ಪುಟ:Mrutyunjaya.pdf/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

        ಅಸ್ಸೀರಿಯದ ಪರಮಸುಂದರಿಯೊಬ್ಬಳ ಕೇಶರಾಶಿ. ಇದನ್ನು ತಯಾರಿಸಿದವನು ಈ ಕಲೆಯಲ್ಲಿ ಅತ್ಯಂತ
       ನಿಷ್ಣಾತ. ಜಗತ್ತಿನಲ್ಲೇ ಅಪ್ರತಿಮ. ಸೆಡ್ ಉತ್ಸವ ದಲ್ಲಿ ಕೇಶಕವಚದ ಮೇಲೆ ಕಿರೀಟ ಧರಿಸ್ತೀರೀಂತ, ಹೋದ
       ಸಲ ನಾನು ಇಲ್ಲಿದ್ದಾಗ ಗೊತ್ತಾಯ್ತು, ಹೋಗ್ತಾ ಆ ಕುಶಲ ಕರ್ಮಿಗೆ ಹೇಳಿ ಹೋದೆ. ಅವನೇನೋ ಸಕಾಲದಲ್ಲಿ 
      ಸಿದ್ಧಪಡಿಸಿದ. ಆದರೆ ನಾನು ಬ್ಯಾಬಿಲನಿನಲ್ಲಿ ತಿಂಗಳಿಗೂ ಹೆಚ್ಚು ಕಾಲ ನಿಲ್ಲಬೇಕಾಯಿತು. ಈ ಕವಚ್ಚಕ್ಕೆ 
      ಅದೃಷ್ಟವಿಲ್ಲ, ಸೆಡ್ ಉತ್ಸವ ಮುಗಿದಿರ್ತದೆ_____ಅಂದ್ಕೊಂಡೇ ಬಂದೆ. ಆದರೆ ನನ್ನ ಪುಣ್ಯ. ಮಹಾ 
      ಅರ್ಚಕರ  ಕೃಪೆಯಿಂದ ಸಕಾಲದಲ್ಲೇ ನಾನು ಬಂದ ಹಾಗಾಯ್ತು !”
      “ಹಹ್ಹ ! ಎಲ್ಲರ ಮೇಲೂ ಮಹಾ ಅರ್ಚಕರ ಕೃಪೆ ಇರೋದರಿಂದಲೇ ನಾವು ಇವತ್ತು ಇಷ್ಟು ಪ್ರಸನ್ನರಾಗಿದ್ದೇವೆ.”
      “ಎಲ್ಲ ಸುಖಾಂತವಾಯಿತಲ್ಲ, ನೀರಾನೆ ಪ್ರಾಂತದ ದೆಸೆಯಿಂದ ತೊಂದರೆ ಯಾಗಲಿಲ್ಲವಲ್ಲ...."
      "ನೀರಾನೆ ಪ್ರಂತ ? ಹ್ಞ... ಸಮಸ್ಯೆಗಳೆಲ್ಲ ಬಗೆಹರೀತವೆ. ಅದು ರಹಸ್ಯ”
      “ಸಹಜವೇ. ಆಭರಣಗಳನ್ನು ತರ್ತೇನೆ ಅಂದಿದ್ದೆನಲ್ಲ? ನೋಡ್ತೀರಾ?”
      “ಹುಂ, ಹುಂ.”
     ಪೆಟಾರಿಯನ್ನು ತೆರೆಯಲೆಂದು ಬಾಗಿದಾಗ ಕೆಫ್ಟುವಿನ ಗಡ್ಡ ಅವನ ಹರವಾದ ಎದೆಯನ್ನು ಸವರಿತು.
     ಮಹಾರಾಣಿ ಅದನ್ನೂ ಅವನ ಮೇಲುದವನ್ನೂ ದಿಟ್ಟಿಸಿದಳು.
      ಸೊಂಟಪಟ್ಟಿ, ತೋಳುಬಂದಿಗಳು, ಕಿರೀಟ ಪ್ರತಿಯೊಂದೂ ರತ್ನಖಚಿತ. ಛಾವಣಿಯ ಜಾಲಂದ್ರದಿಂದ ಒಳಕ್ಕೆ
    ನುಸುಳಿದ್ದ ಸೂರ್ಯ ಕಿರಣಗಳು ಆಭರಣಗಳ ಮೇಲೆ ಬಿದ್ದು, ಅವು ಝಗಝಗಿಸಿದುವು. ಕೆಫ್ಟು ಕಿರೀಟವನ್ನೆತ್ತಿ 
    ಕೇಶಕವಚದ ಮೇಲ್ಗಡೆಗೆ ತಂದು, ರಾಣಿಯ ಮುಖ ನೋಡಿದ. ನೆಫರ್ ಟೀಮ ಗಂಭೀರವಾಗಿರಲು ಯಾವ
    ಪ್ರಯತ್ನವನ್ನೂ ಮಾಡಲಿಲ್ಲ, ಅವಳ ಅಂಗೈಗಳು ಪರಸ್ಪರ ಹೆಣೆದುಕೊಂಡು ವಕ್ಷಸ್ಥಲದ ಮೇಲೆ ವಿರಮಿಸಿದುವು.
   “ಮೌಲ್ಯ ಮೂರು ಸಹಸ್ರ ದೆಬೆನ್ ಬಂಗಾರ, ಮಹಾರಾಣಿ.”
   “ಬೊಕ್ಕಸದಿಂದ ಈಗಲೇ ಕೊಡಿಸ್ಲಾ ?”