ಪುಟ:Mrutyunjaya.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೧

ಎಲ್ಲರ ದೃಷ್ಟಿಗಳೂ ತನ್ನ ತಂದೆಯ ಮೇಲೆ ನೆಟ್ಟಿದ್ದುವೆಂದು
ರಾಮೆರಿಪ್ಟಾನ ಎಳೆಯ ಹೃದಯ ಹಿಗ್ಗಿತು. ಅವನೂ ಅವನ ಓರಗೆಯವರೂ
ನುಸುಳಿಕೊಂಡು ಗುಂಪಿನ ಮುಂದೆ ಸಾಲಾಗಿ ನಿಂತರು.
ಮೆನೆಪ್ಟಾ ಮಾತು ಆರಂಭಿಸುವುದನ್ನೇ ಎಲ್ಲರೂ ಇದಿರು ನೋಡಿ
ದರು. ಅಂಗಳದಲ್ಲಿದ್ದವರಿಗೆ ಕಸಿವಿಸಿ, ತವಕ. ಸಭಾಮಂದಿರದಲ್ಲಿ ಇದ್ದವರಿಗೆ
ಅದಮ್ಯ ಕುತೂಹಲ.
ಒಗೆದ ಶುಭ್ರವಾದ ನಡುಬಟ್ಟೆ. ಅದರ ಮೇಲೆ ಸೊಂಟಪಟ್ಟಿ. ನೀಲಿ
ವರ್ಣದ ಕವಡೆಗಳ ಸರ ಕೊರಳಲ್ಲಿ. ಬೆರಳಲ್ಲಿ ಬೆಳ್ಳಿಯ ಉಂಗುರ. ಮೀಸೆ
ಗಡ್ಡ ಕಂಡೂ ಕಾಣಿಸದಂತೆ ನಯವಾಗಿದ್ದ ಮುಖ.
ಮೆನೆಪ್ಟಾ ಶಾಂತನಾಗಿದ್ದರೂ ಮಾತು ಹೇಗೆ ಆರಂಭಿಸಬೇಕೆಂಬು
ದನ್ನು ಅನೇಕ ಸಲ ಯೋಚಿಸಿದ್ದರೂ ಎದೆಗುಂಡಿಗೆ ಎರಡು ಕ್ಷಣ ಡವಡವನೆ
ಹೊಡೆದುಕೊಂಡಿತು. ಆಳವಾಗಿ ಉಸಿರೆಳೆದು ನಿಧಾನವಾಗಿ ಅದನ್ನು ‌ಬಿಟ್ಟ.
ಅವನು ಮುಗುಳ್ನಕ್ಕ.
"ಪೆರೋ ಪ್ರಭುವಿನ ಆಯುರಾರೋಗ್ಯ ಹೆಚ್ಚಲಿ! ಬಡ ರೈತರು,
ನೆಯ್ಗೆಯವರು, ಕಲ್ಲು_ಗಾರೆ ಕೆಲಸದವರು, ಮರಗೆಲಸದವರು, ಇನ್ನಿತರ
ಬೇರೆ ಬೇರೆ ಕಸಬುದಾರರು ಇವರೆಲ್ಲರ ಪರವಾಗಿ ದೇಶದ ಕಂದಾಯ
‌ಅಧಿಕಾರಿಯ ಸನ್ನಿಧಿಯಲ್ಲಿ ಮನವಿ ಸಲ್ಲಿಸೋದಕ್ಕೆ ನಿಂತಿದ್ದೇನೆ...."
ಮೆನೆಪ್ಟಾ ತಲೆಯನ್ನೊಮ್ಮೆ ತುಸು ಬಾಗಿಸಿದ. ಮತ್ತೆ ನೇರ ನಿಂತು
ನೆರೆದವರನ್ನು ನೋಡಿದ. ಧ್ವನಿ ಏರಿಸದೆ ಮಾತನಾಡುವ ವೈಖರಿ__ದಿಟ್ಟತನ
ಕಂಡು, ಟೆಹುಟಿಗೆ ಆಶ್ಚರ್ಯ. ಬರೆದುಕೊಳ್ಳಬೇಕೆ? ಎಂದು ಕೇಳುವವನಂತೆ
ಇಪ್ಯುವರ್ ವೇದಿಕೆಯತ್ತ ನೋಡುತ್ತಿದ್ದ. ಅಮಾತ್ಯರಿಗೂ ಪೆರೋಗೂ
ತೋರಿಸಲು ಒಳ್ಳೆಯ ದಾಖಲೆಯಾದೀತು ಎನಿಸಿತು ಟೆಹುಟಿಗೆ. ಆತ ಲಿಪಿ
ಕಾರನಿಗೆ, ಬರೆದುಕೋ ಎಂದು ಸನ್ನೆಮಾಡಿದ.
ಇಪ್ಯುವರ್ ನನ್ನೊಮ್ಮೆ ದಿಟ್ಟಿಸಿ ಮೆನೆಪ್ಟಾ ಮುಂದುವರಿದ :
"ಧರ್ಮಾತ್ಮನಾದ ಒಸೈರಿಸ್ ದೇವತೆಯ ಅಂತಿಮಯಾತ್ರೆಯ ದರ್ಶನ
ದಿಂದ ಧನ್ಯರಾಗಿ ನಾವು ನಾಲ್ವತ್ತು ಜನ ಅಬ್ಟುವಿನಿಂದ ನಿನ್ನೆ ರಾತ್ರೆ ವಾಪ
ಸಾದ್ವಿ. 'ದೇವತೆಗಳು ಸಂತೃಪ್ತರಾಗಿದ್ದಾರೆ; ನಗೆಯಲ್ಲಿ ಅಚ್ಚರಿಯಲ್ಲಿ