ಪುಟ:Vimoochane.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೧೩೭

ಅಂಗಡಿ ಇಟ್ಟಿದ್ದ. ಹಾದಿಯಲ್ಲೊಂದು ದಿನ ನನ್ನನ್ನು ತಡೆದು ನಿಲ್ಲಿಸಿ ಸುಖದುಃಖ ವಿಚಾರಿಸಿದ. ಅವನ ಜಗತ್ತು ಬಲು ಚಿಕ್ಕದಾಗಿ ನನಗೆ ತೋರಿತು. ನನ್ನ ಮತ್ತು ಅವನ ನಡುವೆ ಅಳೆಯಲಾಗದ ಅಂತರ ವಿತ್ತು. ಅವನು ನನ್ನ ಮುಂದಿನ ಉದ್ಯೋಗದ ಪ್ರಶ್ನೆ ಎತ್ತಿದ. ನಾನು ಉತ್ತರವೀಯಲಿಲ್ಲ. ಊರಿನ ಹೊರಗೆ ನಾನು ಕಲಿತ ಪಾಠಗಳ, ಪಡೆದ ಅನುಭವಗಳ, ವರದಿಯನ್ನು ಅವನಿಗೆ ಒಪ್ಪಿಸಲಿಲ್ಲ. ನನಗರಿಯದೆಯೇ ನಾನು ರಹಸ್ಯ ಜೀವಿಯಾಗಿ ರೂಪುಗೊಂಡಿದ್ದೆ. ಎ‍‍‍‍‍ಷ್ಟೋ ವಿಷಯಗಳು ನನ್ನಲ್ಲಿ ರಕ್ತಗತವಾಗಿದ್ದುವು. ಹೊರಗೆ ಇನ್ನೊ ಬ್ಬರಿಗೆ ಅವುಗಳನ್ನು ತಿಳಿಯ ಹೇಳುವುದು ಸಾಧ್ಯವೇ ಇರಲಿಲ್ಲ.

ಕೈ ಖಾಲಿಯಾಗಿದ್ದಾಗ, ಅಜ್ಜಿ ತೋರಿಸಿದ್ದ ನೆಲದ ಮೂಲೆ ಯನ್ನು ಕೆದಕಿದೆ. ನಿಕ್ಟೋರಿಯಾ ರಾಣಿಯ ಬೊಂಬೆ ಇದ್ದ ಮುನ್ನೂರು ರೂಪಾಯಿ ನಾಣ್ಯಗಳು ಅಲ್ಲಿದ್ದುವು. ನಾನು ಅವುಗಳನ್ನು ವಶಪಡಿಸಿಕೊಂಡೆ. ಅಜ್ಜಿಯ ದೃಷ್ಟಿಯಲ್ಲಿ ಅದು ದೊಡ್ದ ಆಸ್ತಿ ಯಾಗಿತ್ತು. ಆದರೆ ನನಗೆ ಹಣದ ಬಗ್ಗೆ ಗೌರವವಿರಲಿಲ್ಲ. ಅದು ಯಾರದು ಏನು ಎಂಬುದು ನನಗೆ ಮುಖ್ಯವಾಗಿರಲಿಲ್ಲ. ಮಾನವನ ಆವಶ್ಯತೆಗಳನ್ನು ಪೂರೈಸಬೇಕಾದರೆ ಹಣ ಬೇಕು-ಅಷ್ಟನ್ನು ಮಾತ್ರ ನಾನು ತಿಳಿದಿದ್ದೆ.

ಅಜ್ಜಿಯ ಸಂಬಂಧಿಕರು ನ್ಯಾಯಾಸ್ಥಾನಕ್ಕೆ ಬರಲಿಲ್ಲ. ನೆರೆ ಮನೆಯವರಲ್ಲಿದ್ದ ಎಮ್ಮೆ, ಕಾಲಿಗೆ ಹುಳು ತಗಲಿ ಸತ್ತು ಹೋಯಿತು. ಅದರ ಕರುವನ್ನವರು ಐದು ರುಪಾಯಿಗೆ ಮಾರಿದರು.

" ಮನೇನ ಯಾತಕ್ಕೆ ಮಾರ್ಬಾರ್ದು ?" ಎಂದು ಉಯಿಲು ಬರೆದಿದ್ದ ನಕೀಲರು ಒಂದು ದಿನ ಕೇಳಿದರು. "ಆ ಹಣದಿಂದ ಏನಾದರೂ ಅಂಗಡಿ ತೆರೆಯಬಹುದಲ್ಲಾ. ಮದುವೆ ಮಾಡ್ಕೊಂಡು ಹಾಯಾಗಿ ಇರ್ಬಹುದಲ್ಲಾ."

ನಾನು ನಕ್ಕು ಸುಮ್ಮನಾದೆ. ಆ ಮನೆಯನ್ನು ನಾನು ಮಾರ ಲಿಲ್ಲ. ಅಜ್ಜಿ ನನಗೆ ಕೊಟ್ಟುದನ್ನು ಹಾಗೆ ಬಿಟ್ಟು ಕೊಡಲು ನಾನು ಇಷ್ಟಪಡಲಿಲ್ಲ.