ವಿಷಯಕ್ಕೆ ಹೋಗು

ಪೃಥ್ವಿಯ ಕಠಿಣವ ಕೆಡಿಸಿ,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಪೃಥ್ವಿಯ ಕಠಿಣವ ಕೆಡಿಸಿ
ಅಪ್ಪುವಿನ ಕೈಕಾಲು ಮುರಿದು
ಅಗ್ನಿಯ ಕಿವಿ ಮೂಗಂ ಕೊಯ್ದು
ವಾಯುವಿನ ಶಿರವರಿದು
ಆಕಾಶವ ಶೂಲದಲ್ಲಿಕ್ಕಿದ ಬಲ್ಲಿದ ತಳವಾರನೀತ ನೋಡಯ್ಯಾ. ಒಂಬತ್ತು ಬಾಗಿಲ ಬೀಗಮಂ ಬಲಿದು ಒಡನೆ ನವಸಹಸ್ರ ಮಂದಿಯ ಕೊಂದುಳಿದ ಗುಹೇಶ್ವರಾ ನಿಮ್ಮ ಶರಣ.