ಪುಟ:Vimoochane.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದ್ದುದು ಒಂದೇ ಸಾಲು. ನಾನು ಅತ್ತ ನಡೆದೆ. ಅದೆಂತಹ ಚಿತ್ರವೋ ಏನೋ.. ಬಾಲ್ಕನಿಯಲ್ಲಿ ಹೆಚ್ಚು ಜನರಿರಲಿಲ್ಲ, ನಾಲ್ಕಾರು ಜನ ಮುಖ ತಿರುಗಿಸಿ, ಚಿಕ್ಕ ಹುಡುಗಿಯ ಹಾಗೆ ಕಕಿಲಕಿಲನೆ ನಗುತ್ತಿದ್ದ ಈ ತಾಯಿಯನ್ನೆ ನೋಡುತ್ತಿದ್ದರು. ಆಕೆ ಅತ್ತ ಇತ್ತ ಕತ್ತು ತಿರುಗಿಸು ತ್ತಿದ್ದಳು. ಅವಳ ಕಟಾಕ್ಷ ಹಿಂಭಾಗದಲ್ಲೆ ಇದ್ದ ನನ್ನ ಮೇಲೂ ಬೀಳ ದಿರಲಿಲ್ಲ, ದೀಪ ಆರಿಕೊಂಡಿತು. ಚಿತ್ರದ ಆರಂಭ.

ಸಿಗರೇಟು ಹೊರ ತೆಗೆದು ಮುಖ ಬಾಗಿಸಿ, ನಾನು ಸೇದ ಬಹುದೆ? ಆಕ್ಷೇಪವಿಲ್ಲವಷ್ಟೆ ? ಎಂದು ಇಂಗ್ಲಿಷಿನಲ್ಲಿ ಕೇಳಿದೆ.

"ಸೇದಿ, ಅದಕ್ಕೆನಂತೆ? ಏನು ಮಾಡೋದಕ್ಕೂ ನೀವು ಸ್ವತಂತ್ರರು."......

ಆ ಭಾಷೆ ನನಗೆ ಹೊಸದಾಗಿತ್ತು, ಆದರೆ ಆರ್ಥವಾಗುವುದು ತಡವಾಗಲಿಲ್ಲ........ ಏನು ಮಾಡುವುದಕ್ಕೂ ನಾನು ಸ್ವತಂತ್ರ........

ಅವರು ತೆರೆಯ ಮೇಲಿನ ಚಿತ್ರಗಳನ್ನು ನೋಡುತ್ತಿದ್ದರು. ನಾನು ಆ ಶ್ರೀಮತಿಕೆಯ ಕತ್ತಿನ ಮೇಲಿನ ಸರವನ್ನು ನೋಡುತ್ತಿದ್ದೆ. ದೃಷ್ಟಿ ಮತ್ತೂ ಅತ್ತಿತ್ತ ಚಲಿಸುತ್ತಿತ್ತು, ಆ ಬ್ರೌಸಿನ ಆಕೃತಿ, ತೆರೆದು ನಿಂತ ಕೊರಳ ಭಾಗ, ಮತ್ತೂ ಕೆಳಗೆ–ಇಷ್ಟಿದ್ದರೂ ದೃಷ್ಟಿ ನನ್ನ ಹತೋಟಿಯನ್ನು ತಪ್ಪಿಹೋಗದೆ ಅ ಸರದ ಮೇಲೆಯೇ ಕುಳಿತಿತ್ತು. ಆ ಸರ... ಅದರ ಸುಲಭವಾದ ಕೊಂಡಿ........ ಅದಕ್ಕೆ ದೊರೆಯ ಬಹುದಾದ ಬೆಲೆ....... ಇಂಥದನ್ನು ಮಾರಲು ಬೇಕಾಗುವ ಏರ್ಪಾಟು ........ಯೋಚನೆ ಮುಂದೆ ಧಾವಿಸಿದಾಗ ಮತ್ತೆ ಹಿಡಿದು ತಂದು ವಸ್ತು ಸ್ಥಿತಿಗೆ ನಿಲ್ಲಿಸುತ್ತಿದ್ದೆ. ಮೊದಲ ಕೆಲಸ ಮೊದಲು.

ಎಡ ಕಾಲ ಮೇಲೆ ವಿರಮಿಸಿದ್ದ ನನ್ನ ಬಲ ಕಾಲು ಆಕೆಯ ಕುರ್ಚಿಯ ಹಿಂಭಾಗದಲ್ಲಿ ಮೌನವಾಗಿ ನಿಶ್ಚಲವಾಗಿ ನಿಂತಿತ್ತು. ತಮ್ಮ ನೊಡನೆ ಮಾತನಾಡುತ್ತಿದ್ದ ಉತ್ಸಾಹದ ಭರದಲ್ಲಿ, ಒಮ್ಮೆ ಆಕೆ ಎಡ ಗೈಯನ್ನು ಹಿಂಭಾಗಕ್ಕೆ ಇಳಿಬಿಟ್ಟಳು. ಆ ಕೈ ನನ್ನ ಉಣ್ಣೆಯ ಪ್ಯಾಂಟನ್ನು ಸೋಂಕಿತು. ಅದು ಹತ್ತಿಯ ಬಟ್ಟಯಲ್ಲವಿಂದು ಅದಕ್ಕೆ ಸಮಾಧಾನವಾಯಿತೇನೋ? ನಾನು ಕಾಲನ್ನು ಚಲಿಸಲಿಲ್ಲ. ಆಕೆಯ