ಪುಟ:Mrutyunjaya.pdf/೫೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮೃತ್ಯುಂಜಯ

೫೬೩

ದಿಡ್ಡಿಯಾಗಿ ಹರಡಿದ್ದುವು. ತೊಲೆಗೆ ಕಟ್ಟಿದ್ದ ನೀಳ ಹಗ್ಗದ ತುದಿಯಿಂದ
ತುಣುಕು ಬಲೆಯಲ್ಲಿ ಸುತ್ತಿದ್ದ ರುಂಡ ತೂಗುತ್ತಿತ್ತು. ಮುಖವನ್ನು ಮರೆ
ಮಾಡಿತ್ತು ಕೆದರಿದ ತಲೆಗೂದಲು.
ಅದು ಸೆಡ್ ಉತ್ಸವದ ಮಾರನೆಯ ರಾತ್ರೆ. ಪ್ರವೇಶ ಗೋಪುರಕ್ಕೆ
ವಿಶೇಷ ದೀಪಾಲಂಕಾರವಿರಲಿಲ್ಲ. ಎಂದಿನ ಪಂಜುಗಳಷ್ಟೇ ಪ್ರಾಕಾರದಲ್ಲಿ ಉರಿ
ಯುತ್ತಿದ್ದುವು. ఆ ದೀಪಗಳ ಮಬ್ಬು ಬೆಳಕಿನಲ್ಲಿ, ಜೋತಾಡುತ್ತಿದ್ದ ರುಂಡ,
ಮುಂಡ, ಅವಯವಗಳು ಭೀಕರವಾಗಿ ಕಂಡುವು.
ರಾಜವೀಧಿಯಲ್ಲಿ ಜನರು ಗುಂಪುಕಟ್ಟಿ ಬಂದು, ಅರಮನೆಯ ಎಡಬಲದ
ಮಾರ್ಗಗಳಲ್ಲಿ ಚೆದರಿ ಹೋಗುತ್ತಿದ್ದರು. ಹಲವರು ಛೇದಿತ ಶವವನ್ನು ನೋಡಿ
ತಲೆತಗ್ಗಿಸಿ ಹೋದರು. ಕೆಲವರು “ಮೆನೆಪ್ ಟಾ” ಎಂದು ಪರಿಹಾಸ್ಯದ ಧ್ವನಿ
ಯಲ್ಲಿ ಹೆಸರನ್ನು ಉಚ್ಚರಿಸಿ, ಮುಂದೆ ಸಾಗಿದರು.
ಜನಸಂದಣಿ ಇದ್ದಷ್ಟೂ ಹೂತ್ತು ಯೋಧರ ತಂಡ ಪ್ರವೇಶದ್ವಾರದ
ರಕ್ಷಣೆಗೆ ನಿಂತಿತು, ಬರಬರುತ್ತ ಜನರ ಓಡಾಟ ಕಡಿಮೆಯಾಯಿತು. ಯೋಧರು
ಅರಮನೆಯ ಆವರಣದೊಳಕ್ಕೆ ತೆರಳಿದರು. ಉಳಿದವರು, ಸಾಮಾನ್ಯ ದಿನ
ಗಳಲ್ಲಿ ಇರುವಂತೆ, ಇಬ್ಬರೇ. ಕಾವಲು ಭಟರು. ಬೇರೆ ದಿನವಾಗಿದ್ದರೆ__
ರಾತ್ರೆಯಾಗಿದ್ದರೆ-ಪ್ರಜೆಗಳು అಷ್ಟು ಬೇಗನೆ ಮನೆಗಳಿಗೆ ಮರಳುತ್ತಿರಲಿಲ್ಲ.
ಈ ರಾತ್ರಿ ಚಾಪೆಗಳೂ ಮಂಚಗಳೂ ಅವರನ್ನು ಕರೆಯುತ್ತಿದುವು.
ಆದರೆ ಉತ್ಸವ ನೋಡಲೆಂದು ಪರವೂರುಗಳಿಂದ ಬಂದಿದ್ದವರಲ್ಲಿ ಅರ್ಧ
ದಷ್ಟು ಜನ ಇನ್ನೂ ರಾಜಧಾನಿಯಲ್ಲಿದ್ದರು. ಉದ್ಯಾನದಲ್ಲಿ ನದೀತಟದಲ್ಲಿ,
ಬೀದಿ__ಕೇರಿಗಳಲ್ಲಿ. ನಾಗರಿಕರ ಮನೆಗಳ ಹಿತ್ತಲ ಗೋಡೆಗಳ ಮರೆಯಲ್ಲಿ.
ಕಟ್ಟಿ ತಂದಿದ್ದ ಬುತ್ತಿಯನ್ನು, ಅದರಲ್ಲಿ ಉಳಿದುದನ್ನು ಮೆದ್ದು ನಿದ್ದೆ ಹೋಗ
ಬೇಕು. ಬೆಳಗಿನ ಜಾವವೋ ಮಾರನೆಯ ದಿನವೋ ಹೊರಡಬೇಕು__ತಮ್ಮ
ದೋಣಿಗಳಲ್ಲಿ ಇಲ್ಲವೆ ಕತ್ತೆಗಳ ಮೇಲೆ ಕುಳಿತು.
ರಾಜವೀದಿಯ ಹಾಗೂ ಪಕ್ಕದ ರಸ್ತೆಗಳ ಮುಗ್ಗುಲುಗಳಲ್ಲಿ ಕತ್ತಲಿನ
ಮರೆಯಲ್ಲಿ ಅಂಥ ಜನರಿದ್ದರು. ನೀರಾನೆ ಪ್ರಾಂತದವರೂ ಇದ್ದರು. ಹೆಪ್ಪು
ಗಟ್ಟಿದ ಶೋಕದ ಭಾರದಿಂದ ಬಾಗಿದವರು అಳಿದವನ బంಧುಗಳು.