ಪುಟ:VISHAALAAKSHI - Niranjana.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- | | ನೆನಪು ಸಿಹಿ - $$$ .' "ಹಸ ಆಟ:4k8,೬೫.

  • i:

-

      • .' `

, '!•, 24+ ' { .. 21 | - *.: 3-4: R # get+Aw-+ ಪುಟ: 11 : ?

  • ಅನಂತರದ ಸ್ವಲ್ಪ ಸಮಯದಲ್ಲೇ ರಂಗರಾಜನಿಂದ ಮತ್ತೊಂದು ಕಾಗದ ಬಂತು - 1

ತನ್ನ ತರಬೇತಿಯ ಪ್ರಗತಿಯ ವಿವರವನ್ನೆಲ್ಲ ಕೊಟ್ಟು ಆತ ಬರೆದಿದ್ದ: - “ಮನಸ್ಸು ಉಲ್ಲಾಸವಾಗಿದೆ. ಮಳೆಗಾಲ ಮುಗಿಯಿತೆನ್ನುವುದಕ್ಕೆ ಸೂಚನೆಯಾಗಿ ಊರನ್ನೆಲ್ಲ ಮಂಜು ಕವಿಯುವುದನ್ನು ನೆನೆಸಿಕೊ ಅಥವಾ, ಬಿಳಿ ಮೋಡಗಳಿಂದ ಚಾಮುಂಡಿಬೆಟ್ಟ ಮುಚ್ಚಿಹೋಗುವ ಚಿತ್ರ ವನ್ನು ಜ್ಞಾಪಿಸಿಕೋ, ಬಿಸಿಲು ಬಂದಂತೆ ಏನಾಗ್ತದೆ ? `ಊಹೂಂ, ಅದೂ ಸರಿಯಲ್ಲ. ಆದರೆ ಬೇರೆ ಯಾವ ಹೋಲಿಕೆ ಕೊಡಲಿ ? ಇಲ್ಲಿಯ : ಈಗಿನ ನಿಸರ್ಗ ಸೌಂದರ್ಯವನ್ನು ಬಣ್ಣಿಸುವುದಕ್ಕೆ, ನಮ್ಮ ಪುರಾಣಗಳ... ಆದಿಶೇಷನೂ ಸಮರ್ಥನಾಗಲಾರ, ಹಿಮ ಕರಗಿ ನೀರಾಗಿ ಹರಿಯುತ್ತಿದೆ. ಮೈ ತೊಳೆದು ಮರಗಿಡಗಳು ನಿಂತಿವೆ, ಹಸುರು ಚಿಗುರು ಎಲ್ಲೆಲ್ಲೂ, - ಸೂರ್ಯರಶ್ಮಿ ಇಲ್ಲಿ ಎಷ್ಟು ಸುಂದರ! ಜನರಲೆಲ್ಲ ಲವಲವಿಕೆ ತುಂಬಿದೆ.: ಇಲ್ಲಿಯವರಿಗೆ ವಸಂತಾಗಮನ ನಮೂರ ಹಳ್ಳಿಗರಿಗೆ ಸುಗ್ಗಿ ಇದ್ದ ಹಾಗೆ, - 'ನಾನು ಕವಿಯಾಗಬೇಕಿತ್ತು, ಇದನ್ನೆಲ್ಲ ನೋಡಿ ಇಂಥ ಕವಿತೆ ಬರೆ `ಯುತ್ತಿದ್ದೆ! ಆವತ್ತು ನಮ್ಮ ಮನೆಗೆ ದಯಮಾಡಿಸಿದ್ದರಲ್ಲ ಕವಿ-ನಿನ್ನ ಸ್ನೇಹಿ ತರು ? ಅವರೇನಾದರೂ ಇಲ್ಲಿಗೆ ಬಂದಿದ್ದರೆ, ಖಂಡಿತವಾಗಿಯೂ ಹುಚ್ಚೆದ್ದು ಕುಣಿಯುತ್ತಿದ್ದರು; ಇದರ ಬಣ್ಣನೆಯನ್ನೂ ಸೊಗಸಾಗಿ ಮಾಡುತ್ತಿದ್ದರು. 'ರಾಜಕೀಯ ತಂತ್ರಕುತಂತ್ರಗಳು' ಲೋಕದಲ್ಲಿ ನಡೆಯುತ್ತಲೇ. ಇವೆ, ರಾಜಕಾರಣಿಗಳು ಕಪಟನಾಟಕ ಆಡುತ್ತಲೇ ಇದ್ದಾರೆ, ಮಾರಕ ಅಸ್ತ್ರಗಳ ಸ್ಫೋಟನೆಯಾಗುತ್ತಲೇ ಇದೆ, ಒಬ್ಬರನ್ನು ಉರುಳಿಸಿ ಇನ್ನೂ ಬ್ಬರು-ಈ ದೇಶದಲ್ಲೂ ಕೂಡಾ-ಗದ್ದುಗೆ ಏರುತ್ತಲೇ ಇದ್ದಾರೆ. ಆದರೆ, - ಜನರು ಮಾತ್ರ ತಮ್ಮ ನಿತ್ಯಕರ್ಮಗಳನ್ನು ಬಿಟ್ಟಿಲ್ಲ. ಆಳುವ ವರ್ಗ ಏ ನೇ ಮಾಡುತ್ತಿರಲಿ, ವ್ಯಕ್ತಿಜೀವನವೂ ಸಾಮೂಹಿಕ ಜೀವನವೂ ನಡೆದೇ ಇವೆ. . ಇಂಥ ಸಮಸ್ಯೆಗಳು ಏನಿದ್ದರೂ ಒಂದು ಕಣ ಮರೆತು, ಈ ನಿಸರ್ಗ ಸೌಂದರ್ಯವನ್ನು ಸವಿಯಲು ಮನುಷ್ಯನಿಗೆ ಹಿರಿಯ ಹೃದಯಬೇಕು,

" .೬Yif-+೭ : ಸಿ .. :: 2 :

":-+ (+15 44 ... - --- - ೭. - : *12 FIM cyY 1:28 | - : * - :

೬ .

.

  • 2:1.

- -': +2 : 1 -:

  • - -