ಪೃಥ್ವಿಯೆ ಹಸ್ತಕ್ಕೆ ಅಂಗವಾದ

ವಿಕಿಸೋರ್ಸ್ದಿಂದ



Pages   (key to Page Status)   


ಪೃಥ್ವಿಯೆ ಅಂಗವಾದ ಭಕ್ತಂಗೆ ಚಿತ್ತವೆ ಹಸ್ತ. ಆ ಹಸ್ತಕ್ಕೆ ಕ್ರಿಯಾಶಕ್ತಿ
ಆ ಶಕ್ತಿಗೆ ಆಚಾರಲಿಂಗ
ಆ ಲಿಂಗಕ್ಕೆ ಘ್ರಾಣೇಂದ್ರಿಯವೆಂಬ ಮುಖ
ಆ ಮುಖಕ್ಕೆ ಸುಗಂಧವೆ ಪದಾರ್ಥ ; ಆ ಪದಾರ್ಥವನು ಘ್ರಾಣದಲ್ಲಿಹ ಆಚಾರಲಿಂಗಕ್ಕೆ ಶ್ರದ್ಧಾಭಕ್ತಿಯಿಂದರ್ಪಿಸಿ
ಆ ಸುಗಂಧದ ಪ್ರಸಾದವನು ಪಡೆದು
ಸುಖಿಸುವಾತನೆ ಸದ್‍ಭಕ್ತನು ನೋಡಾ ಅಖಂಡೇಶ್ವರಾ.