ಪುಟ:Mrutyunjaya.pdf/೬೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪೪

ಮೃತ್ಯುಂಜಯ

ಹೇಳಿದೆ :'ನ್ಯಾಯ ಸಮ್ಮತವಾಗಿ ನಡಕೊಳ್ಳಿ, ಸುಮ್ನೆ ಸುಮ್ನೆ ಸುಲೀಬೇಡಿ__
ಅಂತ ಕಂದಾಯ ಅಧಿಕಾರಿಗೆ ಹೇಳೋಕು, ನಮ್ಮ ಸಂಕಟ ತೋಡ್ಕೊಬೇಕು....
ನಮ್ಮಲ್ಲಿ ಬಹಳ ಜನರ ಅಭಿಪ್ರಾಯ ಇದು. ನೀನು ಬರಬೇಕು. ಮೆನೆಪ್‌ಟಾ....
ನೀನೇ ಮುಂದೆ ಇರಬೇಕು. ನೀನು ಯೋಚಿಸಿ ಮಾತಾಡ್ತೀಯಾ. ಸರಿಯಾಗಿ
ವಾದಿಸ್ತೀಯಾ ....? ....“ಹೂಂ, ಅಂದ, ಮಾರನೇ ದಿವಸ ಯೋಚಿಸಿ ಮಾತ
ನಾಡಿದ, ಸರಿಯಾಗಿ ವಾದಿಸಿದ....ನಮ್ಮ ನಾಯಕನಾದ. (ಬಿಕ್ಕುತ್ತ) ನನ್ನ
ನೆರೆಯವನು ಬಹಳ ಎತ್ತರಕ್ಕೆ ಹೋದ....(ತಡೆತಡೆದು)....ಹಿಂದೆ ವರ್ತಕ
ಕಪ್ಪು ಬಂದಾಗ, ಹೊಸ ಸಾಧ್ಯತೆಗಳ ಸುಂದರ ದ್ವೀಪವನ್ನು ಮಸಕು ಮಸಕಾಗಿ
ಕಂಡ ಹಾಗಾಯ್ತು ನನಗೆ, ಆದರೆ ಈಗ, ಇವತ್ತು........ಇವತ್ತು....(ಅಳು)
ಬೇಡ, ಮಾತಾಡೋದಿಲ್ಲ. ಮಾತಾಡೋದು ನನ್ನಿಂದ ಸಾಧ್ಯವಿಲ್ಲ. ಸೆನು
ಅಣ್ಣ ಹಿಂದೆ ಹೇಳಿದ ಒಂದು ಮಾತನ್ನು ಪುನಃ ಇಲ್ಲಿ ಹೇಳಿ ಮುಕ್ತಾಯ
ಗೊಳಿಸ್ತೆನೆ. (ಧ್ವನಿ ಏರಿಸಿ) ಈಪ್ರಾಂತದ ನಾವೆಲ್ಲ ಒಂದೇ ಬುಡಕಟ್ಟಿನವರು.
ಎಲ್ಲರೂ ಒಟ್ಟಿಗೇ ಈಸೋಣ. ಮುಳುಗಿದರೆ ಒಟ್ಟಿಗೇ ಮುಳುಗೋಣ.”
ಆ ಮಾತುಗಳು ಕೇಳಿದವರ ಮನಸ್ಸಿನ ಆಳಕ್ಕೆ ಇಳಿಯುತ್ತಿದ್ದಂತೆ ಬಾ
ಪಕ್ಕಕ್ಕೆ ತಿರುಗಿದ. ಅಲ್ಲಿದ್ದ ತನ್ನ ಹಿರಿಯ ಮಗನಿಗೆ, “ಕಟ್ಟೆಗೆ ಓಡಿ, ದೋಣಿ
ಯಿಂದ ಕೊಳಲು ತಾ,” ಎಂದ. ಹುಡುಗ ದಾರಿ ಬಿಡಿಸಿಕೊಂಡು ಓಡಿದ.
ಜನಸಮುದಾಯ ಒಸೈರಿಸನ ಮನೆಪ್ಟಾನ ನಾಮೋಚ್ಛಾರ ಮಾಡಿದ
ಬಳಿಕ ಮೆನ್ನ ಹೇಳತೊಡಗಿದ:
“ಮನುಷ್ಯನಾಗಿ ಜನಿಸಿದವನು ಮಾಡಬೇಕಾದದ್ದೇನು ? ಭೂಮಿಯ
ಮೇಲಿದ್ದಷ್ಟು ಕಾಲ ನ್ಯಾಯವಾಗಿ ವರ್ತಿಸೋದು. ಮನುಷ್ಯ ಸತ್ತಮೇಲೂ
ಬದುಕಿದ್ದಾನೆ. ಇದು ಐಗುಪ್ತ ಸಮಾಜದ ಕಲ್ಪನೆ. ಭೂಮಿಯ ಮೇಲೆ
ಒಬ್ಬ ವ್ಯಕ್ತಿ ಮಾಡಿದ ಒಳ್ಳೆ ಕೆಲಸಗಳ ಆಧಾರದ ಮೇಲೆ ಅವನ ಮುಂದಿನ
ಬದುಕನ್ನು ಒಸೈರಿಸ್ ತೀರ್ಮಾನಿಸ್ತಾನೆ. ಗುಣವಂತ ಅನಂತಕಾಲ ಜೀವಿಸ
ಬಹುದು. ಅಷ್ಟೇ ಅಲ್ಲ. ಯಾವ ಕೆಡುಕನ್ನೂ ಮಾಡದವನ ದೇವರಾಗಿ
ರಾರಾಜಿಸಬಹುದು.”
ರಾಗವಿಲ್ಲ. ರಂಜನೆ ಇಲ್ಲ. ಆದಷ್ಟು ಸರಳವಾಗಿ ತಿಳಿಯಹೇಳುವ ಯತ್ನ
ಮುಂದುವರಿಸುತ್ತ ಮೆನ್ನನೆಂದ :