ಪುಟ:Mrutyunjaya.pdf/೪೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮೬ ಮೃತ್ಯುಂಜಯ ಹರಿಯಿತು. (ಏಕಕಾಲದಲ್ಲೇ ಮಹಾರಾಣಿಗೂ ಅದೇ ಬಗೆಯ ಅಲಂಕಾರ--ಮಹಾಮಂದಿರದ ದೇವಸೇವಿಕೆಯರಿಂದ.) ಕೇಶಕವಚಗಳು, ಕೂದಲಿನ ಕರಿದು ಮಿರಮಿರನೆ ಮಿರುಗಿತು. ಮೊದಲು ಪೆರೋಗೆ, ಅನಂತರ ರಾಣಿಗೆ, ಮಹಾ ಅರ್ಚಕ ರತ್ನಖಚಿತ ಸ್ವರ್ಣ ಕಿರೀಟಗಳನ್ನು ತೊಡಿಸಿದ. ರಾಜಲಾಂಛನಗಳಾದ ಕೊಂಡಿಕೋಲು ಅಡಕತ್ತರಿಗಳನ್ನು ಅರಸನ ಕೈಗಿತ್ತ .ಆತ ಅವನ್ನು ಎದೆಗಳ ಮೇಲೆ ಒಂದಕ್ಕೊಂದು ಅಡ್ಡವಾಗಿ ಹಿಡಿದ.

                        ಮಹಾಮಂದಿರದ ಹೊರಗೆ ಜನಜಂಗುಳಿ ಜಯಕಾರ ಮಾಡಿತು. 
                         "ಓ ಮಹಾಪ್ರಭು ! ಓ ಮಹಾರಾಣಿ!"

ಗರ್ಭಗುಡಿಯ ಮಗ್ಗುಲು ಬಾಗಿಲಿನಿಂದ ಕಿರಿಯ ದೇವಸೇವಕನೊಬ್ಬ ಎಳೆಯದೊಂದು ಕುರಿಯನ್ನು ಹೊತ್ತು ತಂದ.ಇನ್ನೊಬ್ಬ ದೇವರ ಕತ್ತಿ ಎತ್ತಿ ಅದರ ಕೊರಳು ಕುಯ್ದು ಸದ್ದಡಗಿಸಿದ. (ಭೇರಿಯ ಭೋರ್ಗರೆತ.) ಕರುಳನ್ನು ಬಗೆದು ತೆಗೆದು ಬಂಗಾರದ ತಟ್ಟೆಯಲ್ಲಿಟ್ಟ. ಹೇಪಾಟ್ ಅಂದ: "ಓ ಅರಸ !ಮಹಾದೇವನಿಗೆ ಅರ್ಪಿಸುವುದಕ್ಕೆ ಮುನ್ನ ನೈವೇದ್ಯವನ್ನು ಪರೀಕ್ಷಿಸಿ!"

ಪೆರೋ ಬಾಗಿ ತಟ್ಟಿಯಲ್ಲಿದ್ದ  ಕುರಿಕರುಳನ್ನು ದಿಟ್ಟಿಸಿದ.

ಮುಂದೆ, ಅರಸನ ಪರವಾಗಿ ದೇವರಿಗೆ ಮೆದುಶಿಲೆಯ ಹೂಜೆಗಳಲ್ಲಿ ತಂದಿದ್ದ ದ್ರಾಕ್ಷಾಸುರೆ ಖಾದ್ಯತೈಲ ಮತ್ತು ಸುಗಂಧ ದ್ರವ್ಯಗಳ ಅರ್ಪಣೆ. ಹೇಪಾಟ್ ಗಂಭೀರವಾಗಿ ದೇವತಾಮೂರ್ತಿಯ ಎದುರು ನಿಂತ. ಭೇರಿಗಳು ಮೌನ ತಳೆದು ತಂತೀವಾದ್ಯಗಳಿಗೆ ಎಡೆ ಮಾಡಿಕೊಟ್ಟವು. ನೀರವತೆಯಿಲ್ಲಿ ಮಹಾ ಅರ್ಚಕನ ಧ್ವನಿ ಮೆರೆಯಿತು: “ನಮ್ಮ ಅಸಮಾನ ಪ್ರಭುವಿನ ಬಯಕೆಗಳೆಲ್ಲ ಈಡೇರಲಿ ಎನ್ನುವುದೆ ಮಹಾದೇವನಲ್ಲಿ ನಮ್ಮ ಪ್ರಾರ್ಥನೆ, ಮಹಾ ಕುರುಬನ ಕರ್ತವ್ಯಪಾಲನೆಯಲ್ಲಿ ಕೆಲವೊಮ್ಮೆ ಲೋಷದೋಷಗಳಾದರೆ, ಅವೆಲ್ಲ ಕ್ಷುದ್ರ ಅಧಿಕಾರಿಗಳ ಹೊಣೆ ಗೇಡಿ ವರ್ತನೆಯ ಫಲ, ದುರ್ಬಲ ಆಡಳಿತಗಾರರಿಗೆ ಸೆತ್ ನ ಆರಾಧನೆಯೂ ಸಹ್ಯವಾಗ್ತದೆ. ಅರಸನಿಗಿದಿರಾದ ಬಂಡಾಯವೂ ಚಿಲ್ಲರೆ ವಿಷಯವಾಗ್ತದೆ.