ಪುಟ:Shabdamanidarpana.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಪೋದ್ಘಾತ. d ವರ್ಮ, ನೇಮಿಚಂದ್ರ, ಜನ್ನ, ಹಂಸರಾಜ, ಬ್ರಹ್ಮಶಿವ ಮೊದಲಾದ ಪುರಾತನ ಕನ್ನಡ ಕವಿಗಳ ಪದ್ಯಭಾಗಗಳನ್ನು ಎತ್ತಿಕೊಂಡಿರುವುದರಿಂದ, ಶಬ್ದ ಮಣಿ ದರ್ಪಣವ್ರ ಕೇಶಿರಾಜನ ಕಾಲದ ಕನ್ನಡ ಶಬ್ದ ಶಾಸ್ತ್ರದ ಮೇಲೂ ಆತನ ಕಾಲ ಕ್ಕಿಂತ ಮೊದಲಿದ್ದ ಕನ್ನಡದ ವಾಯದ ಮೇಲೂ ಬೆಳಕನ್ನು ಹಾಕುತ್ತದೆ. ಈ ವಿಷಯವನ್ನು ವಿಮರ್ಶಿಸಿ ಒಂದು ಉಪೋದ್ಘಾತವನ್ನು ಈ ಮೂರನೆಯ ಆವೃತ್ತಿಯಲ್ಲಿ ಸೇರಿಸಬೇಕೆಂದಿದ್ದೆನು. ಕಾರಣಾಂತರಗಳಿಂದ ಇದು ತಪ್ಪಿಹೋದು ದಕ್ಕೂ, ಮೊದಲು ಉದ್ದೇಶಿಸಿದ ಪರಿಶಿಷ್ಟಗಳನ್ನು ಸೇರಿಸದೆ ಹೋದುದಕ್ಕೂ, ಶುದ್ಧಾಶುದ್ದ ಪತ್ರಿಕೆಯನ್ನು ಇದರಲ್ಲಿ ಕೊಡದೆ ಹೋದುದಕ್ಕೂ ಬಹಳ ವ್ಯಸನಪಡುತ್ತೇನೆ. ಈ ನ್ಯೂನಾತಿರಿಕ್ತಗಳನ್ನು ನಾಲ್ಕನೆಯ ಆವೃತ್ತಿಯಲ್ಲಿ ಸರಿಗೊಳಿಸಲು ಸಂಕಲ್ಪಿಸಿರುತ್ತೇನೆ. ಈ ಆವೃತ್ತಿಯನ್ನು ಪ್ರಸಿದ್ದ ಪಡಿಸಲು ನನಗೆ ಅವಕಾಶ ಕೊಟ್ಟುದಕ್ಕಾಗಿ ಕೆ. ಇ. ಎಂ. ಮಿಶನ್ ಪುಸ್ತಕಾಲಯದ ಮೆ. ಒ. ವುಯಿತ್ರಿಕ್ ದೊರೆಗಳನ್ನೂ ಇದನ್ನು ಅಂದವಾಗಿ ಮುದ್ರಿಸಿಕೊಟ್ಟ ಕೆ. ಇ. ಎಂ. ಛಾಪಖಾನೆಯ ಯಜ ಮನರಾದ ಘನ ಇ, ಕೆಮೆಯರ್ ದೊರೆಗಳನ್ನೂ ಅವರ ನೌಕರರನ್ನೂ ನಾನು ಈ ಮೂಲಕ ವಂದಿಸುತ್ತೇನೆ. 1ನೆಯ ಸಂಬರ್ 1320. | ಮಂಗಳೂರು, ಪಂ. ಮಂಗೇಶರಾಯ.