ವಿಷಯಕ್ಕೆ ಹೋಗು

ಪೃಥ್ವಿಯ ಪೂರ್ವಾಶ್ರಯವ ಕಳೆಯದನ್ನಕ್ಕ

ವಿಕಿಸೋರ್ಸ್ದಿಂದ


ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಪೃಥ್ವಿಯ
ಪೂರ್ವಾಶ್ರಯವ
ಕಳೆಯದನ್ನಕ್ಕ
ಅಪ್ಪುವಿನ
ಪೂರ್ವಾಶ್ರಯವ
ಕಳೆಯದನ್ನಕ್ಕ
ತೇಜದ
ಪೂರ್ವಾಶ್ರಯವ
ಕಳೆಯದನ್ನಕ್ಕ
ವಾಯುವಿನ
ಪೂರ್ವಾಶ್ರಯವ
ಕಳೆಯದನ್ನಕ್ಕ
ಆಕಾಶದ
ಪೂರ್ವಾಶ್ರಯವ
ಕಳೆಯದನ್ನಕ್ಕ
ಚಂದ್ರ
ಸೂರ್ಯರ
ಪೂರ್ವಾಶ್ರಯವ
ಕಳೆಯದನ್ನಕ್ಕ
ಆತ್ಮನ
ಪೂರ್ವಾಶ್ರಯವ
ಕಳೆಯದನ್ನಕ್ಕ
ಭಕ್ತರೆಂದು
ಲಿಂಗವ
ಪೂಜಿಸುವವರ
ಕಂಡು
ಬೆರಗಾದೆನು
ಕಾಣಾ
ಗುಹೇಶ್ವರಾ.