ಪುಟ:Vimoochane.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೀರಾ?"ಎಂದ.

"ಕಾಣಿಸ್ತಿದೆ.ವಾರಂಟ್ ಇದ್ದರೆ, ನಿಮಗೆ ಧೈರ್ಯವಿದ್ದರೆ,

ಮುಂದಿನ ಕೆಲಸ ಮಾಡಬಹುದು."

ಆತ ಮುಂದಿನ ಕೆಲಸ ಮಾಡಲಿಲ್ಲ.

ನಾನೂ ನಗುತ್ತಾ ಹೇಳಿದೆ.

"ಹೀಗೆ ಮಾಡಿದರೆ ನೀವು ಇನ್ಸ್ ಪೆಕ್ಟರ್ ಪದವಿಗೇರೋದು

ಬಹಳ ನಿಧಾನವಾಧೀತು.ಹತ್ತು ನಿಮಿಷಗಳಲ್ಲೇ ಎಷ್ಟೊಂದು ಬದ ಲಾಯಿಸ್ಬಿಟ್ಟರಿ......!"

ಅವನು ಮರುಮಾತನಾಡದೆ ಬೀದಿಗಿಳಿದು ಹೋದ. ನನ್ನ

ಸಿಗರೇಟನ ಹೊಗೆ ಮೆಟ್ಟಲು ತನಕವೂ ಆತನನ್ನು ಹಿಂಬಾಲಿಸಿತು.

ಆ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ಮತ್ತೇನನ್ನೂ

ಮಾಡಲು ಸಮರ್ಥರಾಗಲಿಲ್ಲ.ಆದರೆ ನನ್ನ ಚಟುವಟಿಗಳನ್ನು ಮಾತ್ರ ಹೆಚ್ಚು ಎಚ್ಚರದಿಂದ ಮಾಡಬೇಕಾಗುತ್ತಿತ್ತು. ಬಳಗದವರು ಯಾರನ್ನೂ ಹಗಲು ಹೊತ್ತು ಭೇಟಿಯಾಗುವುದು ಸಾಧ್ಯವಿರಲಿಲ್ಲ.

ಈ ಅವಧಿಯಲ್ಲಿ,ಹೆಚ್ಚು ಹೆಚ್ಚಾಗಿ ಸಿಗರೇಟು ಸೇದುವುದು ನನ್ನ

ಗೊಂದು ಚಟವಾಯಿತು.ಪುಸ್ತಕಗಳು ಮತ್ತು ಸಿಗರೇಟು.ಚಲಂ, ನನ್ನ ಓದುವ ಹವ್ಯಾಸದ ಬಗ್ಗೆ ಗೇಲಿ ಮಾಡುತ್ತಿರಲಿಲ್ಲ. ಆದರೆ ಹಲವೊಮ್ಮೆ ಮಾಡಬೇಕಾದ ಕೆಲಸವನ್ನೂ ಮರೆತು ನಾನು ಓದು ವುದರಲ್ಲೇ ತಲ್ಲೀನನಾದಾಗ ಮಾತ್ರ, ಅವನಿಗೆ ಕಸಿವಿಸಿಯಾಗುತಿತ್ತು. ಹೀಗಿದ್ದರೂ ಒಮ್ಮೆಯೂ ಕೆಟ್ಟ ಮಾತನ್ನು ಅವನು ಆಡಿದವನಲ್ಲ.

"ಶೇಖರ್,ಆಗಾಗ್ಗೆ ಮನೆಗೆ ಬರುತ್ತಿರು,"ಎಂದು ಆತ

ಆಹ್ವಾನಿಸುತಿದ್ದ. ಆದರೆ ನಾನು,ಆತನ ಮತ್ತು ಸಾವಿತ್ರಿಯ ಸಂಸಾರದೊಳಕ್ಕೆ ಪ್ರವೇಶಿಸಲು ಇಚ್ಚಿಸಲಿಲ್ಲ.ಮುಂಬಯಿಯಲ್ಲಿ ಆಮೀರ ಮತ್ತು ಶೀಲರ ಜೀವನದಲ್ಲಿ ನಾನೊಬ್ಬ ಪಾಲುಗಾರನಾಗಿ ಮಾನವೀಯ ಪ್ರೇಮದ ರುಚಿಯನ್ನು ಕಂಡಿದ್ದೆ.ಆದರೆ ಇನ್ನು ನನ್ನ ಬಗ್ಗೆ ಬೇರೆಯವರ ಅಂತಹ ಒಲವನ್ನು ನಾನು ಅಪೇಕ್ಷಿಸಲಿಲ್ಲ.