ಪೂರ್ವದ್ವಾರವ ಬಿಟ್ಟು ಪಶ್ಚಿಮದ್ವಾರದಲ್ಲಿ ಪ್ರಾಣನಿರವ ಮಾಡಿ
ನಾಭಿಮುಖದಗ್ನಿಯನೂಧ್ರ್ವಮುಖಕ್ಕೊಯ್ದು
ಶಂಕಿನಿಯ ನೋಟದಲ್ಲಿ ನಿಲಯವಾದಾತ ಶರಣ. ಆತನೇ ತೂರ್ಯಾತೀತ ಉನ್ಮನಿಯವಸ್ಥೆಯಾದಾತ ಆತನೇ ಜನನ_ಮರಣವರ್ಜಿತನಪ್ಪ
ಆತನೇ ನಿರ್ದೇಹಿಯಪ್ಪ
ಆತನೇ ಮಹಾಪುರುಷನು. ಇದನಲ್ಲಾ ಎಂಬ ಗುರುದ್ರೋಹಿಯನೇನೆಂಬೆ
ಇದನಲ್ಲಾ ಎಂಬ ಲಿಂಗದ್ರೋಹಿಯನೇನೆಂಬೆ
ಅಯ್ಯಾ ಕೂಡಲಚೆನ್ನಸಂಗಮದೇವಾ ?