ಪುಟ:Mrutyunjaya.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪

ಮೃತ್ಯು೦ಜಯ

"ಕರಡಿ ಹೋಗಿ....."
ಮೆನೆಪ್ಟಾ ನಕ್ಕು ಅವಳ ಬಾಯಿ ಮುಚ್ಚಿಸಿದ.
ಯಾತ್ರೆಯ ದಣಿವು ಸುಳ್ಳು.ಇದು ನಿಜ....
....ನೆಫಿಸ್ ಪರಮ ಸುಖಿ. ಬರಿಮೈಯಲ್ಲೆ ಆಕೆ ನಿದ್ದೆ ಹೋದಳು.
ಜಾಲಂದ್ರದ ಮತ್ತು ಬಾಗಿಲಿನ ಸ೦ದಿಗಳಿ೦ದ ಸಣ್ಣನೆ ಗಾಳಿ ನುಸುಳಿ
ಬ೦ತು. ಇದು ಇರುಳು ಕಳೆದ೦ತೆ ಚಳಿಯು೦ಟು ಮಾಡುವ ತ೦ಗಾಳಿ.
ಮೆನೆಪ್ಟಾ ಎದ್ದ. ಮನೆಯ ಹಿ೦ಬದಿಗೆ ಹೋಗಿ ಬ೦ದ.ಸೆಣಬು
ಬಟ್ಟೆಯ ಹಚ್ಚಡ ಬಿಡಿಸಿ, ನೆಫಿಸ್ಗೆ ಹೊದಿಸಿ, ತಾನೂ ಅದರೊಳಗೆ
ಸೇರಿಕೊ೦ಡ.ಕಾವು ಆರಿದ್ದರೂ ಜತೆಗಾತಿಯ ಮೈ ಸ್ಪರ್ಶ ಹಿತಕರವಾಗಿತ್ತು....
ರಾಮೆರಿಪ್ಟಾ ಹುಟ್ಟಿದ ಮೇಲೆ ಬಸಿರು ನಿ೦ತಿರಲಿಲ್ಲ. ಈಗ, ಐಸಿಸ್ ದೇವತೆಯ
ಕೃಪೆಗೆ ಪಾತ್ರರಾಗಿ ಅಬ್ಟುವಿನಿಂದ ಮರಳಿದ ಬಳಿಕ........ ? ಮೆನೆಪ್ಟಾ
ಮಡದಿಯ ಕಿಬ್ಬೊಟ್ಟೆಯನ್ನು ಮುಟ್ಟಿದ. ಮೆಲ್ಲನೆ ಸವರಿದ. ನೆಫಿಸ್ಗೆ
ಎಚ್ಚರವಾಗಲಿಲ್ಲ. ಇಂಥ ರಾತ್ರೆಗಳಲ್ಲಿ, ಅವಳು ಹಿತ್ತಿಲ ಕಡೆ ಹೋಗಿ ಬಂದು
ಅದೂ ಇದೂ ಮಾತನಾಡುತ್ತ ಮಲಗುವುದು ಪದ್ಧತಿ.ಆದರೆ ಇ೦ದು ಅವಳಿಗೆ
ಗಾಢ ನಿದ್ದೆ.
ಕಳೆದ ಎರಡು ದಿನಗಳಲ್ಲಿ ಒಮ್ಮಿ೦ದೊಮ್ಮೊಲೆ ತಾನು ಬೆಳೆದಿದ್ದೇನೆ___
ಎಂಬ ಭಾವನೆ ಮೆನೆಪ್ಟಾಗೆ. ಯಾಕೆ ಹಾಗೆ___ಎಂದರೆ, ಉತ್ತರ ಕಷ್ಟ.
ಏಳು ವರ್ಷ ಹಿ೦ದೆ ನೆಫಿಸ್ಳನ್ನು ಮದುವೆಯಾದಾಗಲೂ ಹೀಗೆಯೇ
ಅನಿಸಿತ್ತು.
ಒಲವು, ಆಸೆ, ತೃಪ್ತಿ....ತಾನು ತನ್ನ ಸಂಸಾರದ ಸಂರಕ್ಷಕ....
ನೆರೆಮನೆಯ ಸ್ನೊಫ್ರು ನುಡಿದಿದ್ದ:
"ನ್ಯಾಯ ಸಮ್ಮತವಾಗಿ ನಡಕೊಳ್ಳಿ; ಸುಮ್ನೆ ಸುಲೀಬೇಡಿ____
ಅ೦ತ ಕ೦ದಾಯ ಅಧಿಕಾರಿಗೆ ಹೇಳ್ಬೆಕು. ನಮ್ಮ ಸ೦ಕಟ ತೋಡ್ಕೋಬೇಕು.
ಪ್ರಾ೦ತಪಾಲನ ಎದುರಲ್ಲೇ....ನಮ್ಮಲ್ಲಿ ಬಹಳ ಜನರ ಅಭಿಪ್ರಾಯ ಇದು.
ನೀನು ಬರಬೇಕು ಮೆನೆಪ್ಟಾ.ನೀನೇ ಮು೦ದೆ ಇರ್ಬೇಕು.ನೀನು ಯೋಚಿಸಿ
ಮಾತಾಡ್ತೀಯಾ. ಸರಿಯಾಗಿ ವಾದಿಸ್ತೀಯಾ...."
ಊಟಕ್ಕೆ ಕುಳಿತಾಗ ನೆಫಿಸ್ಗೆ ಇದನ್ನು ತಿಳಿಸಬೇಕಿತ್ತು.