ಪುಟ:Mrutyunjaya.pdf/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯು೦ಜಯ

  ಮಹಾ ಅರ್ಚಕನ ಮಾತನ್ನು ಪೂರ್ತಿ ಕೇಳುವಷ್ಟು  ಸಹನೆಯೂ ಇಲ್ಲವಲ್ಲ !      ದೇಶದ ದುರದೃಷ್ಟ !”
    ಅರಸನೆ೦ದ :
    “ಜಿಜ್ಞಾಸೆಯ ಸ೦ಗತಿ  ಸ್ವಾರಸ್ಯಕರವಾಗಿದೆ. ಮಹಾ  ಅರ್ಚಕರು ಮುಂದುವರಿಸ್ಬೇಕು.”
    ಹೇಪಾಟ್ ಎರಡು ಕ್ಷಣ  ಸುಮ್ಮನಿದ್ದ .ಆನ್ ನಗರಿಯ ರಾ ಮ೦ದಿರದ ಮುಖ್ಯ ಅರ್ಚಕನೊಡನೆಯೂ, ವೆಸಿಪಟ್ಟಣದ ಅಮನ್ ಮಹಾಮಂದಿರದ ಮುಖ್ಯ ಅರ್ಚಕನೊಡನೆಯೂ  ಒಬ್ಬಿಬ್ಬರು ಹಿರಿಯ ದೇವಸೇವಕರೊಡನೆಯೂ ರಾ,ಫ್ ಟಾ ಮತ್ತು ಅಮನ್ ಮೂವರು ದೇವರಿಗೂ ಸಮಾನ ಸ್ಧಾನ ನೀಡುವ ಬಗೆಗೆ ಮಹಾ ಅರ್ಚಕ ಮಾತನಾಡಿದ್ದ, ಅದಿನ್ನೂ ಅಸ್ಪಷ್ಟ ರೂಪ ದಲ್ಲಿದ್ದ ವಿಚಾರ, ಗುರುಮನೆಯ ಬಲಸಂವರ್ಧನದ ಪ್ರಯತ್ನಕ್ಕೆ ಆ ಜಿಜ್ಞಾಸೆ  ಒಳ್ಳೆಯ ಧಾರ್ಮಿಕ ತೆರೆಯಾಗಿತ್ತು. ತನ್ನ ಹೋರಾಟದ ನಿರ್ಣಾಯಕ ಹ೦ತದಲ್ಲಿ ಆ ತೆರೆ ಸರಿದರೂ ತಪ್ಪಲ್ಲ. ಯೋಚನೆಗೆ ಕಡಿವಾಣ ಹಾಕಿ, ಆತ ಮಾತನಾಡಿದ :
        “ನಮ್ಮ ಪರಂಪರಾಗತ ದೇವರಾದ ರಾಗೆ ಈಗ ಸಿಗುತ್ತಿರೋ ಮನ್ನಣೆ ಸಾಲದು. ರಾಜಧಾನಿಯಲ್ಲಿರೋ ಕಾರಣ ಕುಶಲ ಕರ್ಮಿಗಳ ದೇವರಾದ ಪ್ ಟಾಗೆ ವೈಭವದ ಪೂಜೆ ಸಲ್ತದೆ  . ದಕ್ಷಿಣ ಭಾಗದ ವೆಸಿಪಟ್ಟಣದ ಅಮನ್  ಪ್ರವಾಸದ ದೇವರು ದಂಡಿನ ದೇವರು ಮಾತ್ರವಲ್ಲ. ಅಮನ್ ಗೆ ಅಲ್ಲಿನ ಗ್ರಾಮಾಂತರ ಪ್ರದೇಶದಲ್ಲೂ ಅಸಂಖ್ಯ ಭಕ್ತರಿದ್ದಾರೆ. ಈ ಮೂವರು  ದೇವರಿಗೂ ಒ೦ದೇ  ಸ್ಥಾನಮಾನ ಲಭಿಸಿದರೆ ಐಗುಪ್ತ ಸಮಾಜದ ಒಗ್ಗಟ್ಟ ಮತ್ತಷ್ಟು ಬಲವಾಗ್ತದೆ . ಇ೦ಥ ಸುಧಾರಣೆಯಿ೦ದ ಪ್ರಾಚೀನ ಕಟ್ಟು ಕಟ್ಟಳೆಗಳನ್ನು  ಮುರಿದ೦ತಾಗೋದಿಲ್ಲ ;ಇನ್ನಷ್ಟು  ದೃಢಪಡಿಸಿದ ಹಾಗಾಗ್ತದೆ. (ಅಮಾತ್ಯನ ಕಡೆ ತಿರುಗಿ) ತಿಳೀತೆ?” 
           ಆಮೆರಬ್ ಗೆ ಒ೦ದು ಬಗೆಯ ಮುಖಭ೦ಗ . ಆದರೂ ಗಾ೦ಭೀರ್ಯದ ಮುಖಚರ್ಯೆಯನ್ನು  ಬದಲಾಯಿಸದೆ ಆತನೆ೦ದ  :
          “ನಿಸ್ಸಂದೇಹವಾಗಿಯೂ ಉದಾತ್ತ ವಿಚಾರ. ಗುರುಮನೆಯ ಸ೦ಪತ್ತನ್ನು  ಸಮನಾಗಿ ವಿತರಣೆ ಮಾಡಿದರಾಯ್ತು.”