ಪುಟ:Mrutyunjaya.pdf/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ

    'ಹ .
    ಜೆಜ್ಞಾಸೆಯ ಸ್ವರೂಪವೇನು ?   ಫಲಿತಾ೦ಶಗಳೇನು ? ಎ೦ದು ತಿಳಿಯುವ ಕುತೂಹಲ-ನಮಗೆ, ಗುರುಮನೆಯ ಚಟುವಟಿಕೆಗಳನ್ನು ತಿಳಿದು ಅರಮನೆಗೂ ಪುಣ್ಯಪ್ರಾಪ್ತಿಯಾಗ್ತದೆ.”
      ನೀರವತೆ. ಹೇಪಾಟ್ ನ ದವಡೆಯ ಮೂಳೆಗಳು ವಿುಸುಕಿದುವು. ಆತ ಮಹಾರಾಣಿಯಿಂದ ಮೊದಲ್ಗೊಂಡು ಎಲ್ಲರ ಮುಖಗಳನ್ನೂ ಒಂದೊಂದಾಗಿ ದಿಟ್ಟಿಸಿದ. ಕಡೆಯಲ್ಲಿ, ಅವನತಶಿರವಾಗಿ ತನ್ನ ಪಾದಗಳನ್ನು ನೋಡಿದ. 'ಮಹಾ ಅರ್ಚಕ ಕಕ್ಕಾವಿಕ್ಕಿಯಾಗಿದ್ದಾನೆ .ಧಾರ್ಮಿಕ ಜೆಜ್ನಾಸೆಯ ಬುರುಡೆ ಈಗ ಬಯಲಾಗ್ತದೆ' ಎ೦ದು ಪೆರೋ___ಆಮಾತ್ಯರಿಬ್ಬರೂ  ಮನಸ್ಸಿನಲ್ಲಿ ಸಂತಸ ಪಡುತ್ತಿದ್ದಂತೆಯೇ ಹೇಪಾಟ್ ಸರಕ್ಕನೆ ತಲೆ ಎತ್ತಿ, ಪೆರೋನನ್ನು ನೇರವಾಗಿ ದಿಟ್ಟಿಸಿ ನುಡಿದ :
         ಧಾರ್ಮಿಕ ಜಿಜ್ಞಾಸೆ ನಡೆದೇ ಇಲ್ಲ ಅಂತ ಭಾವಿಸುವ ವ್ಯಕ್ತಿಗಳು ಇರ ಬಹುದು. ಅಂಥವರನ್ನು ದೇವರು ಕ್ಷಮಿಸಲಿ. ಐಗುಪ್ತ ಜನತೆಯ ವಿಚಾರ ಸರಣಿಯಲ್ಲೇ ಬದಲಾವಣೆ ಉಂಟುಮಾಡುವಂಥಾದ್ದು ಈ ಜಿಜ್ಞಾಸೆ. ನಮ್ಮ ಸಮಾಜ ಅಸ್ತಿತ್ವಕ್ಕೆ ಬಂದು ಎಷ್ಟೋ ಸಹಸ್ರ ವರ್ಷ ಸಂದಿದೆ. ಜೀವನ ಸುಗಮವಾಗಬೇಕಾದರೆ ಧಾರ್ಮಿಕ ವಿಚಾರಗಳಲ್ಲಿ ಸೂಕ್ತ ಸುಧಾರಣೆಗಳನ್ನು ಮಾಡ್ಬೇಕು.”
        ಅಮಾತ್ಯ ಪೆರೋನ ಕಡೆಗೊಮ್ಮೆ ನೋಡಿ, ನಡುವೆ ಬಾಯಿ ಹಾಕಿದ :
        “ಪ್ರಾಚೀನ ಕಟ್ಟು ಕಟ್ಟಳೆಗಳನ್ನು  ಬದಲಾಯಿಸಬೇಕೂ೦ತ ಮಹಾ ಅರ್ಚಕರ ಅಭಿಮತವಾ ? ಹಾಗೆ ಮಾಡಿದರೆ ಜನರಲ್ಲಿ  ಕ್ಷೋಭೆ ಉಂಟಾಗ ಬಹುದಲ್ಲ ?”
        ಆಮೆರಬ್ ನತ್ತ ತಿರುಗದೆ ಪೆರೋನನ್ನೇ ನೋಡುತ್ತ,  ಧ್ವನಿಯಲ್ಲಿ ವ್ಯ೦ಗ್ಯ  ಬೆರೆಸುತ್ತ, ಹೇಪಾಟ್ ಅಂದ ;
         “ಆಮಾತ್ಯರು ಐಗುಪ್ತದ ಅತ್ಯಂತ ಹಿರಿಯ ಆಡಳಿತಾಧಿಕಾರಿ ;ಅರಸನ ಕಣ್ಣು ಕಿವಿ: ರಾಜನ ಹೃದಯವನ್ನು ಮುದಗೊಳಿಸುವ ಸಂದೇಶವಾಹಕ; ಅರಸನ ಮುದ್ರಾಧಾರಕ; ಏಕಮಾತ್ರ ಸಂಗಾತಿ----ಇಂಥ ಮಹಾನುಭಾವನಿಗೆ