ಪುಟ:Mrutyunjaya.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦

ಮೃತ್ಯುಂಜಯ

"ಅದು ತಬ್ಬಲಿ ಮಗು. ನನ್ನ ಅಕ್ಕಂದು. ಬಿಟ್ಬಿಡಿ," ಎನ್ನುತ್ತ
ಚಿಕ್ಕಮ್ಮ ತನ್ನ ಗಂಡನ ಬಳಿಗೆ ಧಾವಿಸಿದಳು.
ಭಟರು ಅವಳ ರಟ್ಟೆ ಹಿಡಿದು ತಿರುವಿದರು.
"ಎಲ್ಲಿಟ್ಟಿದೀಯಾ ಧಾನ್ಯ?"
"ಇಲ್ಲಪೋ....ಈ ವರ್ಷ ಇಲ್ಲಪೋ...."
ಅವಳನ್ನೂ ಕೆಡವಿದರು. ಗಂಡನನ್ನೂ ಹೆಂಡತಿಯನ್ನೂ ಒಟ್ಟಿಗೆ ಹಗ್ಗ
ದಿಂದ ಬಿಗಿದರು. ಕೊರಡಿನಿಂದ ಹೊಡೆದರು, ತುಳಿದರು.
ನಡು ಆಕಾಶದಲ್ಲಿತ್ತು ರಾನ ರಥ. ಚಿಕ್ಕಮ್ಮನ ಹಾಗೂ ಮಕ್ಕಳ
ಆಕ್ರಂದನ ಆಕಾಶಕ್ಕೆ ಏರುತ್ತಿತ್ತು.
ಇದ್ದಕ್ಕಿದ್ದಂತೆ ಒಬ್ಬ ಭಟನೆಂದ :
"ಇವನು ಸತ್ತ."
ತೊಡೆಯನ್ನು ತುಳಿದು ನೂಕಿ ಅಂದ :
"ಜೀವ ಇಲ್ಲ."
"ನಡೀರಿ," ಎಂದ ಇನ್ನೊಬ್ಬ.
ಎಲ್ಲಿಯೂ ಕಣ್ಣಿಗೆ ಕಾಣಿಸದಿದ್ದ ರೈತರನ್ನು ಹುಡುಕಿಕೊಂಡು ಅವರು
ಹೊರಟರು. ಚಿಕ್ಕಪ್ಪನಿಗೆ ಏನಾಯಿತೆಂದು ಅರಿತವಳು ನೆಫಿಸ್ ಮಾತ್ರ.
ಆದರೆ ಚಿಕ್ಕಮ್ಮ? ಆಕೆ‌ ಅಳುತ್ತಿಲ್ಲವಲ್ಲ? ಚಿಕ್ಕಮ್ಮನೂ?
"ಅಮ್ಮಾ! ಅಮ್ಮಾ!" ಎಂದು ಕಿರುಚಿದಳು ನೆಫಿಸ್.
ಚಿಕ್ಕ ಮಕ್ಕಳೂ ಕೂಗಿದುವು:
"ಅಮ್ಮಾ! ಅಮ್ಮಾ!"
ಕೆಲ ನಿಮಿಷಗಳ ಬಳಿಕ ಚಿಕ್ಕಮ್ಮ ಕಣ್ಣು ತೆರೆದಳು. ಪ್ರಯಾಸಪಟ್ಟು
ಎದ್ದು ಕುಳಿತಳು. ಹತ್ತಿರ ಬಂದ ಮಕ್ಕಳನ್ನು ತಬ್ಬಿಕೊಂಡು, ಗಂಡನ ಶವ
ವನ್ನೇ ದಿಟ್ಟಿಸುತ್ತ ಗೊಂಬೆಯಂತಾದಳು.

****

ಚಿಕ್ಕಪ್ಪನ ನೆನಪನ್ನು ಮನಸ್ಸಿನ ಮೂಲೆಗೆ ತಳ್ಳಿ, ರಾಮೆರಿಪ್ಟಾನ
ಮುಂಗುರುಳು ನೇವರಿಸುತ್ತ ನೆಫಿಸ್ ಅಂದಳು:
"ರೊಟ್ಟಿ ತಟ್ತೇನೆ. ತಿಂದು ಇಬ್ಬರೂ ಹೋಗ್ಬನ್ನಿ."

****