ಪುಟ:Yugaantara - Gokaak.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಕೋಸಲೇಂದ್ರ : ಓಹೋ ! ಇದು ಬೇರೆ ! ಹಾಗಿದ್ದರೆ ನೀನು ಮೇಲಿಂದ ಮೇಲೆ ಕೇಳುತ್ತಿದ್ದ ಒಂದು ಪ್ರಶ್ನೆಗೆ ಉತ್ತರ ಹೇಳಲು ಇದು ಒಳ್ಳೆಯ ಸಮಯ, ಕವಿಯೆಂದರೆ ಏನು ? ಎಂದು ನೀನು ನನ್ನನ್ನು ಕೆಣಕುತ್ತಿದೆ. ಈಗ ಹೇಳುತ್ತೇನೆ. ಒಂದು ಅಭಿಪ್ರಾಯವನ್ನು ಇನ್ನೊಂದರ ಮೇಲೆ -ಇಟ್ಟಂಗಿಯ ಮೇಲೆ ಇಟ್ಟಂಗಿಯನ್ನಿಟ್ಟಂತೆ-ಇಟ್ಟು ತನ್ನ ಮನೆ-ಮನ ಕಟ್ಟಿ ಕೊಳ್ಳುವವನೇ ಶಾಸ್ತ್ರಿ-ಮೇಸ್ತ್ರಿ ! ತನ್ನ ಮನೆಯ ಎಲ್ಲ ಜಂತಿಗಳನ್ನೂ ತೊಲೆಗಳನ್ನೂ ಅವನು ಎಣಿಸಬಲ್ಲ. ಆದರೆ ಇಂಥ ನೂರು ಮನೆಗಳನ್ನು ಕಟ್ಟಲು ಬೇಕಾದ ಕಲ್ಲು-ಮಣ್ಣನ್ನು ಒಳಗೊಂಡ ನೆಲವಾಗಿದ್ದಾನೆ ಕವಿ. ಮನೆಯಂತೆ ನೆಲ ಒಂದು ಆಕಾರವನ್ನು ಮುಟ್ಟಿಲ್ಲ. ಆದರೆ ಸೃಷ್ಟಿಗೂ ಒಂದು ಆಕಾರವಿದೆಯಲ್ಲವೆ? ಮೃಣಾಲಿನಿ : ನಾನು ಶಾಸ್ತ್ರಿಯಂತೂ ಅಲ್ಲ. ಹಾಗಾದರೆ ನಾನು ಮೇ'ಯೆಂದು ನೀನು ಸೂಚಿಸುವಿಯೋ ಏನು ? ಏನು ಬೇಕಾದುದನ್ನು ಹೇಳು. ನಿನ್ನ ಕೈಯಲ್ಲಿ ಸಿಕ್ಕಿದ್ದೇನೆ. ಕೋಸಲೇಂದ್ರ : ( ನಕ್ಕು ) ಮೇಸ್ತ್ರಿಯೆಂದು ಹೇಗೆ ಹೇಳ: ? ಆದರೆ ಆ ಮೇಸ್ತ್ರಿಯಂತೆ ನೀನೂ ನಿನ್ನ ಮನೆ ಕಟ್ಟಿದೆ, ಕೆಲವು ದಿನಗಳ ಹಿಂದೆ ಆ ಮನೆಯ ತೊಲೆ-ಕಂಬಗಳ ಗಣಿತವೇ ನಿನಗೆ ಏಕಮೇವ ಸತ್ಯವಾಗಿತ್ತು. ಆ ತೊಲೆ- ಕಂಬಗಳನ್ನು ನಾನೂ ಎಣಿಸಿದ್ದೇನೆ. ಮೃಣಾಲಿನಿ : ನಿನಗೆ ಸೇರದ ಕಂಬಗಳಿವೆಯೇ ಆ ಮನೆಯಲ್ಲಿ ? ಕೋಸಲೇಂದ್ರ : ಒಂದೆರಡಿವೆ. ವರ್ಗಸಮರದ ಬಗ್ಗೆ ನೀನು ಮಾತನಾಡು ವಾಗ ನಿನ್ನನ್ನು ನೋಡಬೇಕು. ಪ್ರತ್ಯಕ್ಷ ದುರ್ಗೆಯ ಅವತಾರವಾಗಿ ಕಾಣು ! ದ್ವೇಷದ ಮೇಲೆ ಕಟ್ಟಿದ ಮನೆ ಮಳಲಿನ ಮನೆಯಂತೆ, ಮೃಣಾಲಿನಿ ! ಅದು ಚಿರಕಾಲ ಬಾಳುವದಿಲ್ಲ. ಮೃಣಾಲಿನಿ : ( ಸಿಟ್ಟಿನಿಂದ ) ಮಾರ್ಕ್ಸ್ ಸ್ವತಃ ಎಲ್ಲಿಯೂ ದ್ವೇಷದ ಪಾಠ ವನ್ನು ಕಲಿಸಿಲ್ಲ. ಅವನದು ಐತಿಹಾಸಿಕ ಘಟನಾವಾದ. ಇದ್ದುದನ್ನು ಇದ್ದ ಹಾಗೆ ನಿರ್ವಗವಾಗಿ ಹೇಳುತ್ತಾನೆ. ಕೋಸಲೇಂದ್ರ : ನಿಜ. ಆದರೆ ಮಾರ್ಕ್ಸನ ಮನಸ್ಸು ಗ್ರಂಥಗಳಲ್ಲಿಲ್ಲದ ದ್ವೇಷ ಮಾರ್ಕ್ಸವಾದಿಗಳ ಆಚಾರ- ಪ್ರಚಾರಗಳ ರೀತಿಯಿಂದ ಉದ್ದವಿ