ಪುಟ:Mrutyunjaya.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತೃ೦ಜಯ ಹೊತ್ತಾಯಿತು. ಕಂದಾಯದ ಧಾನ್ಯವನ್ನು ಅಳೆದು, ಸೇವೆಕರ ಮೇಲೆ ಹೊರಿಸಿ, ರಾಜಗೃಹಕ್ಕೆ ತಂದೊಪ್ಪಿಸುವ ಕೆಲಸವೂ ಇದೆ. ಆದರೆ ಇಲ್ಲಿಂದ ಪಾರಾಗುವುದು ಹೇಗೆ ? ಅವನು ಪಿಸುದನಿಯಲ್ಲಿ ಹೇಳಿದ: “ಇಪ್ಪವರ್. ಮನೆಗೆ ಸ್ವಲ್ಪ ಹೋಗಿ ಬರಬೇಕಲ್ಲ.” "ನೀವೆ?” "ಹು೦." ಪ್ರಾಕಾರದ ದಿಕ್ಕಿಗೆ ಮುಖ ಮಾಡಿ ನಿ೦ತಿದ್ದ ಬಕಿಲನತ್ತ ಇಪ್ಪವರ್ ಬೊಟ್ಟ ಮಾಡಿದ. "ನೀನು ಕೇಳು," ಎ೦ದ ಸಿನ್ಯುಹೆ. “ಒಲ್ಲೆ ನಮ್ಮಪ್ಪ,” ಎಂದು ನುಡಿದು ಇಪ್ಪವರ್ ಮ೦ಡಿಯೂರಿ ಕುಳಿತು, ಬರೆದು ಹರಡಿದ್ದ ಲಿಪಿಸುರುಳಿಗಳನ್ನು ದಿಟ್ಟಿಸಿದ ಮಸಿ ಆರಿತ್ತು. (ಟೆಹುಟಿ, ಮೆನೆಪ್ಟಾ ಇಬ್ಬರ ವಾಗ್ವೆಖರಿಯೂ ಅಸಾಧಾರಣವಾಗಿತ್ತು ಟೆಹುಟಯದೇನೋ ಸರಿ. ಆದರೆ ಈ ಮೆನೆಪಟಾ ? ಅವನಿಗೆ ಇಷ್ಟೋ೦ದು ವಿಚಾರಶಕ್ತಿ ಇದೆ ಎಂದು ಯಾರು ಭಾವಿಸಿದ್ದರು ? ಮಾತಿನ ಅಲೆಗಳು, ಇಂಪಾದ ಸಂಗೀತದ ಹಾಗೆ.) ಪೆಟಾರಿಯಿ೦ದ ಸೆಣಬಿನ ದಾರದ ಉಂಡೆಯನ್ನು ಹೊರತೆಗೆದು, ಹಾಳೆಗಳನ್ನು ಒ೦ದೂದಾಗಿ ಆತ ಸುರುಳಿ ಸುತ್ತಿ, ಪುಟಸಂಖ್ಯೆ ನಮೂದಿಸಿದ. ಪೆಟಾರಿಯಲ್ಲಿದ್ದ ದಾಖಲೆಗಳನ್ನು ಬದಿಗೆ ಸರಿಸಿ, ಹೊಸ ಸುರುಳಿಗಳನ್ನು ಒಂದು ಮೂಲೆಯಲ್ಲಿರಿಸಿದ. ಪೆಟಾರಿಯ ಬಾಗಿಲನ್ನು ಮುಚ್ಚಿದ. ಇಪ್ಯೂವರ್ ಗೆ ಆನಿಸಿತು : ಟೆಹುಟಿಯ ಸುರುಳಿ ಈ ಸುರುಳಿಗಳನ್ನು ರಾಜಧಾನಿಗೆ ಒಯ್ದು, ಅಮಾತ್ಯರಿಗೂ ಪೆರೋಗೂ ತೋರಿಸುವುದು ಖಂಡಿತ. ಬರೆವಣಿಗೆ ನೋಡಿ ಅವರು ಮೆಚ್ಚುಗೆ ಸೂಚಿಸು ವುದೂ ಸಾಧ್ಯ....ಪಾಪ, ಮೆನೆಪ್ ಟಾ. ಆ ದೃತ್ಯ ಸ್ವಲ್ಪ ಆ ಕಡೆಗೆ ಹೋದರೆ ಒ೦ದಷ್ಟು ನೀರನ್ನಾದರೂ ಇವನಿಗೆ ಕುಡಿಸಬಹುದು, ತಾನೂ ಕುಡಿಯ ಬಹೂದು.... ಸೆತೆಕ್ನಖ್ತ್ ಗಲ್ಲ ತುರಿಸಿದ, ಸೆನ್ ಉಸರ್ ಕೆಲವೇ ಕೂದಲು ಉಳಿದಿದ್ದ ತನ್ನ ತಲೆಯ ಮೇಲೆ ಅಂಗೈ ಆಡಿಸಿದ. ಹೆಜಿರೆ ನೆಲದಲ್ಲಿ ನೆಟ್ಟ