ಪುಟ:Naavu manushyare - Niranjana.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತೆಂಗಿನ ಎರಡು ಹೋಳುಗಳ ಚಿಪ್ಫು. ಬಿಗಿದು ಹಿಡಿಯಲು ಬ್ರಾ,ಸಿ‍ಕ್ಸ್ತ್ ಫಾರ್ಮ್‍ನ ಹಿರಿಯ ಹುಡುಗಿಯೊಬ್ಬಳು (ಯಾರ ಮೂಲಕವೊ) ಎರವಲು ಕೊಟ್ಟದ್ದು.

ಶಾಲೆಯಲ್ಲೂ ಹೊರಗೂ ವಾಗ್ಮಿಯ ಪಾತ್ರ. ಸಾಮ್ರಾಜ್ಯಶಾಹಿಯ

ವಿರುದ್ಧ ಆವೇಶದ ಭಾಷಣಗಳು. ಭಾಷಣ ಸ್ಪರ್ಧೆಯಲ್ಲಿ-ಲೇಖನ ಸ್ಪರ್ಧೆ ಯಲ್ಲೂ ಪ್ರತಿವರ್ಷ ಬಹುಮಾನಗಳು. ಆಗೊಮ್ಮೆ ಈಗೊಮ್ಮೆ ಕಥಕ್ಕೆಳಿ ನೋಡುತ್ತಿದ್ದೆ ಇಷ್ಟಪಟ್ಟು. ಬಣ್ಣ ಬಳೆದ ಮುಖ. ಬಯಲಿನಲ್ಲಿ ಕುಳಿತೆವರು ಬೆರಗಾಗಬೇಕು. ಮುಷ್ಟಿಕಟ್ಟಿ ಭಾಷ್ಪಣ ಮಾಡುವ ಕಲೆ ಸಮನಲ್ಲವೆ ಕಥಕ್ಕಳಿಗೆ ಮುಖವಾಡದ ಬದುಕು. ಒಳಗೂ ಹೊರಗೂ ಒಂದೇ ಆದರೆ ಚಂದ. ಬೇರೆಬೇರೆ ಆದರೆ?

ಕನ್ನಡನೆಲದಲ್ಲಿ ಗಾಂಧಿ-ನೆಹರು ನಾಯಕರು. ದಕ್ಷಿಣಕ್ಕೆ, ಅಗೋಚರ ನಾಯಕರಿದ್ದರು:ಮಾರ್ಕ್ಸ್,ಲೆನಿನ್,ಸ್ಟಾಲಿನ್. ಅಹಿಂಸೆ,ಕರುಣೆ,ಅನುಕ೦ಪ ಗಳ ಜತೆ ಬೆರೆಯಿತು ತೀವ್ರಗಾಮಿತ್ವ. (ನಾಟಕದಲ್ಲಿ ಮುಖ್ಯ ರಸಗಳು ಎಷ್ಟು?)

ಹೈಸ್ಕೂಲು ಮುಗಿಸಿದವನು.೧೯೪೧ರ ಮೇ ಮೊದಲದಿನದಿಂದಲೇ ಮಂಗಳೂರಿನ ನಾಗರಿಕನಾದೆ. 'ರಾಷ್ಟ್ರಬಂಧು' ಸೇರಿದೆ, ಪತ್ರಿಕೋದ್ಯೋಗಿ ಯಾದೆ.

ನಾಟಕಲೋಕದಲ್ಲಿ ನನ್ನ ವಿಲಿವಿಲಿಗೆ ಸಂಬಂಧಿಸಿ ೧೯೪೩ ಗಮನಾರ್ಹ ವರ್ಷ. ಆ ವರ್ಷದ ಮೇ ತಿಂಗಳಲ್ಲಿ ಅಖಿಲ ಭಾರತ ಪ್ರಗತಿಶೀಲ ಲೇಖಕರ ಸಮ್ಮೇಳನ ಮುಂಬಯಿಯಲ್ಲಿ ಜರಗಿತು. ಭಾಗವಹಿಸಲೆಂದು ಮಂಗಳೂರಿ ನಿಂದ ಆ ಮಹಾನಗರಕ್ಕೆ ತೆರಳಿದೆ. ಧಾರವಾಡದಿಂದ ಶ್ರೀರಂಗರು ಬಂದಿದ್ದರು, ಜತೆಗೆ ಮುಂಬಯಿ ನಿವಾಸಿಗಳಾದ ಶ್ರೀರಂಗ ಮಿತ್ರರಿದ್ದರು-ಕೃಷ್ಣಕುಮಾರ ಕಲ್ಲೂರ ಮತು ಎಚ್. ಎಸ್. ಪಾಟೀಲ. ಇನ್ನೊಂದು ಸಮ್ಮೇಳನದಲ್ಲೂ ನಾನು ಭಾಗವಹಿಸಿ IPTA (ಇಪ್ಪಾ)ಅಸ್ತಿತ್ವಕ್ಕೆ ಬಂದುದನ್ನು ಕಂಡೆ.ಏನು ಪೀಪ್ ಲ್ಸ್ ಥಿಯೇಟರಿನ ಉದ್ದೇಶ? ಪ್ರಗತಿಶೀಲ ಸಾಹಿತಿಗಳಿಗೂ ಅದಕ್ಕೂ