Library-logo-blue-outline.png
View-refresh.svg
Transclusion_Status_Detection_Tool

ಪೃಥ್ವಿ, ಸುಚಿತ್ತ, ಘ್ರಾಣ,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪೃಥ್ವಿ
ಸುಚಿತ್ತ
ಘ್ರಾಣ
ಗಂಧ
ಪಾಯ್ವಿಂದ್ರಿಯ ಇವು ಭಕ್ತನಂಗಮುಖಂಗಳು. ಆ ಭಕ್ತಂಗೆ ಆಚಾರಲಿಂಗವೇ ಪ್ರಾಣವಾಗಿಪ್ಪುದಯ್ಯ. ಅಪ್ಪು
ಸುಬುದ್ಧಿ
ಜಿಹ್ವೆ
ರಸ
ಗುಹ್ಯ ಈ ಐದು ಮಹೇಶ್ವರನ ಅಂಗಮುಖಂಗಳು
ಆ ಮಹೇಶ್ವರಂಗೆ ಗುರುಲಿಂಗವೇ ಪ್ರಾಣವಾಗಿಪ್ಪುದಯ್ಯ. ಅಗ್ನಿ
ನಿರಹಂಕಾರ
ನೇತ್ರ
ರೂಪು
ಪಾದ ಈ ಐದು ಪ್ರಸಾದಿಯ ಅಂಗಮುಖಂಗಳು. ಆ ಪ್ರಸಾದಿಗೆ ಶಿವಲಿಂಗವೇ ಪ್ರಾಣಲಿಂಗವಾಗಿಪ್ಪುದಯ್ಯ. ವಾಯು
ಸುಮನ
ತ್ವಕ್ಕು
ಸ್ಪರ್ಶನ
ಪಾಣಿ ಈ ಐದು ಪ್ರಾಣಲಿಂಗಿಯ ಅಂಗಮುಖಂಗಳು. ಆ ಪ್ರಾಣಲಿಂಗಿಗೆ ಜಂಗಮಲಿಂಗವೇ ಪ್ರಾಣವಾಗಿಪ್ಪುದಯ್ಯ. ಆಕಾಶ
ಸುಜ್ಞಾನ
ಶ್ರೋತ್ರ
ಶಬ್ದ
ವಾಕು ಈ ಐದು ಶರಣನ ಅಂಗಮುಖಂಗಳು. ಆ ಶರಣನಿಗೆ ಪ್ರಸಾದಲಿಂಗವೇ ಪ್ರಾಣವಾಗಿಪ್ಪುದಯ್ಯ. ಆತ್ಮ
ಸದ್‍ಭಾವ
ಮನ
ನೆನಹು
ಪರಿಣಾಮ ಈ ಐದು ಐಕ್ಯನ ಅಂಗಮುಖಂಗಳು. ಆ ಐಕ್ಯಂಗೆ ಮಹಾಲಿಂಗವೇ ಪ್ರಾಣವಾಗಿಪ್ಪುದಯ್ಯ. ಇಂತೀ ಅಂಗಮುಖವನರಿದು ಲಿಂಗಮುಖವ ಮಾಡಬಲ್ಲರೆ ಪ್ರಸಾದಿಯೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.