ಪುರುಷನೆಂದು ಪುರುಷನಲ್ಲವಯ್ಯಾ. ಕರೆವುತಿರ್ಪುದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪುರುಷನೆಂದು ಕರೆವುತಿರ್ಪುದು ಜಗದವರೆಲ್ಲ ಎನ್ನ ; ನಾನು ಪುರುಷನಲ್ಲವಯ್ಯಾ. ಅದೆಂತೆಂದೊಡೆ : ಹೊರಗಣ ಸಾಕಾರವೆ ನೀನು
ಒಳಗಣ ನಿರಾಕಾರವೆ ನಾನು. ಹೊರಗಣ ಸಾಕಾರದ ಪುರುಷರೂಪೇ ನೀವಾಗಿ
ಒಳಗಣ ನಿರಾಕಾರ ಸ್ತ್ರೀರೂಪೇ ನಾನಾಗಿ
ನಿಮಗೆ ರಾಣಿವಾಸವಾದೆನಯ್ಯಾ ಅಖಂಡೇಶ್ವರಾ.