ವಿಷಯಕ್ಕೆ ಹೋಗು

ಪುಟ:Vimoochane.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಣದ ಚೀಲ ನಿನ್ನ ಪಾದಗಳಿಗೊಪ್ಪಿಸಿ, ತಾನು ಚರಣದಾಸಿಯಾಗಿ ನಿನ್ನ ಹಿಂದೇನೆ ಬರ್ತಿದ್ಲು

"ವಾಹವ್ಹಾ, ಅಷ್ಟು ಕುರೂಪೀನೆ ಅವಳು?"‍

"ಛೆ!ಛೆ!ಅಷ್ಟು ದುಡ್ಡಿರೋರು ಕುರೂಪವಾಗಿರ್ತಾರ?"

"ಯಾಕೆ? ನೀನು ನೋಡ್ಲಿಲ್ವೇನು?"

"ಒಳೇದ್ಹೇಳ್ದೆ. ನಾನು ಅವಳ ರೂಪ ನೋಡ್ಲೊ? ಆ ಚೀಲ ಎತ್ಕೊಂಡು ಬರ್ಲೋ ?...ಅವಳ್ನ ನೋಡ್ತಾ ನಿಂತು ಕೆಲಸ ನಿಧಾನ ಮಾಡಿದ್ರೆ, ಇಷ್ಟೊತ್ತಿಗೆ ಲಾಕಪ್ಪಿನಲ್ಲಿ ಇರ್ತಿದ್ದೆ!"

ಅಲ್ಲಿಂದ ಆತನನ್ನು ಗುಜರಿಗೆ ಕರೆದೊಯ್ದ. ನಾವು ಹೋಗು ತ್ತಿದ್ದುದು ಗುಜರಿಗೆ ಎಂದು ತಿಳಿದಾಗ, ಆತನ ಮನಸ್ಸಿನಲ್ಲಿದ್ದುದು ನನಗೆ ಸ್ಪಷ್ಟವಾಯಿತು.

"ಶೇಖರ್, ನನ್ನಂಥ ಕರೀ ಕೊರಮನಿಗೆ ಏನಿದ್ರೂ ನಡೆ ಯುತ್ತೆ"

"ನಾನೇನು ಬಿಳೇ ಜಿರಳೆಯೇನು?"

"ಹಾಗಲ್ಲಪ್ಪಾ, ಎಣ್ಣೆಗೆಂಪು ಮೈ ನಿಂದು.....ಬಣ್ಣ ಹೊಂದಿಕೆಯಾಗ್ಬೇಕು."

ನನಗೆ ಬಣ್ಣಗಳ ತಾರತಮ್ಯದ ಅನುಭವವಿರಲಿಲ್ಲ. ಆತನಿಗೂ ಇರಲಿಲ್ಲ. ಅವೆಲ್ಲಕ್ಕಿಂತ ಮುಖ್ಯವಾಗಿ ಆ ಅಂಗಡಿಯಲ್ಲಿದ್ದುದು, ನನಗೆ ಸರಿಹೋಗುವಂತಹ ಒಂದೇ ಸೂಟು. ಅದರ ಬಣ್ಣ ಹಸುರು- ಸ್ವಲ್ಪ ಮಸುಕಾಗಿತ್ತು ಅಷ್ಟೆ. ಅದನ್ನು ಕೊಳ್ಳುವ ಕೆಲಸವನ್ನು ಬಲು ಚೌಕಾಶಿಯಿಂದ ಅಮೀರ್ ಮಾಡಿದ. ನನ್ನ ಹಸುರು ನೋಟು ಅಲ್ಲಿ ಚಿಲ್ಲರೆಯಾಯಿತು. ಹತ್ತು ರೂಪಾಯಿ ಕೊಟ್ಟು, ಉಳಿದು ದನ್ನು ನನ್ನ ಕೈಯಲ್ಲೆ ಅಮೀರ್ ಇರಿಸಿದ.

"ಜೋಪಾನವಾಗಿಟ್ಕೋಪ್ಪಾ, ಶೇಖರ್.ನಿನ್ನ ಹಣ. ನಿದ್ದೆ ಗಿದ್ದೆ ಹೋದೆ ಅಂತಂದ್ರೆ ನಾನೇ ಲಪ್ಟಾಯಿಸ್ಬಿಟ್ಟೇನು!"

ಅಂತಹ ನಗೆ ಮಾತು ನನಗೆ ಅಹ್ಲಾದಕರವಾಗಿತ್ತು. ಮನುಷ್ಯ ಜೀವದ ಲಘುವಾದ ಒಳ್ಳೆಯದಾದ ಅಂತಹ ಹೃದಯ ನನ್ನ ಕತ್ತ