ಪುಟ:Yugaantara - Gokaak.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಮ್ಮ ಮಾತು (ಯುಗಾಂತರ'ವು ಈ ವರುಷದ ಐದನೆಯ ಕುಸುಮ, ಒಂದು ಎರಡು, ಕೂಡಿದ್ದು (ಭಗ್ನ ಮಂದಿರ'; ಮೂರು ನಾಲ್ಕು, ಕೂಡಿದ್ದು “ ದೇವತಾ ಮನುಷ್ಯ'; ಐದನೆಯದೇ ಈ “ ಯುಗಾಂತರ'; ಇನ್ನು ಮುಂದೆ ಬರತಕ್ಕದ್ದು ( ತಾಯಿ. ಅಲ್ಲಿಗೆ ಈ ವರುಷ ಮುಗಿಯುತ್ತದೆ. ಗ್ರಂಥ ಮಾಲೆಯಿಂದ ಹೊರಬೀಳುವ ಗ್ರಂಥಗಳು ಅಗಸ್ಟದಿಂದ ಪ್ರಾರಂಭವಾಗಿ ಕೋಬರ, ಡಿ.ಬರ, ಫೆಬ್ರುವರಿ, ಎಪ್ರಿಲ್, ಜೂನ್ ತಿಂಗಳುಗಳಲ್ಲಿ ಕ್ರಮವಾಗಿ ಪ್ರಕಟವಾಗುತ್ತವೆ. ಒಮ್ಮೊಮ್ಮೆ ಎರಡೆರಡು ಮೂರು ಮೂರು ಕೂಡಿಸಿ ಪ್ರಕಟವಾಗಬಹುದು. ಭಗ್ನ ಮಂದಿರ ೩೪ ೨, ದೇವತಾ ಮನುಷ್ಯ ೨೨೨, ಯುಗಾಂತರ ೮೬; ಒಟ್ಟು ೬೨೨ ಪುಟಗಳನ್ನು ಇಲ್ಲಿಯ ವರೆಗೆ ಸಲ್ಲಿಸಿದಂತಾಗಿದೆ. ಇನ್ನು ೨೫೦ ಪುಟಗಳನ್ನು ಕೊಟ್ಟರೆ ಪ್ರತಿವರ್ಷಕ್ಕೆ ಗ್ರಾಹಕರಿಗೆ ನಾವು ಸಲ್ಲಿಸಬೇಕಾದ ೯೦೦ ಪುಟಗಳನ್ನು ಸಲ್ಲಿಸಿದಂತಾಗುವದು. ( ಒಂದು ವರ್ಷದಲ್ಲಿ ೧೨೦ ಪುಟಗಳ ಆರು ಗ್ರಂಥಗಳನ್ನು ಸಲ್ಲಿಸಲಾಗುವದು.' ಎಂದು ನಾವು ತಿಳಿಸುತ್ತ ಬಂದದ್ದೇ ನಮ್ಮ ಗ್ರಾಹಕರಲ್ಲಿ ಅನೇಕರಿಗೆ ತಪ್ಪು ಕಲ್ಪನೆ ಹುಟ್ಟಿಸಿರಬಹುದೆಂದು ಇತ್ತೀಚಿನ ಪತ್ರವ್ಯವಹಾರಗಳಿಂದ ಕಂಡು ಬಂದಿದೆ. ಭಗಮಂದಿರ' - ದೇವತಾ ಮನುಷ್ಯ' ಇವು ಎರಡೇ ಎಂದು ತಿಳಿದು ಇನ್ನೂ ನಾಲ್ಕು ಗ್ರಂಥಗಳು ಬರಬೇಕೆಂದು ಅನೇಕರು ಕೇಳುತ್ತಿದ್ದಾರೆ. ಗ್ರಂಥಕರ್ತರಿಗೆ: ಪುಟಗಳ ನಿರ್ಬಂಧವನ್ನು ಹಾಕುವುದು ಅಸಾಧ್ಯವಾದುದ ರಿಂದ-ಹಾಗೆ ಹಾಕುವುದೂ ಸಾಹಿತ್ಯ ನಿರ್ಮಾಣಕ್ಕೆ ಅನುಕೂಲವಲ್ಲವಾದುದ ರಿಂದ-ಒಂದು ಗ್ರಂಥ ನೂರೇ ವುಟವಾಗಬಹುದು; ಒಂದು ಮೂರುನೂರು ಪುಟಾಗಬಹುದು: ಒಂದು ಆದನೂರಕ್ಕೂ ಹೋಗಬಹುದು. ಅಂತೆಯೇ ಒಟು, ಸಲ್ಲಿಸತಕ್ಕ ಪುಟಗಳ ಮೇಲೆ ಗಮನವನ್ನಿಟ್ಟು ಗ್ರಾಹಕರೂ ಸಹಾನು ಕೊರೆಯಿಂದ ಸಹಕರಿಸಬೇಕಾಗಿ ಬೇಡುತ್ತೇವೆ * • ಯುರ'ವನ್ನು ಗ್ರಂಥಮಾಲೆಗಾಗಿ ಬರೆದುಕೊಟ್ಟ ಶ್ರೀಮಾನ್ ವಿ. ಕೃ ಗೋಕಾಕ ಅವರಿಗೆ ನಾವು ತುಂಬಾ ಉಪಕೃತರಾಗಿದ್ದೇವೆ. ಸ೦ತ ಹೊದಿಕೆ ಚಿತ್ರವನ್ನು ಬರೆದುಕೊಟ್ಟೆ ಶ್ರೀ ರಾಘವೇಂದ್ರರಿಗೂ ಕೃತಜ್ಞರಾಗಿದ್ದೇವೆ, - ಸಂಪಾದಕ