ಪುಟ:Vimoochane.pdf/೨೮೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ವಂತಿಲ್ಲ. ಕನಸು ಬೀಳುವಂತಹ ನಿದ್ದೆಯೂ ನನ್ನ ಪಾಲಿಗೆ ಇನ್ನು ಇರುವಂತಿಲ್ಲ

ನನ್ನ ಜೀವನದ ಕಳೆದ ‌‌ಐದು ವರ್ಷಗಳ ಬಗ್ಗೆ ನಾನು ನಾಳೆ ಬರೆಯಬೇಕು. ಆ ಸ್ಮರಣೆಗಳೊ-ಹಸುರಾಗಿವೆ.ಮುಟ್ಟಿದರೆ ಉದುರುವ ಹಾಗೆ ಮನಸ್ಸನ್ನು ಮುತ್ತಿವೆ.ಅದಕ್ಕೊಂದು ರೂಪ ಕೊಟ್ಟು ಕಾಗದದ ಮೇಲಿಳಿಸಲು ನಾಳೆ ನಾನು ಸಮರ್ಥನಾಗಬೇಕು.

ಆ ಶಕ್ತಿಯನ್ನು ಕೊಡೆಂದು ಯಾರನ್ನಾದರೂ ನಾನು ಪ್ರಾರ್ಥಿ ಸಲೆ?

ಪ್ರಾರ್ಥನೆ ಮತ್ತು ನಾನು...ನಗು ಬರುತ್ತಿದೆ!

ನಮ್ಮ ಜನ,ತಮ್ಮ ಶಕ್ತಿಯಲ್ಲೇ ತಾವು ವಿಶ್ವಾಸವಿಡದೆ, ಹಿಡಿ ದುದು ಮುಟ್ಟಿದ್ದಕ್ಕೆಲ್ಲ ಇನ್ನೊಂದು ಶಕ್ತಿಯಲ್ಲಿ ವಿಶ್ವಾಸವಿಡುತ್ತಿರುವುದ ರಿಂದಲೇ ಹೀಗಾಗಿರುವರೋ ಏನೋ..

ಹೋಗಲಿ ಬಿಡಿ.ನನ್ನ ಅಭಿಪ್ರಾಯಕ್ಕೆನೀವು ಬೆಲೆಕೊಡ ಬೇಕಾದ್ದಿಲ್ಲ.

ಆದರೆ ನನ್ನ ಕತೆಯ ಉಳಿದ ಭಾಗವನ್ನು ನೀವು ತಿಳಿಯಲೇ ಬೇಕು.ಅದು ,ಇನ್ನೂ ಬದುಕಿರುವವನೊಬ್ಬನ ಬಯಕೆ... ನೀವು ಅದನ್ನು ಈಡೇರಿಸುವಿರೆಂದು ನಾನು ಬಲ್ಲೆ.