*** M, JP ಆ= ,
- T
೫೪ ವಿಶಾಲಾಕ್ಷಿ mM •°ool. txt
- -..”k..”k ... ... -
(ರಷ್ಯಾದೇಶವೇನೂ ದೂರವಲ್ಲ'-ಇಲ್ಲಿಯೇ ಸಮಾಪ'...ಆ ಪದಗಳನ್ನು ವಿಶಾಲಾಕ್ಷಿ ತುಸು ಗಟ್ಟಿಯಾಗಿ ಉಚ್ಚರಿಸಿದಳು. ಸುಳ್ಳು, ಕಾರ್ಯ ಸಾಧಿಸಿತ್ತು. ಹೆತ್ತವಳ ವಿರೋಧ ಕರಗತೊಡಗಿತ್ತು. ಆ ಮನೋಸ್ಥಿತಿಗೆ ಸಂಕೇತವಾಗಿ ನಾಗಮ್ಮ ಅಳತೊಡಗಿದರು. ಅಳುತ್ತ, ಸೆರಗಿನ ಅಂಚಿನಿಂದ ಕಣ್ಣು ಗಳನ್ನು ಒತ್ತು, ಪುನಃ ಅಳುತ್ತ, ಅವರೆಂದರು: “ಆರು ತಿಂಗಳಂತೆ. ' ಹೆತ್ತವರ ಹೊಟ್ಟೆ ಉರಿಸೋದಕ್ಕೆ ಮಕ್ಕಳು ಇರೋದು...ರಾಜೂಗೆ ಏನೂ ಬುದ್ದಿ ಇಲ್ಲ....ಮನೆಯ ಯೋಚನೆ ಸ್ವಲ್ಪವಾದರೂ ಬೇಡವೆ? ...ನಮಗೆ ಯಾರು ದಿಕ್ಕಿದಾರೆ ಇಲ್ಲಿ ? ಊರಿಗೆ ಬರೋದರ ಬದಲು ಪ್ರವಾಸ ಹೋಗ್ತಾನಂತೆ...ಅಯ್ಯೋ !” ತಾಯಿಯ ಸಂಕಟ ಕಂಡು ವಿಶಾಲಾಕ್ಷಿಯೂ ಒಂದು ಕ್ಷಣ ವಿವಂಚನೆಗೆ ಒಳಗಾದಳು, ಅಣ್ಣ, ತಮ್ಮೆಲ್ಲರ ಜತೆಯಲ್ಲೇ ಇಲ್ಲೇ ಇದ್ದರೆ ಎಷ್ಟು ಚೆನ್ನು ! ಆದರೆ ಮರುಕ್ಷಣವೇ, ಒಡಹುಟ್ಟಿದವನು ಪ್ರಖ್ಯಾತ ಎಂಜಿನಿಯರಾಗುವ ಚಿತ್ರ ತಂಗಿಯ ಕಣ್ಣೆದುರು ಕಟ್ಟಿತು, ಪತ್ರಿಕೆಯಲ್ಲಿ ಫೋಟೋ, ಬೀಳ್ಕೊಡು ಗೆಯ ಸಮಾರಂಭ, ವಿಮಾನ ಮಾರ್ಗವಾಗಿ ರಷ್ಯಾದೇಶಕ್ಕೆ, ಮುಂದೆ ಖಾಯಂ ಉದ್ಯೋಗ ಭಡ್ತಿ, ದೊಡ್ಡ ಹುದ್ದೆ, ಕೈತುಂಬ ಸಂಬಳ, ಯಾರ ಹಂಗೂ ಇಲ್ಲದ ಬದುಕು, ಬಡವರು ಎಂದು ತಮ್ಮನ್ನು ದೂರವಿಟ್ಟವರೆಲ್ಲ ಆಗ ಹೊಟ್ಟೆ ಯುರಿಯಿಂದ ಕರುಬುವರು ತಮ್ಮ ಪಾಲಿಗೆ ವಿದೇಶ ವ್ಯಾಸಂಗ ಮರೀಚಿಕೆಯೇ ಸರಿ-ಎಂದು ಹಿಂದೆ ನಂಬಿದ್ದುದು ಸುಳ್ಳಾಗುತ್ತದೆನ್ನುವ ಸಂತೋಷ.... - “ಇಷ್ಟಕ್ಕೆಲ್ಲಾ ಅಳಬೇಕೆ ಅಮ್ಮ?” “ಸುಮ್ಮನಿರೇ, ನಿನಗೆ ಒಂದೂ ಗೊತ್ತಾಗೋದಿಲ್ಲ.” .'ತಾಯಿಯ ದೃಷ್ಟಿಯಲ್ಲಿ ತಾನು ಯಾವಾಗೂ ಎಳೆಯ ಹುಡುಗಿಯೇ. ಬಯಕೆಯ ಕಲ್ಪನೆಯನ್ನು ನಿಜವೆಂದು ಸಾರುವುದೇ ಪರಿಣಾಮಕಾರಿ. “ಆಮೇಲೆ ಅಣ್ಣ ನಿಗೆ ಹೆಚ್ಚು ಸಂಬಳ ಸಿಗುತ್ತಮ್ಮ.” “ಹೆಚ್ಚು ಸಂಬಳವಂತೆ. ಏಷ್ಟೊತ್ತಿನ ಊಟ ಸಿಕ್ಕರೆ ಸಾಲದೇನೊ ?” “ದೊಡ್ಡ ಕೆಲಸ...” “ಈ ಊರಲ್ಲಿ ಕೊಡ್ತಾರೇನು ?” - HIಇ Al F} .t - 2 XII
- ...
ಪಿ ....#we .: kಳು%