ಈ ಪುಟವನ್ನು ಪರಿಶೀಲಿಸಲಾಗಿದೆ
ಮೃತ್ಯುಂಜಯ
೬೫ ಕೊಡಲಿ. ಹೇಗೂ ಅವರ ಕಣಜಗಳು ಭರ್ತಿಯಾಗಿವೆ.” "ಅಂದರೇನು ? ನಿಗದಿಯಾಗಿರುವಷ್ಟು ನೀವು ಕೊಡೋದಿಲ್ವೋ?" "ಇದ್ದವರು ಕೊಡ್ತಾರೆ." ಟಹುಟಿ ಕೂಗಾಡಿದ: “ ಇಲ್ಲದಿದ್ದವರು ಇಲ್ಲ !....ಪೆರೋ ರಾನ ಕಾಲದಲ್ಲಿ ಕೆಲವು ಜನ ಅವನ ವಿರುದ್ಧ ದಂಗೆ ಎದ್ರು. ಹಗಲಿನ ಕಣ್ಣನ್ನು ಆರಾಧಿಸೋ ಬದಲು ಇರುಳಿನ ದೈತ್ಯನನ್ನು ಪೂಜಿಸಿದ್ರು.... ಈಗ_" ತುಸು ಧ್ವನಿ ಏರಿಸಿ ಮೆನೆಪ್ಟಾ ನುಡಿದ: "ಇದು ಕಂದಾಯ ರಿಯಾಯಿತಿಗೆ ಪ್ರಾರ್ಥನೆ; ದಂಗೆ అల్ల. ನಾವು ಧರ್ಮಾತ್ಮ ಒಸೈರಿಸನ್ನು ಆರಾಧಿಸ್ತೇವೇ–ದುಷ್ಟ ಸೆತ್ ನನ್ನಲ್ಲ ! " ಮಾತು ಮುಗಿಯುವುದಕ್ಕೆ ಮುನ್ನವೇ ಟಿಹುಟಿ ಒಂದು ಅಂಗೈಯನ್ನು ಇನ್ನೊಂದರಿಂದ ಬಲವಾಗಿ ತಟ್ಟಿ, ಗಟ್ಟಿಯಾಗಿ,"ಬಕಿಲ!" ಎಂದ. ಬಕಿಲ ಪ್ರತಿಮೆಯ ತುಟಿಗಳಲ್ಲಿ ನಗೆ ಮೂಡಿತು. ಅದು ಚಲಿಸ ತೊಡಗಿತು. ಮೆನೆಪ್ಟಾ ನಿಂತಲ್ಲಿಗೆ ಅಲ್ಲಿಂದ ನಾಲ್ಕು ಹೆಜ್ಜೆ.ಮಿಕದತ್ತ ಸಾಗುವ ಕ್ರೂರ ಮೃಗದಂತೆ ಬಕಿಲ ದೀರ್ಘ ಗರ್ಜನೆಯ ಧ್ವನಿ ಹೊರಡಿಸಿದ. ಚಾವಟಿಯನ್ನು ಹಿರಿಯುತ್ತ ಮೆನೆಪ್ಟಾನ ಮೇಲೆ ಏರಿ ಹೋದ. ಅಂಗಳದಲ್ಲಿದ್ದ ನೂರಾರು ಕಂಠಗಳಿಂದ ಏಕಕಾಲದಲ್ಲಿ ಆರ್ತನಾದ ಹೊರಟಿತು. ಬಕಿಲನ ಬಲಗೈಯ ಮಾಂಸಖಂಡಗಳು ಕುಣಿದುವು. ನೀರಾನೆಯ ತೊಗಲಿನ ಚಾವಟಿ ಸುಂಯ್ಗುಟ್ಟಿತು. ಮತ್ತೆ ಮತ್ತೆ ಮೆನೆಪ್ಟಾನ ಶರೀರದ ಸುತ್ತ ಅದು ಹಾರವಾಯಿತು. ಟಹುಟಿ ಕ್ಷೀಣಿಸತೊಡಗಿದ ಧ್ವನಿಯಲ್ಲಿ ಅಂದ: "ಬಾರಿಸು,ಬಾರಿಸು ! ಅವನ ವಟ ವಟ ನಿಲ್ಸು!"
ಅಂಗಳದಿಂದ ಜನ ಒಳಕ್ಕೆ ನುಗ್ಗತೊಡಗಿದರು.ಬಕಿಲ ತನ್ನ ಅನುಚರ ರಿಗೆ ಅನುಜ್ಞೆಗಳನ್ನಿತ್ತ:
"ಹಿಂದಕ್ಕೆ ತಳ್ಳಿ ! ಹೊರಕ್ಕೆ ಓಡಿಸಿ!" ಟಹುಟಿ ಪೀಠಕ್ಕೆ ಒರಗುತ್ತ ಹೇಳಿದ:
೫