ಪುಟ:Vimoochane.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಲ್ಲಿ ನಾನು ತರಗತಿಗೆ ಮೊದಲಿಗನಾಗಿದ್ದೆ ಹಿರೇಮಣಿ ಈಗ.........

ಮತ್ತೆ ಆ ಚೌಕದ ನೆನಪು.....

ಆ ನೆನಪಿನಲ್ಲೇ ನಿದ್ದೆ.....

ನಿದ್ದೆಯಲ್ಲಿ ನಾನು ಆಗ, ಗೊರಕೆ ಹೊಡೆಯುತ್ತಿದ್ದೆನೋ ಇಲ್ಲವೋ ತಿಳಿಯದು. ಅಮೀರ್ ಮತ್ತು ಶೀಲಾ ಗೊರಕೆಗಾಗಿ

ನನ್ನನು ಎಂದೂ ಗೇಲಿ ಮಾಡಿದವರಲ್ಲಿ. ನನ್ನ ಜೀವನದಲ್ಲಿ ಮತ್ತೊಂದು ರಾತ್ರೆ ಕಳೆದು ಬೆಳಗಾಯಿತು. ಅಲ್ಲಿಂದೆದ್ದು, ಬೀದಿಯುದ್ದಕ್ಕೂ ಉರಿಯುತ್ತಿದ ಸಿಗರೇಟಿನ ಜೊತೆ ಗೂಡಿ ನಡೆದು, ನಮ್ಮ ಮನೆ ಸೇರಿದೆ.

ನೆರೆಮನೆಯವರಿಗೆ, ನನ್ನನ್ನು ಮಾತನಾಡಿಸುವ ಆಸಕ್ತಿ ಇದ್ದಂತೆ ತೋರಲಿಲ್ಲ. ಆ ದಿನವೇನೋ ನೀರು ಸೇದಲೆಂದು ಕೊಡ ಹಗ್ಗವನ್ನು ಎರವಲು ಪಡೆದೆ......ಇದೊಂದು ಮನೆಯಾಗಬೇಕಾದರೆ ಇಲ್ಲಿ ಕೆಲವು ಸಾಮಾನುಗಳಾದರೂ ಇರಬೇಕು. ಇಲ್ಲದೆ ಹೋದರೆ, ಹೈಸ್ಕೂಲಿನ ಜಗಲಿಯೂ ಒಂದೇ ಈ ಮನೆಯೂ ಒಂದೇ.

ಸೇವೆ ಮಾಡಿ ಜೋಟುದ್ದವಾಗಿದ್ದ ಪರಕೆಯೊಂದು, ಒಂದೆಡೆ ಕುಳಿತಿತ್ತು. ಅದನ್ನೆತ್ತಿಕೊಂಡು, ಮನೆಯನ್ನೆಲ್ಲಾ ಗುಡುರಸಿದೆ. ಈ ಮನೆಯ ಗೋಡೆಗಳಿಗೆ ಸುಣ್ಣಸಾರಿಸಿದರಾಗಬಹುದೆಂದು ತೋರಿತು ಅಜ್ಜಿ ನನಗೋಸ್ಕರ ಬಿಟ್ಟು ಹೋದ ಈ ಮನೆ ಎಷ್ಟೊಂದು ವಿಶಾಲವಾ ಗಿಲ್ಲ! ಅಮೀರನೂ ಶೀಲಳೂ ಇದ್ದ ಆ ಗೂಡು?......ನನಗೊಬ್ಬ ನಿಗೇ ಇಷ್ಟೊಂದು ದೊಡ್ಡಮನೆ ಯಾಕೆ ಬೇಕು? ಆದರೆ ನನ್ನ ಜೀವನ ದಲೂ ಯಾರಾದರೊಬ್ಬಳು ಶೀಲ-ಥೂ! ಧೂಳು ನನ್ನ ಮೂಗಿನ ಒಳಹೊಕ್ಕಿತ್ತು. ನಾನು ಸೀದಿದೆ ಮೂಗಿನ ನೀರನ್ನು, ಅಲ್ಲೆ ಎಸೆ ಯಲು ಇಷ್ಟಪಡದೆ ಹಿತ್ತಿಲ ಬಾಗಿಲಿಗೆ ಹೋದೆ. ಅಲ್ಲಿ ಆ ಗುಡಿಸಲು ನಿಂತಿತ್ತು. ನಾನು ಬೆಳೆದು ದೊಡ್ಡವನಾದ, ದೊಡ್ಡವನಾದ ನನ್ನ ತಂದೆ ಬೆಳೆದು ಮುದುಕನಾದ, ಆ ಕೊಟ್ಟಿಗೆ. ಅಲ್ಲಿ ರುಕ್ಕೂ ಚಂದ್ರೂ ಎನ್ನುತ್ತಾ, ತಂದೆ ಸತ್ತಿದ್ದ......"ಚಂದ್ರೂ, ನೀನು ಆ ದಿವ್ಸ ಪಾಕೀಟು ಕದ್ದಿರಲಿಲ್ಲ ಅಲ್ವ? ಅಲ್ವ ಚಂದ್ರೂ?".....ನನ್ನೆದೆ