ಪುಟ:Yugaantara - Gokaak.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨ ಯುಗಾಂತರ • L+ ರಿಗೂ ನೀವಿಷ್ಟು ಬುದ್ದಿ ಹೇಳಿರಿ ! ಸೂತ್ರಯಜ್ಞವನ್ನೂ ಚರಖಜಯಂತಿ ಯನ್ನೂ ಸಾಗಿಸುತ್ತ ಇವರು ನಮ್ಮನ್ನು ಒಂದಲ್ಲ ಎರಡು ಸಾವಿರ ವರುಷ ಹಿಂದೆ ಒಯ್ಯಬೇಕೆಂದಿದ್ದಾರೆ. [ ಈಗ ಬನಸಿಲಾಲನು ಬಿದ್ದು ಬಿದ್ದು ನಗುತ್ತಾನೆ. ಕಾ೦ತಿಚಂದ್ರ ರೋಹಿಣಿದೇವಿಯರು ಮೋರೆ ಬಿಗಿದುಕೊಂಡು ಸುಮ್ಮನೆ ಕೂಡುತ್ತಾರೆ ] ಬನಸಿಲಾಲ : ನೋಡೋಣ ! ಅವರೂ ಬದಲಾಗಬಹುದು ! ಕಂತಿಚಂದ್ರಜಿ ! ಕಾ: ಪ್ರೀಷ್ ಮೃಣಾಲಿನಿಯವರ ಮಾತನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದು. ಕಾ:ಮೈಡ್ ಪಾರ್ಟಿಯ ನಾಲಗೆಯೇ ಹೀಗೆ. ಅಲ್ಲಿ ಸರಸ್ವತಿ ನೆಲಿಸಿರುವದಿಲ್ಲ. ಮಹಂಕಾಳಿ ಯುದ ಸವ್ರ ದಳಾಗಿ ನಿಂತಿರುತ್ತಾಳೆ. ಅದಿರಲಿ, ನಾನೀಗ ಒಂದು ಕೆಲಸದ ನಿಮಿತ್ತ ಬಂ ವೈನೆ. ಸ್ವಲ್ಪ .... ಇನ್ನೊಂದು ಕಡೆಗೆ .... ಕಾಂತಿಚಂದ್ರ: ಇಲ್ಲಿ ಪರಕೀಯರಾರೂ ಇಲ್ಲ. ತಾವು ಮುಕ್ತ ಮನಸ್ಸಿನಿಂದ ಮಾತನಾಡಬಹುದು. [ ಅರ್ಥಪೂರ್ಣವಾಗಿ ರೋಹಿಣಿದೇವಿಯ ಕಡೆಗೆ ನೋಡುತ್ತಾನೆ.] ಬನಸಿಲಾಲ : ಹೃ ! ! ಹೂ ! ಹಾಗೇನೂ ಇಲ್ಲ. ಯಾವುದಕ್ಕೂ ನಾನು ಸಿದ್ಧ, ನಾನು ಈಗ ಬಂದಿದ್ದು ಅನಾಥಾಶ್ರಮದ ವಿಷಯವಾಗಿ, ಮತ್ತೆ ....... ಮತ್ತೆ .... ಕಾಮೈಡ್ ಮೃಣಾಲಿನಿ ! ಇತ್ತ ನೀವು ಕಿವಿಗೊಡಬೇಡಿರಿ ! ಇದು ಬರಿ ಗೊಡ್ಡು ಹರಟೆ ! ಮೃಣಾಲಿನಿ : [ ಪುಸ್ತಕದಿಂದ ಮೋರೆ ಎತ್ತಿ] ನನ್ನನ್ನು ಮಾತನಾಡಿಸಬೇ ಡಿರಿ ! ನಾನೀಗ ಪುಸ್ತಕದ ನಾದದಲ್ಲಿದ್ದೇನೆ. ನನ್ನ ಕಿವಿ ತೆರೆದಿದ್ದರೂ ಅಲ್ಲಿ ಕೇಳುವ ಶಬ್ದಗಳನ್ನು ಮನಸ್ಸು ಗ್ರಹಿಸುವದಿಲ್ಲ. ಏನು ನಾನು ಇಲ್ಲಿಂದ ಎದ್ದು ಹೋಗಲೇನು ? ಹಾಗೆ ಮಾಡಲೂ ನನ್ನ ತಯಾರಿಯಿದೆ. ಮುಚ್ಚುಮರೆಯಿಲ್ಲದೆ ಇದ್ದುದನ್ನು ಇದ್ದ ಹಾಗೆ ಹೇಳಿರಿ ! ಬನಸಿಲಾಲ : ಛೇ ! ಛೇ ! ಹಾಗೆಂದಿಗಂದೇನು ! ಇದು ತಾತ್ವಿಕ ವಿಚಾರ ವಲ್ಲ. ಅದರಿಂದ ನಿಮ್ಮೆದುರಿಗೆ ಮಾತನಾಡಲು ಸಂಕೋಚವೆನಿಸಿತು. ಅಷ್ಟೆ, ಕಾಂತಿಚಂದ್ರಜಿ ! ಅನಾಥಾಶ್ರಮದ ಅಧ್ಯಕ್ಷರಾಗಲು ತಾವು ಒಪ್ಪಿರುವಿರೆಂದು ನಾನು ಕೇಳುತ್ತೇನೆ. ಆದರೆ ಈ ಸಲ ನಾನು ಅಧ್ಯಕ್ಷ