ಪುಟ:Mrutyunjaya.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮ್ಯತ್ಯು೦ಜಯ " ಅಧಿಕಾರಿಯವರಿಗೆ ಗೊತ್ತಿಲ್ದಹಾಗೆ ಇವನು ಸತ್ತರೆ, ನಮ್ಮ ಮೇಲೆ
ಕೋಪಿಸ್ಕೋತಾರೆ."

"ಇಪ್ಯುವರ್,ಮುಖಕ್ಕೆ ನೀರು ರಾಚು.”

“ಜೋಕೆ! ಅದೆಲ್ಲಾ ಮಾಡ್ಬೇಡಿ !”

__ಎಚ್ಚರಿಕೆಯ ಮಾತು ಆಡಿದ್ದು ಯಾರು ?ಯಾರು ? ಚಲಿಸುವ ಪ್ರತಿಮೆ ? ಅರಚುವ
ಪ್ರತಿಮೆ ?)

"ಆ.... ಆ...."

ಮೆನೆಪ್‍ಟಾ ನರಳಿದ. (ಇಪ್ಯುವರನ ಮುಖದಲ್ಲಿ ಹರ್ಷ. ರಾನ
ಕೃಪೆ, ಪ್‍ಟಾನ ಕೃಪೆ, ఇವನು ಸತ್ತಿಲ್ಲ, ಸತ್ತಿಲ್ಲ....) ಮೆಯೆಲ್ಲ ಉರಿ.
ಗ೦ಟಲು ఒణగిದೆ. ದಾಹ. ದಾಹ....ರಾಮೆರಿ, ನೆಫಿಸ್....ಸ್ನೋಫ್ರು
ಎಲ್ಲಿ ? ಸ್ನೋಫ್ರು ?

"ಆ....ಆ...."

ಮಹಡಿಯ ಮೋಲು ಮೆಟ್ಟಲ ಬಲಿಯಿ೦ದ ಟಿಹುಟಿಯ ಧ್ವನಿ ಕೇಳಿಸಿತು:

"ಬಕಿಲ! ಕೈದಿಯನ್ನು ನೋಡ್ಕೋ."

" ಅಪ್ಪಣೆ.”

ಭೂಮಾಲಿಕ ಸಿನ್ಯುಹೆ ಮನೆಯಲ್ಲಿ ಅವನ ಹೆ೦ಡತಿ ಅನಾರೋಗ್ಯ
ಪೀಡಿತಳಾಗಿ ಮಲಗಿದ್ದಳು. ಐದು ಹೆತ್ತು, ಮಧ್ಯ ವಯಸ್ಸನ್ನು ಸಮೀಪಿಸುತ್ತಿದ್ದವಳು.
ಎಡಗೈ ಸ್ವಾಧೀನ ತಪ್ಪಿತ್ತು. ದೇವ ಮಂದಿರದ ಅರ್ಚಕನ
ಔಷಾಧೋಪಚಾರ. ಒಂದು ತಿಂಗಳು ನಡೆದ ಚಿಕಿತ್ಸೆಯಿಂದ ಏನೂ ಗುಣ
ಕ೦ಡಿರಲಿಲ್ಲ. "ಈ ದಿನ ಬರ್‍ತೇನೆ. ವಿಶೇಷ ತಾಯತ ಕಟ್ತೇನೆ. ಪ್ರಾಚೀನ
ಗ್ರಂಥದ ಹಾಳೆಗಳನ್ನು ಎಣ್ಣೆಯಲ್ಲಿ ಕರಿದು ಮಾಡಿದ ಔಷಧಿ ಕುಡಿಸ್ತೇನೆ,”
ಎ೦ದು ನುಡಿದಿದ್ದ, ಅರ್ಚಕ ವೃದ್ಯ. ಅವನ ದಾರಿ ನೊಡಿ ನಿರಾಶನಾಗಿ,
ಅಧಿಕಾರಿಯ ಭೇಟಿಗೆ ತಡವಾಗುತ್ತದೆಂದು ಸಿನ್ಯುಹೆ ಹೊರಟು ಬಿಟ್ಟಿದ್ದ.
ಆಮೇಲೆ ಆರ್ಚಕ ಬ೦ದು ತಲುಪಿರಬಹುದು.ಮ೦ತ್ರಿಸಿ ತಾಯಿತ ಕಟ್ಟುವ
ಕೆಲಸ ಮುಗಿದಿರಬಹುದು. ಸಿನ್ಯುಹೆಗೆ ಮನೆಗೆ ಹೋಗುವ ತವಕ. ಅರ್ಚಕ
ವ್ಯೆದ್ಯ ಕಾಯುತ್ತಿರುತ್ತಾನೆ. ಅವನಿಗೆ ಸಂಭಾವನೆ ಸಲ್ಲಿಸಬೇಕು. ಊಟಕ್ಕೆ