ಪುಟ:Vimoochane.pdf/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರ ಗುಂಪಾಗಿ ಆ ಬೆಳಗಿನ ದಿನ ಪತ್ರಿಕೆಯೋದುತ್ತಿದ್ದುದನ್ನು ಕಂಡೆ ಕೌಂಟರಿನ ಬಳಿ ಕುಳಿತಿದ್ದ ಮ್ಯಾನೇಜರ್ ಬೇರೆ, ಪತ್ರಿಕೆಯ ವರದಿ ಯನ್ನೇ ವಿವರಿಸಿ ಗಟ್ಟಿಯಾಗಿ ಹೇಳುತಿದ್ದ

ಕೆಲಸಗಾರರ ಸಭೆಯಲ್ಲಿ ಗಲಭೆ: ಟೀರ್‌ಗ್ಯಾಸ್:ಲಾಠೀ ಚಾರ್ಜು......ಹಲವರ ಬಂಧನ.....

ನನ್ನೆದೆ ಡವಡವನೆ ಹೊಡೆದುಕೊಳ್ಳುತಿತ್ತು. ನಾನೂ ಆ ಗುಂಪನ್ನು ಸೇರಿ ಬೇರೊಬ್ಬರ ಭುಜದ ಮೇಲಿಂದ ಹಣಿಕಿ ಹಾಕಿ ಆ ಪತ್ರಿಕೆಯನ್ನೋದಿದೆ... ಘಾತವಾಗಿತ್ತು... ಯುದ್ಧದಲ್ಲಿ ಗಾಯ ಗೊಂಡವರ ಹೆಸರುಗಳ ಪ್ರಕಟಣೆಯನ್ನು ಸಂಬಂಧಿಕರು ಪ್ರಾಯಶ: ದೃಷ್ಟಿ ಹಾಯಿಸಿದೆ. ಅಕ್ಷರಗಳು ಮಸಕಾದುವು. ಏನೂ ಕಾಣಿಸದೆ ಹೋದಾಗ ಸಮಾಧಾನದ ನಿಟ್ಟುಸಿರನ್ನು ಬಿಟ್ಟಿ.... ಆದರೆ ಆ ಸಮಾ ಧಾನ ಕ್ಷಣಿಕವಾಗಿತ್ತು. ವಾರ್ತೆಯ ಆರಂಭದಲ್ಲೇ ಆ ಹೆಸರು ಗಳಿದ್ದುವು.

".......ಕೆಲಸಗಾರರಲ್ಲಿ ಒಂದು ವಿಭಾಗದವರು ಹೊಡೆದುದರ ಫಲವಾಗಿ ಯೂನಿಯನ್ ಕಾರ್ಯದರ್ಶಿ ಮುನಿಸ್ವಾಮಪ್ಪನವರಿಗೂ ಉಪಾಧ್ಯಕ್ಷ್ ನಾರಾಯಣರಿಗೂ ತೀವ್ರ ಗಾಯಗಳಾಗಿವೆ, ಅತಿಥಿ ಭಾಷಣಕಾರರಾಗಿ ಸಭೆಗೆ ಬಂದಿದ್ದ ಸಾಹಿತಿ ಕೃಷ್ಣರಾಜರೂ ಆ ಗೊಂದ ಲದಲ್ಲಿ ಸಿಲುಕಿಕೊಂಡಿತು,ಅವರಿಗೂ ಗಾಯಗಳಾಗಿವೆ.......

ಮುನಿಸ್ವಾಮಪ್ಪ, ನಾರಾಯಣ. ಕೃಷ್ಣರಾಜರು....

ಆ ಬಳಿಕ ಸಭೆ ಚದುರಿಸಲು ಆಶ್ರುವಾಯು ಪ್ರಯೋಗ, ಶಾಂತಿ ಸ್ಥಾಪಿಸಲು ಲಾಠೀ ಚಾರ್ಜು. ಒಡೆದ ತಲೆಗಳು: ಗಲಭೆ ಮಾಡಿದ ರೆಂದು ಇಪ್ಪತ್ತೈದು ಜನರ ಬಂಧನ....

ಗಾಯಗೊಂಡವರು?--

ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು.

ಮತ್ತೊಮ್ಮೆ ನಾನು ಆ ವಾರ್ತೆಯನ್ನು ಆರಂಭದಿಣ್ದ ಕೊನೆಯ

ವರೆಗೂ ಓದಿದೆ--ಸಾವಕಾಶವಾಗಿ.