ್ತಿದ್ದಾನೆ.”
“ಈಗ ದೇವದರ್ಶನಕ್ಕೆ ಬರೋದಿಲ್ಲವಾ?”
“ಕಾಣ್ಲಿಲ್ಲ. ಎಲ್ಲ ನಾಳೆ, ನಾಳೆ ಬೆಳಿಗ್ಗೆ.”
ಸ್ವಲ್ಪ ಹೊತ್ತಿನಲ್ಲಿ ಇನ್ನೊಬ್ಬ ದೂತ ಮಂದಿರದಿಂದ ಬಂದ.
"ನೀವು ಬರಬೇಕಂತೆ."
“ನಾನಾ? ಸರಿ, ಸರಿ! ನಾನು ಇಲ್ಲಿಯೇ ಇರಬೇಕೂಂತ ಸ್ವಾಮಿ