ಪುಟ:Mrutyunjaya.pdf/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯೬

ಮೃತ್ಯುಂಜಯ



"ಅಪಕ್ವ ಸಲಹೆ. ಹಾಗೆ ಮಾಡಿದರೆ ಬಡತನವನ್ನು ಹಂಚಿದಂತಾಗ್ತದೆ.
ಬದಲು ಎಲ್ಲ ಮಂದಿರಗಳ ಸಂಪತ್ತನ್ನೂ ಜಾಸ್ತಿ ಮಾಡ್ಬೇಕು."
"ಸಂಪತ್ತು ಬರೋದು ದುಡಿಮೆಯಿಂದ."
"ದುಡಿಮೆ ಹೆಚ್ಚಲಿ!"
"ಅದಕ್ಕೊಂದು ಮಿತಿ ಇದೆ. ಜನ ಆಸಂತುಷ್ಟರಾಗ್ತಾರೆ."
ಹೇಪಾಟ್ ನ ಕಣ್ಣುಗಳು ಕೆಂಪಾದುವು; ಶಿರಸ್ಸು ಅದುರಿತು. ಮಾತು
ಅವನ ಗಂಟಲಿನಿಂದ ಹೊರಡುವುದರೊಳಗೇ ನೆಫರ್ ಟೀಮ್ ಅಂದಳು :
"ರಾ-ಪ್ ಟಾ-ಅಮನ್ ರಿಗೆ ಸಮಾನ ಸ್ಥಾನ ನೀಡಿಕೆ ಅದ್ಭುತ ಕಲ್ಪನೆ.
ಆದರೆ ಸಹಸ್ರಾರು ವರ್ಷಗಳಿಂದ ಅವರನ್ನು ಬೇರೆ ಬೇರೆಯಾಗಿ ಪೂಜಿಸಿದ್ದೇವೆ.
ಆ ಭಾವನೇನ ತಿದ್ದೋದು ಅಷ್ಟು ಸುಲಭವಾ ? ಮಹಾ ಅರ್ಚಕರು
ಭಕ್ತೆಯ
ಶಂಕೆ ಒಗೆಹರಿಸ್ಬೇಕು."
ಹೇಷಾಟ್ ನ ಸಿಟ್ಟು ಅಂಕೆ ಮೀರದಂತೆ ಮಹಾರಾಣಿ ನೋಡಿಕೊಳ್ಳು
ತ್ತಿದ್ದಾಳೆ ಎನಿಸಿತು ಹೆಖ್ವೆಟ್ ಗೆ, ಅಮಾತ್ಯನೂ ಮುಗುಳು ನಕ್ಕ. ಬಿಗಿಹಿಡಿ
ದಿದ್ದ ಉಸಿರನ್ನು ಪೆರೋ ನಿಧಾನವಾಗಿ ಬಿಟ್ಟ.
ಮಹಾ ಅರ್ಚಕ ಅನ್ಯಗತಿಯಿಲ್ಲದೆ ಧ್ವನಿಯನ್ನು ತುಸು ಮೃದು
ಗೊಳಿಸಿದ:
"ನಿಜ ಈ ಹೊಸ ಕಲ್ಪನೆ ಸರ್ವಮಾನ್ಯವಾಗೋದಕ್ಕೆ ಒಂದು ಸಹಸ್ರ
ವರ್ಷವೇ ಬೇಕಾಗಬಹುದು. ಈಗ ಬೀಜ ಬಿತ್ತಿದರೆ ಮುಂದೆ ಯಾವತ್ತೋ
ಒಂದು ದಿನ ಫಲ ಕೊಡ್ತದೆ."
ಆರಾಧನೆಯ ದ್ರುಷ್ಟಿಯಿಂದ ನೆಫರ್ ಟೀಮ್ ಆತನೆಡೆಗೆ ನೋಡಿದಳು.
'ನಿರ್ಲಜ್ಜೆ', ಎಂದುಕೊಂಡ ಹೆಖ್ವೆಟ್. ಆಮೆರಬ್ ನಸುನಕ್ಕ. ರಾಣಿಯ
ಪ್ರತಿಕ್ರಿಯೆಯನ್ನು ಅರಸ ಗಮನಿಸಲಿಲ್ಲ.
ಅಮಾತ್ಯ ಕಾಯಿ ಸರಿಸಿದ:
"ಧರ್ಮದ ಬೆಳಕು ತೋರಬೇಕಾದ ಗುರು ನಮ್ಮನ್ನು ತೊರೆದರಲ್ಲ
ಅಂತ ಚಿಂತೆಗೆ ಈಡಾಗಿದ್ವಿ.
ಹೇಪಾಟ್ ಸ್ವರ ಏರಿಸಿದ:
"ವೃಥಾರೋಪ."