ಕುಗ್ಗಿ ಹೋಗಿರುವ ಬಡಕಲು ಜೀವಿ. ಹಿಂದೆ ನನ್ನನ್ನು ಸ್ಫುರದ್ರೂಪಿ
ಎಂದು ಕರೆಯತ್ತಿದ್ದರು. ಈಗಲೂ ನಾನು ಸುಂದರನೆ. ಆದರೆ
ನೆತ್ತಿಯ ನಡುವಿನಲ್ಲೇ ಹಣೆಯ ಆಂಚಿನಿಂದ ಮೊದಲಾಗಿ ತಲೆ
ಕೂದಲು ಬೆಳ್ಳಿಯಾಗಿದೆ. ದವಡೆಯ ಎಲುಬುಗಳು ಆಸ್ಪಷ್ಟವಾಗಿ
ಎದ್ದುನಿಂತಿವೆ. ಕಣ್ಣುಗಳು ಗುಳಿಬಿದ್ದಿವೆ. ಕಣ್ಣುರೆಪ್ಪೆಯ ಸುತ್ತಲೂ
ಬಣ್ಣ ಕರಿದಾಗಿದೆ. ಯಾಕೆ ಹೀಗಾಯಿತು? ನ್ಯಾಯಾಸ್ಥಾನದಲ್ಲಿ
ನನ್ನನ್ನೇ ನೋಡುತ್ತಾ ನ್ಯಾಯಾಧೀಶರು ತಿಳಿವಳಿಕೆಯ ಮುಗುಳುನಗು
ನಗುತ್ತಾರೆ. ಕೆಂಪುಕೆಂಪನೆ ಹೊಳೆಯುವ ತುಂಬುಮುಖದ ಕೋಮಲ
ಕಾಯ ಅವರದು. ಅವರು ನ್ಯಾಯಮೂರ್ತಿಗಳು!ಹೀಗೆ ಬಡಕಲು
ಬಡಕಲಾಗಿರುವ ನಾನು? ಯಾಕೆ ಸಂದೇಹ ಉಂಟೆ? ನಾನು ಕೊಲೆ
ಪಾತಕಿ-ಕೊಲೆ ಪಾತಕಿ.
ಆದರೆ ನನ್ನನ್ನು ಇಲ್ಲಿ ಗೌರವಿಸುತ್ತಾರೆ. ಸೆರೆಮನೆಯ ಆವರಣ
ದೊಳಗೆ ಕಬ್ಬಿಣದ ಸರಳುಗಳ ಹಿಂದೆ ಬಂಧಿತನಾಗಿರುವ ನನ್ನ ಬಗ್ಗೆ
ಅವರಿಗೆ ಗೌರವವಿದೆ. ಕಾರಣ-ನಾನು ವಿದ್ಯಾವಂತ. ಅಧಿಕಾರಿ
ಗಳನ್ನು ನಾಚಿಸುವ ಹಾಗೆ ಆಂಗ್ಲರ ಭಾಷೆ ಮಾತಾಡಬಲ್ಲೆ. ಉಡುಗೆ
ತೊಡುಗೆಯ ಸರಳ ಠೀವಿಯಲಿ ಆಗರ್ಭ ಶ್ರೀಮಂತರನ್ನೂ ಮೀರಿಸ
ಬಲ್ಲೆ. ಅವರ ದೃಷ್ಟಿಯಲ್ಲಿ ನಾನು ಸಾಮಾನ್ಯ ಪಾತಕಿಯಲ್ಲ. ಎಲ್ಲರಿಗೂ
ವಿಸ್ಮಯವನ್ನುಂಟುಮಾಡಿರುವ ಮಹಾ ರಹಸ್ಯ ವ್ಯಕ್ತಿ.ಎರಡು ವಿಚಾರ
ಣೆಗಳ ನಡುವೆ ನಾನಿಲ್ಲಿ ಕುಳಿತಿದ್ದರೆ, ಈ ಜೈಲಿನ ಅಧಿಕಾರಿಗಳು ಒಂದು
ರೀತಿಯಲ್ಲಿ ಹೆಮ್ಮೆಪಡುತ್ತಾರೆ. ತಮ್ಮ ಬಿಡುವಿನ ಅವದಿಯಲ್ಲಿ
ನನ್ನೊಡನೆ ಹರಟೆಗಾಗಿ ಅವರು ಬರುತ್ತಾರೆ. ಆ ಮಾತು ಈ ಮಾತು
ಆಡುತ್ತಾರೆ. ನಿಯಮಗಳನ್ನು ಮೀರಿ ಹೆಚ್ಚು ಸಲಿಗೆಯಿಂದ ವರ್ತಿಸು
ತ್ತಾರೆ; ಸೌಕರ್ಯ ಒದಗಿಸುತ್ತಾರೆ. ಬರೆಯಲು ಬೇಕಾದ ಈ ಅನು
ಕೂಲತೆ ನನಗೆ ದೊರೆತಿರುವುದೂ ಅವರ ಔದಾರ್ಯದಿಂದಲೇ........
ನಾನು ಯಾರೆಂಬುದನ್ನು, ಏನೆಂಬುದನ್ನು, ಯಾಕೆ ಹೀಗೆ
ಎಂಬುದನ್ನು, ಯಾರಾದರೂ ಬಲ್ಲರೆ?ನನ್ನ ಬಾಳ್ವೆಯ ಹಲವು
ಅಧ್ಯಾಯಗಳನ್ನು ಎತ್ತಿ ತೋರಿಸಿ ನನ್ನ ಬಗ್ಗೆ ಯಾರಾದರೂ ಅಧಿಕಾರ
ಪುಟ:Vimoochane.pdf/೨೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೧೮
ವಿಮೋಚನೆ