ಪುಟ:Rangammana Vathara.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
  • ಜನನ : ಜೂನ್ ೧೫, ೧೯೨೪. ಹೆಸರು : ಕುಳುಕುಂದ ಶಿವರಾಯ.
    ೧೩ನೆಯ ವಯಸ್ಸಿನಲ್ಲಿಕತೆ ಬರೆಯಲು ಆರಂಭ. ೨೬ನೆಯ
    ವಯಸ್ಸಿನಲ್ಲಿ (೧೯೫೦) ಆಗಿನ ನಿರಂಜನ ಕಾವ್ಯನಾಮವನ್ನೇ ತನ್ನ
    ನಾಮಧೇಯವಾಗಿ ಸ್ವೀಕಾರ. ಕನ್ನಡದ ಈ ವಿಶಿಷ್ಟ ಸಾಹಿತಿಯ
    ಲೇಖನಿ ಕತೆ, ಕಾದಂಬರಿ, ನಾಟಕ, ರೂಪಕ - ಹೀಗೆ ಹಲವು ಪ್ರಕಾರ
    ಗಳಲ್ಲಿ ಸಮೃದ್ಧವಾಗಿ ಹರಿದಿದೆ. ಪತ್ರಿಕೋದ್ಯಮದಲ್ಲಿ ಸುದ್ದಿಗಾರ,
    ಉಪ ಸಂಪಾದಕ, ಸಹ ಸಂಪಾದಕ, ಸಂಪಾದಕ ಹುದ್ದೆಗಳಲ್ಲಿ ವಿವಿಧ
    ಪತ್ರಿಕೆಗಳಲ್ಲಿ ದ‍ಕ್ಷತೆಯಿಂದ ದುಡಿದಿದ್ದಾರೆ. ೧೯೪೫ರ ಮೊದ
    ಲುಗೊಂಡು ಅಂಕಣಸಾಹಿತ್ಯಕ್ಕೆ ನಿರಂಜನರಿಂದ ಸಂದಿರುವ ಕೊಡುಗೆ
    ಅಸಾಧಾರಣವಾದದ್ದು.
  • ಪ್ರಧಾನ ಸಂಪಾದಕರಾಗಿ ನಿರಂಜನ ರಚಿಸಿರುವ ಏಳು ಸಂಪುಟಗಳ
    ಕಿರಿಯ ವಿಶ್ವಕೋಶ 'ಜ್ಞಾನ ಗಂಗೋತ್ರಿ' ಮತ್ತು ಇಪ್ಪತ್ತೈದು
    ಸಂಪುಟಗಳ 'ವಿಶ್ವ ಕಥಾ ಕೋಶ' ಕನ್ನಡಕ್ಕೆ ಬೆಲೆ ಬಾಳುವ ಕಾಣಿಕೆ.
  • ವಿದೇಶೀಯ ಭಾಷಗಳಿಂದ ಶ್ರೇಷ್ಠ ಕೃತಿಗಳನ್ನು ಕನ್ನಡಿಸಿ ನಮ್ಮ
    ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
  • ಅನ್ಯ ಭಾಷಗಳಿಗೆ ಅನುವಾದಗೊಂಡಿರುವ ಕನ್ನಡ ಬರೆಹಗಾರರಲ್ಲಿ
    ನಿರಂಜನರದು ಅಗ್ರಸ್ಥಾನ. ಇವರ ಕೃತಿಗಳು ಬಂಗಾಳಿ, ಹಿಂದಿ,
    ಮಲಯಾಳಂ, ಮರಾಠಿ, ತಮಿಳು, ತೆಲುಗು ಮತ್ತಿತರ ಭಾರತೀಯ
    ಭಾಷಗಳಿಗೆ ತರ್ಜುಮೆಯಾಗಿವೆ. ವಿದೇಶೀಯ ಭಾಷೆಗಳಾದ
    ಇಂಗ್ಲಿಷ್, ರಷ್ಯನ್, ಪೋಲಿಷ್ ಭಾಷಗಳಲ್ಲಿ ಬೆಳಕುಕಂಡಿವೆ.
  • ನಿರಂಜನರ ಗಳಿಕೆಯ ಚೀಲದಲ್ಲಿ ಅಭಿನಂದನ, ಗೌರವ, ಪ್ರಶಸ್ತಿ,
    ಪಾರಿತೋಶಕಗಳಿವೆ. ಐಬಿಎಚ್ ಪ್ರಕಾಶನದ 'ನಿರಂಜನ :
    ಮೂವತ್ತು ಸಂಪುಟಗಳಲ್ಲಿ' ಯೋಜನೆ ಆವರಿಗೆ ಸಲ್ಲುತ್ತಿರುವ
    ಹಿರಿಯ ಮನ್ನಣೆ.