ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-.- -


-

t 44 LP • +11° °

  • * * * * *

೨೨ ವಿಶಾಲಾಕ್ಷಿ [ಅಯ್ಯೋ ! ಏನೋ೦ತಿದ್ದೆ. ಅಂತೂ ಇಂಥಾ ಹುಡುಗೀನೇನಾ ನಮ್ಮ ಮೈದುನ ಕಳ್ಕೊಂಡಿದ್ದು ! ಪೂ !” ಎಂದುಬಿಟ್ಟಳು ಗಂಗಾಧರನ ಅತ್ತಿಗೆ, ಏಕಾಂತ ದಲ್ಲಿ, ತನ್ನಷ್ಟಕ್ಕೇ.] ನರ್ಮದೆ ಬರಲಿಲ್ಲವೆಂದು ವಿಶಾಲಾಕ್ಷಿಗೆ ಬೇಸರವೆನಿಸಿತು, ಅವಳು ಕಾಗದ ಬರೆದು ಕಳುಹಿದ್ದಳು-ಕನ್ನಡದಲ್ಲಿ. ಮುದ್ದು ವಿಶಾಲಿ, ಮದುವೆಯ ದಿನವೆಲ್ಲ ದೇಹ ಇಲ್ಲಿದ್ದರೂ ನನ್ನ ಆತ್ಮ ಅಲ್ಲಿಯೇ, ನಿನ್ನ ಹತ್ತಿರವೇ ಇರುತ್ತದೆ. ಡಾಕ್ಟರಿಗೆ ಏನೇನೂ ಪುರಸೊತ್ತಿಲ್ಲ, ಇಲ್ಲ ದಿದ್ದರೆ ಖಂಡಿತ ಬರುತ್ತಿದ್ದೆವು, ಮದುವೆ ಮುಗಿಸಿದ ಮಾರನೆಯ ದಿನವೇ ಇಲ್ಲಿಗೆ ವಾಪಸಾಗುತ್ತಿರಲ್ಲವೆ? ಆರತಿ ಅಕ್ಷತೆ ಸಮಾರಂಭ ಸಾರ್ವಜನಿಕ ವಾಗಿ ಇಲ್ಲವೆಂದು ಕೇಳಿದೆ, ಬೇಸರವಾಯ್ತು ಕಣೇ, ಏನೇ ಇರಲಿ, ಬಹಳ ಕಾಲದಿಂದ ನಾವು ನಿರೀಕ್ಷಿಸಿದ್ದು ಈಗ ನೆರವೇರುತ್ತಿದೆಯಲ್ಲಾ.... ಅಂತ ಸಂತೋಷ, ನನ್ನದೊಂದು ವಿನಂತಿ ಇದೆ. ನೀನು ಮಾನ್ಯ ಮಾಡಲೇಬೇಕು. ಇಲ್ಲಿಗೆ ವಾಪಸಾದ ದಿನವೇ ಮಧ್ಯಾಹ್ನ ಮೂರು ಗಂಟೆಗೆ ನೂತನ ವಧೂ ವರರಿಬ್ಬರೂ ನಮ್ಮಲ್ಲಿಗೆ ಬಂದು, ಅಲೋಪಹಾರ ಸ್ವೀಕರಿಸಬೇಕು. “ಎಷ್ಟೇ ತೊಂದರೆಯಾದರೂ ಚಿಂತಿಲ್ಲ, ಬರಲೇಬೇಕು, ನಿಮ್ಮನ್ನು ಆದಷ್ಟು ಬೇಗನೆ ಕಳಿಸಿಕೊಡುವ, ಮನೆ ಮುಟ್ಟಿಸುವ ಜವಾಬ್ದಾರಿ ನನ್ನದು... ಎಲ್ಲವೂ ಸಾಂಗವಾಗಿ ಜರಗಲೆಂಬುದೇ ನಮ್ಮಿಬ್ಬರ ಹಾರೈಕೆ. ಅನಂತ ಶುಭಾಶಯಗಳು, ಪ್ರೀತಿಪೂರ್ವಕ, ನರ್ಮದಾ. ನರ್ಮದೆಯ ಪತ್ರವನ್ನೋದಿದಾಗ ವಿಶಾಲಾಕ್ಷಿಗೆ, ತನ್ನ ಗೆಳತಿಯರೆಲ್ಲರ ನೆನಪೂ ಆಗಿ, ಕಣ್ಣುಗಳ ಅಂಚಿನಲ್ಲಿ ನೀರು ತುಳುಕಿತು. ಆಭರಣ ವಸ್ತ್ರಾಲಂಕಾರ ಶೋಭಿತೆಯಾದಾಗ ವಿಶಾಲಾಕ್ಷಿ ನಿಜವಾಗಿಯೂ ಎಷ್ಟೊಂದು ಸುಂದರಿಯಾಗಿ ಕಂಡಳು! ಒಂದುಕ್ಷಣ ಅಲ್ಲಿಯೇ ಗೋಡೆಗೊರಗಿ : ನಿಂತು, ಗೆಳತಿಯನ್ನು ಗಿರಿಜಾಬಾಯಿ ಕಣ್ಣು ತುಂಬ ನೋಡಿದರು, ವಿಶಾಲಾಕ್ಷಿಯ Lis Abt - -..:-- ೨೬-೬- +==YY, D 4. • • • - - t-, ಸ.


wiks.net4

          • * *~.

=='