ಪುಟ:Vimoochane.pdf/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಇವುಗಳ್ನ ನೀವು ನೋಡಿಲ್ಲಾಂತ ಕಾಣುತ್ತೆ. ಯೂನಿಯನ್

ನವರು ಹೊರಡ್ಸಿದಾರೆ."

ಆ ಕರಪತ್ರಗಳನ್ನು "ಸತ್ಯದ ಬತ್ತಳಿಕೆಯಿಂದ ಮೊದಲ

ಬಾಣ," "--ಎರಡನೆ ಬಾಣ", ಎಂದು ಕರೆದಿದ್ದರು. ನಗರದ ಮಾಲೀಕರೆಲ್ಲ ಯುದ್ಧ ಕಾಲದಲ್ಲಿ ಬಹಿರಂಗವಾಗಿ ಸಂಪಾದಿಸಿದ ಲಾಭದ ವಿವರಗಳು ಆದರಲ್ಲಿದ್ದುವು. ಅ ಬಳಿಕ ಉಕ್ಕಿನಂಥ ಐಕ್ಯ ಕ್ಕಾಗಿ-- ಸಂಘಟತ ಹೋರಾಟಕ್ಕಾಗಿ--ಕರೆ.

ಯಾರೋ ಅವುಗಳನ್ನು, ಹೃದಯಕ್ಕೆ ನಾಟುವಂತೆ ಬರೆದಿದ್ದರು.

"ಇವು ಹ್ಯಾಗಿವೆ ಚೆಲುವಯ್ಯ?"

"ಹೋಪ್ ಲೆಸ್, ಕೃಷ್ಣರಾಜ್ ಕೈಲಿ ಬರೆಸಿದಾರೆ."

"ಯಾರು ಕೃಷ್ಣರಾಜ?"

"ಅವನೇ ಸಾರ್. ಲೇಖನ, ಕತೆ-ಗಿತೆ, ಬರೆದು ತಾನೂ ಒಬ್ಬ

ಪ್ರಗತಿಶೀಲ ಸಾಹಿತಿ ಅಂತ ಮೆರಿತಾನಲ್ಲ--ಅವನೇ."

ಆಗಾಗ್ಗೆ ಪತ್ರಿಕೆ ಪುಸ್ತಕಗಳನ್ನು ಓದುವ ಅಭ್ಯಾಸವಿದ್ದ ನನಗೆ

ಆ ಹೆಸರು ಅಪರಿಚಿತವಾಗಿರಲಿಲ್ಲ.

"ಯೂನಿಯನ್ ನವರು ಅಂಕೆ--ಸಂಖ್ಯೆ--ವಿವರ ಒದಗಿಸ್ತಾರೆ.

ಆತ ಬರಕೊಡ್ತಾನೆ."

"ಫೀಸು ಗೀಸು ಇವೆಯೋ--?"

"ಇಲ್ವೇ ಇರತ್ಯೆ ಸಾರ್ ...... ನೋಡಿ ಎಷ್ಟು ತುಚ್ಛವಾಗಿ

ಬರೆದಿದಾನೆ -- ಕೈಲಿ ಲೇಖನಿ ಇದೇಂತ, ಬರೆಯೋಕೆ ಕಾಗದ ಇದೇಂತ--"

ಸ್ವತಃ ತಾನೇ ಚರಂಡಿಯಲ್ಲಿ ಬ್ರಷ್ ಅದ್ದಿ ತುಚ್ಛವಾಗಿ ಬರೆಯು

ವವನ ದೃಷ್ಟಿಯಲ್ಲಿ, ಜಗತ್ತೇ ತುಚ್ಛವಾಗಿ ತೋರುತಿತ್ತು. ಕಾಮಾಲೆ ಕಾಹಿಲೆಯವನಿಗೆ ಪ್ರಪಂಚವೆಲ್ಲ ಅರಿಸಿನ-ಅರಿಸಿನವಾದ ಹಾಗೆ.... ಮುಂದೆ ಅವನ ಮಾತು ಕೇಳುವ ಇಷ್ಟ ನನಗಿರಲಿಲ್ಲ---ನಾನೆದ್ದು ಒಳ ಹೋದೆ.