ಪುಟ:Vimoochane.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೨

ವಿಮೋಚನೆ

ಕತ್ತಲಾಗುತ್ತ ಬಂದಿತ್ತು. ಆ ಆಗ್ರಹಾರದ ಬೀದಿಯಲ್ಲಿ ನಾನು ನಡೆದು ಬರುತ್ತಿದ್ದೆ ಒಂದೆಡೆ ನಾಲ್ಕಾರು ಜನ, ನೆಲದ ಮೇಲು ರುಳಿದ್ದ ಯುವತಿಯೂಬ್ಬಳನ್ನು ಸುತ್ತುವರಿದಿದ್ದರು. ಎಲ್ಲಾರೂ ಮಾತ ನಾಡುವವರೇ, ಎಲ್ಲರೂ ಶಪಿಸುವವರೇ. ನಾನು ಆ ಗುಂಪನ್ನು ಸಮಿಪಿಸಿದೆ. ಒಂದು ಕ್ಷಣ ಕಿವಿಗೊಟ್ಟು ನಿಂತೆ. ಆದರೆ ಏನೂ ಆರ್ಥವಾಗಲಿಲ್ಲ. ನೆಲದ ಮೇಲೆ ಮುಖಾ ಮರೆಸಿ ಬಿದ್ದಿದ್ದ ಆ ಹೆಂಗಸು ನನ್ನ ವಯಸ್ಸಿನಾಕೆಯೇ ಇದಿರಬೇಕು. ಬಿಚ್ಚಿಹೋಗಿದ್ದ ತಲೆಗೂದಲು ಸುರುಳಿ ಸುರುಳಿಯಾಗಿ ಧೂಳರಾಶಿಯ ಮೇಲೆ ಬಿದ್ದಿತ್ತು. ಬಡತನದ ಸೀರೆ ರವಕೆ, ಮೈಮುಚ್ಚಲು ಯತ್ನಿಸುತ್ತಿದ್ದುವು........

"ಪಾಪಿ ರಂಡೆ...... ಏನೂ ತಿಳೀದ ಮೊದ್ದಿನ ಹಾಗೆ ಬಿದ್ಕೊಂಡಿ ದಾಳೆ. ಎಷ್ಟು ಚೆನ್ನಾಗಿ ಮಾಡ್ತಾಳೆ ಪಾರ್ಟು! ನಾಟ್ಕದ್ಕಂಪನಿ ಸೇರ್ಕೊಳ್ಳೆ ಮಾರಾಯ್ತಿ. ನಮ್ಮನೇನ ಯಾತಕ್ಕೆ ಬೀದಿಗೆಳೀ ತೀಯ.........."

ಹಾಗೆ ಶಪಿಸುತ್ತಿದ್ದವಳು ವಯಸ್ಸಾದ ಒಬ್ಬ ಸ್ತ್ರಿ. ಇನ್ನೊಬ್ಬ ಒಂದು ದೊಣ್ಣೆ ತಂದುಬ್ದಿದಿದ ಹೆಣ್ಣಿಗೆ ಬಡೆಯತೊಡಗಿದ.

"ಹಾಗೆ, ಹಾಗೆ, ನೋವಾಗತ್ತೇನೊ ಪಾಪ."

ಅದನು ನೋಡುತ್ತ ಸುಮ್ಮನಿರುವುದು ನನ್ನಿಂದಾಗಲಿಲ್ಲ. ಮುಂದಕ್ಕೆ ಸಾಗಿ ಆ ದೊಣ್ಣೆಯನ್ನು ಕಸಿದುಕೊಂಡೆ. ಅದನ್ನು ಹಿಡಿದವ ನನ್ನು ಹಿಂದಕ್ಕೆ ತಳ್ಳಿದೆ. ಅಲ್ಲಿದ್ದವರೆಲ್ಲಾ ಕ್ಷಣಕಾಲ ಸತ್ತ ಶವ ಗಳಾದರು. ಮರುಕ್ಷಣವೇ ಅವುಗಳಿಗೆ ಜೀವ ಬಂತು.

"ಓ ಹೋ ಹೋ,"ಎಂದು ಯಾರೋ ವ್ಯಂಗ್ಯವಾಗಿ ನಕ್ಕರು.

ನಾನು ಕಣ್ಣು ಕೆರಳಿಸಿ ಹಾಗೆ ನಕ್ಕವನನ್ನೆ ನೋಡಿದೆ.

"ಎಂಥ ಮನುಷ್ಯರೋ ನೀವು? ಏನಿದರರ್ಥ ? ಹೀಗೆಯೋ ನೀವು ಹೆಂಗಸರನ್ನು ರಕ್ಷಣೆ ಮಾಡೋದು?"

ನಾನು ಏನನ್ನೊ ಮಾತನಾಡುತ್ತಿದ್ದೆ. ನೆಲದ ಮೇಲೆ ಬಿದ್ದಿದ್ದ ಆ ಹೆಂಗಸು ಮುಖವೆತ್ತಿ ನನ್ನನ್ನೆ ನೋಡಿದಳು. ಆ ನೋಡಿದಳು. ಆ ನೋಟದಲ್ಲಿ ದೈನ್ಯತೆ ಇತ್ತು;ಸಹಾಯದ ಯಾಚನೆಯಿತ್ತು; ತಾನು ನಿರಾಪರಾಧಿ