ಪುಟ:Vimoochane.pdf/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸುಮಾರು ಇಪ್ಪತ್ತು ವರ್ಷಗಳಿಗೆ ಹಿಂದೆ ಅಂಥದೇ ಮೆರವಣಿಗೆಗಳನ್ನು ನಾನು ಕಂಡಿದ್ದೆ....ಅವರು ಆಗಲೆ ಬೊಂಬಾಯಿಯ ಮುಂದುವರಿದ ಕಾರ್ಮಿಕರಾಗಿದ್ದರು. ಇಷ್ಟು ವರ್ಷಗಳ ಮೇಲೆ ನಮ್ಮವರಲ್ಲೂ ಸೆಟೆದು ನಿಲ್ಲುವ ಚೈತನ್ಯ ಮೂಡಿತ್ತು, ಸ್ವಲ್ಪ ಮೂಡಿತ್ತು, ಅಷ್ಟೆ. ಆದರೆ ನಮ್ಮವರಿನ್ನೂ ಪ್ಯಾ೦ಟು ಷರಟುಗಳ ಔದ್ಯೋಗಿಕ ಕಾರ್ಮಿಕ ರಾಗಿರಲಿಲ್ಲ. ನನ್ನ ತ೦ದೆಯ ತಲೆಯ ಮೇಲೆ ಆಗ ಇದ್ದ೦ತಹ ಜುಟ್ಟು ಈಗಲೂ ಹಲವಾರು ಕೆಲಸಗಾರರಿಗಿತ್ತು.

ನಾನು, ನನ್ನ ಕ್ರಾಪಿನ ಮೇಲೆ ಕೈಯೋಡಿಸಿದೆ. ಕೂದಲು

ನೀಳವಾಗಿ ಬೆಳೆದಿತ್ತು. ಕ್ರಾಪು ಮಾಡಿಸಬೇಕಾಗಿತ್ತು. ಆದರೆ ಅಲಕ್ಷ್ಯ ಮಾಡಿದ್ದೆ. ಬಿಳಿದು-ಕರಿದುಗಳು ಮಿಶ್ರವಾಗಿ ಬೆಳೆಯುತ್ತ ಲಿದ್ದ ಕೇಶರಾಶಿ...

ಮೆರವಣಿಗೆ ದಾಟಿ ಹೋಗಿತ್ತು...

ಭಾರವಾದ ಹೃದಯದ ಹೊರೆ ಹೊತ್ತು ಎಚ್ಚರವಿರುವುದು

ಸಾಧ್ಯವಿರಲಿಲ್ಲ. ನನಗೆ ನಿದ್ದೆ ಬೇಕಾಗಿತ್ತು-ಎಲ್ಲವನ್ನೂ ಮರೆಸ ಬಲ್ಲ೦ತಹ ನಿದ್ದೆ.

ಮಲಗುವ ಮ೦ಚದ ಮೇಲೆ ಗೋಡೆಯ ಅಲಮಾರದಲ್ಲಿ ಎರಡು

ಸೀಸೆಗಳಲ್ಲಿ ಬೀರ್ ಮೌನವಾಗಿತ್ತು.

ಹೊರ ಬಾಗಿಲಿಗೆ ಅಗಣಿ ತಗಲಿಸಿ, ಕಿಟಕಿಗಳೆಲ್ಲವನ್ನೂ ತೆರೆ

ದಿಟ್ಟು, ಎರಡು ಸೀಸೆಗಳನ್ನೂ ಬರಿದು ಮಾಡಿ ನಾನು ಹಾಸಿಗೆಯ ಮೇಲುರುಳಿದೆ.

ಮೆಲ್ಲನೆ ಬೆಳಕನ್ನೋಡಿಸಿ ಕತ್ತಲು ಒಳನುಗ್ಗುವುದು. ರಾತ್ರೆ

ಯೆಲ್ಲವೂ ಕಿಟಕಿಗಳೆಡೆಯಿ೦ದ ಗಾಳಿ ಓಡಿಯಾಡುವುದು... ನಿದ್ದೆ ದೇಹದ ನರನಾಡಿಗಳನ್ನು ಸಡಿಲಗೊಳಿಸುವ ಪರಿಸ್ಥಿತಿ.... ಆ ಬಳಿಕ ಸರಾಗವಾದ ಉಸಿರಾಟ....

ಹಾಗಾಗಲೆ೦ದು ನಾನು ಹ೦ಬಲಿಸಿದೆ... ಆದರೆ ಅ೦ಥ ಹ೦ಬಲ

ಕೂಡಾ ಈಡೇರುವುದು ಸುಲಭವಾಗಿರಲಿಲ್ಲ. ಆ ಹಗಲು ಶ್ರೀಕ೦ಠ ನನ್ನೊಡನೆ ಹೇಳಿದ ಮಾತುಗಳೆಲ್ಲ ಮತ್ತೆ ಜೀವ ತಳೆದು ನನ್ನೆದುರು