ಪುಟ:Mrutyunjaya.pdf/೭೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೯೬

ಮೃತ್ಯುಂಜಯ

ಮೆನ್ನ ಪೆಪೈರಸ್ ಹಾಳೆಗಳನ್ನು ತರಿಸಿಕೊಂಡು, ನೀರಾನೆ ಪ್ರಾಂತದ
ಕ್ರಾಂತಿಯ ಕಥೆಯನ್ನು ಬರೆದ. ಹಾಡುಗಳನ್ನು ರಚಿಸಿದ.
ಕೊಳಲು ಬಟಾನ ಕೈಗಳನ್ನು ಮತ್ತೆ ಅಲಂಕರಿಸಲಿಲ್ಲ. ಆದರೆ ಆತ
ಹೊಸ ಗೀತಗಳ ಹಾಡುಗಾರನಾದ,
ಬಟಾನ ಒಬ್ಬ ಹುಡುಗ ಶಿಲ್ಪಿ ನೆಖೆನ್ನ ನೆಚ್ಚಿನ ಶಿಷ್ಯನಾದ.
ಮೆನೆಪ್ಟಾನ ಮಕ್ಕಳಿಬ್ಬರಿಗೂ ಖೈಮ ಹೊಟೆಪ್ ಶಸ್ತ್ರಾಭ್ಯಾಸ
ಮಾಡಿಸಿದ.
ಆಗಾಗ್ಗೆ ಮೆನ್ನ ಹೇಳಿದ :
“ಕತ್ತಲಾದ ಮೇಲೆ ಬೆಳಕು ಹರಿತದೆ. ಇದು ಸಾಮಾನ್ಯ ಅಂತ
ತೋರುವ ಅಸಾಮಾನ್ಯ ವಿಷಯ. ನೆನಪಿಡಿ.”