ಪುಟ:Mrutyunjaya.pdf/೬೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

ಬಿಕ್ಕಿ ಅಳತೊಡಗಿದಳು ಅಹೂರಾ, ಔಟ, ಬೆಕ್ "ಹೋ" ಎಂದು
ರೋದಿಸಿದರು. "ಅಯ್ಯೋ ! ಅಯ್ಯೋ ! " ಎಂದು ಬಟಾ ಎದೆಗೆ ಹೊಡೆದು
ಕೊಂಡ.
ಕಣ್ಣೀರು ಸುರಿಸುತ್ತ , ಮೂಗಿನಿಂದ ಹರಿಯುತ್ತಿದ್ದುದನ್ನು ಒದೆಸಿ ಎಸೆ
ಯುತ್ತ ಮೆನ್ನ ಅಂದ :
"ಸತ್ತವನ ಹೆಸರು ಹೇಳ್ತಾ ಎಲ್ಲರೂ ಅತ್ಬಿಡಿ. ಅದರಿ೦ದ ಅವನಿಗೂ
ಒಳ್ಳೇದು, ನಮಗೂ ಒಳ್ಳೇದು."
"ಓ ಮೆನೆಸ್ ಟಾ, ಓ ಮೆನೆಸ್ ಟಾ." ಎಂದ ಒಬ್ಬ.
ಉಳಿದವರು ಪುನರುಚ್ಚರಿಸಿದರು.
ಮೆನ್ನ ನುಡಿದ :
"ಓ ಒಸೈರಿಸ್ ಓ ಒಸೈರಿಸ್..."
ಶೋಕಧ್ವನಿಯಲ್ಲಿ ಜನರೆ೦ದರು :
"ಓ ಒಸೈರಿಸ್ ಓ ಒಸೈರಿಸ್."
ಮತ್ತೆ ಮತ್ತೆ ನಾಮೋಚ್ಚಾರ.
ಆವರೆಗೆ, ಎದೆಯ ಮೇಲೆ ಭಾರದ ಅನುಭವ.
ನಿರಾತ೦ಕವಾಗಿ ಕ೦ಬನಿ ಹರಿದ ಮೇಲೆ, ಎಲ್ಲರಿಗೂ ಸಮಾಧಾನ.
ರಾಮೆರಿಸ್ ಟಾನ ತುಟಗಳು ಚಲಿಸಿದುವು...ಆದರೆ
ಕಣ್ಣುಗಳ ಒದ್ದೆಯಾಗಲಿಲ್ಲ.
ಈ ಹುಡುಗ ಹೀಗಿರಬಾರದು, ಅಳಬೇಕು-ಅಳಬೇಕು ಎಂದು ಬಟಾನ
ಮನಸ್ಸು ಗೋಳಾಡಿತು.
ಮೆನೆಪ್ ಟಾನ ಶವವನ್ನೆತ್ತಿ ದೋಣಿಯಲ್ಲಿ ಮಲಗಿಸಿದರು. ಬಟಾ ಬಟ್ಟೆ
ಯನ್ನು ಕತ್ತಿನವರೆಗೂ ಹೊದಿಸಿದ. ಪುಟ್ಟದೊ೦ದು ಮಡಕೆಯಲ್ಲಿ ಕೆ೦ಡ
ಗಳನ್ನಿರಿಸಿ ಅಹೂರಾ ದೋಣಿಯೊಳಕ್ಕೆ ತ೦ದು ಅದಕ್ಕಿಪ್ಟು ಧೂಸದ ಪುಡಿ
ಸುರಿದು, ಶವದ ಪಾದಗಳ ಬಳಿ ಇರಿಸಿದಳು. ಸುಗ೦ಧಧೂಮ ಅಲೆಆಲೆಯಾಗಿ
ಮೇಲೆದ್ದಿತು. ಸ೦ಗಡಿಗರೆಲ್ಲ ದೋಣಿ ಹತ್ತಿದರು.
"ಖ್ನೆಮ್ ಹೊಟೆಸ್ ಇಲ್ಲಿ ಇದ್ದಿದ್ದರೆ ಶಿಸ್ತು-ಶಿಸ್ತು-ಅನ್ತಿದ್ದ,"ಎಂದ
ಬಟಾ