ಪುಟ:Mrutyunjaya.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯು೦ಜಯ ೪೫ ಆದರೆ ಕರಡಿ ಹುಡುಗಿ........ ಮೆನೆಪ್ ಟಾ ಸಣ್ಣನೆ ನಕ್ಕ. ಬೆಳಗ್ಗೆ, ಎಲ್ಲರ ಜತೆ ರಾಜಗೃಹಕ್ಕೆ. ಎದ್ದೋಡನೆಯೇ ನೆಫಿಸ್ ಗೆ ಈ ವಿಷಯ.... ಪ್ರಾಂತಪಾಲ ಗೇಬುವಿನ ಪತ್ನಿ ತನ್ನ ಮನೂವರು ಹೆಣ್ಣು ಮಕ್ಕಳೊಡನೆ ತನ್ನೂರಾದ ಲಿಷ್ಟಿಗೆ ಹೋಗಿದ್ದಳು. ರಾಜಗೃಹದಲ್ಲಿ ಆತಿಥ್ಯಕ್ಕೆ ಸ೦ಬ೦ದಿಸಿ ದಾಸದಾಸಿ ಜನರದೇ ದುಡಿಮೆ, ಅವರದೇ ಉಸ್ತುವಾರಿ. ಊರವರು ಮನವಿ ಸಲ್ಲಿಸಲು ಬರುವರೆಂಬ ಸುದ್ದಿ ಗೂಢಚಾರರ ಮೂಲಕ ಪ್ಲಾಂತಪಾಲ ಗೇಬುಗೆ ಬೆಳ್ಳಿಗೆಯೇ ತಿಳಿದಿತ್ತು. ಪ್ರಾಂತದಲ್ಲಿ ಪೆರೋನ ಆಡಳಿತ ಸುಸೂತ್ರವಾಗಿ ನದೆಯುವ೦ತೆ ನೋಡಿಕೊಳ್ಳುವುದು ಪಾಂತಪಾಲನ ಜವಾಬುದಾರಿ, ಐಗುಪ್ತ ದೇಶದಲ್ಲಿ ಅಂಥವರು ನಾಲ್ವತ್ತು ಜನ, ಪ್ಯಾಂತಕ್ಕೊಬ್ಬರಂತೆ.ಕ೦ದಾಯದ ಅಧಿಕಾರಿಗಳಾದರೋ ಇಡೀ ದೇಶದಲ್ಲಿ ಮೂವರು, ಆ ಕಾರಣದಿಂದ,ಪ್ರಾ೦ತಪಾಲನಿಗಿ೦ತ ಮೇಲಿನದು ಕಂದಾಯ ಅಧಿಕಾರಿಯ ಅಂತಸ್ತು, ಗೇಬು ಗೂಢಚಾರರಿಂದ ಕೇಳಿ ಅರಿತು ದನ್ನು ಕ೦ದಾಯದ ಅಧಿಕಾರಿ ಟಿಹುಟಗೆ ತಿಳಿಸಿದ, ಉಪ್ಪರಿಗೆಯಲ್ಲಿ ಉಪಹಾರ ಸ್ವೀಕರಿಸುತ್ತಿದಾಗ. ಟಿಹುಟಿಗೆ ಸಿಟ್ಟು ಬ೦ತು. ರೊಟ್ಟಿಯ ಚೂರನ್ನೂ ಒಣ ಮಾ೦ಸದ ತುಣುಕನ್ನೂ ಒಟ್ಟಿಗೆ ಜಗಿಯುತ್ತಿದ ಆತ, ತುತ್ತು ನುಂಗಿದ ಮೇಲೆ ದ್ರಾಕ್ಷಾ ಸುರೆಯನ್ನಿಷ್ಟು ಕುಡಿದು,ನೆತ್ತಿಯಿ೦ದ ಗು೦ಗುರು ಗು೦ಗುರಾಗಿ ಇಳಿದಿದ್ದ ತಲೆಗೂದಲನ್ನು ಝಾಡಿಸಿ,ಧ್ವನಿ ಏರಿಸಿ ನುಡಿದ: “ ಗೇಬು, ಯಾವ ಹೊತ್ತಿನಲ್ಲಿ ಏನು ಹೇಳ್ಳೆಕು ಅನ್ನೋದು ನಿಮಗೆ ತಿಳೀದು." ಗೇಬುಗೆ ಅರ್ಥವಾಗಲಿಲ್ಲ ಆದರೂ ಧ್ವನಿ ತಗ್ಗಿಸಿ, "ಕ್ಷಮಿಸಿ,"ಅ೦ದ. “ಕ್ಷಮಿಸಿ ನಿಮ್ಮ ತಲೆ! ಉಪಾಹಾರ ಮುಗಿಯೋತನಕ ಕಾದಿದ್ರೆ ಏನಾಗ್ರಿತ್ತು ? ನಾನು ಹೇಳ್ತೀನೆ ಗೇಬು. ನಿಮ್ಮ ಆಡಳಿತದಲ್ಲಿ ಬಿಗಿ ಇಲ್ಲ. ರೈತರಿಗೆ,ಕುಶಲ ಕಾರ್ಮಿಗಳಿಗೆ ಸಲಿಗೆ ಕೊಟ್ಟಿದ್ದೀರಿ. ಇವರೆಲ್ಲ ಮನವಿ