Library-logo-blue-outline.png
View-refresh.svg
Transclusion_Status_Detection_Tool

ಪ್ರಥಮದಲ್ಲಿ ಭಕ್ತರಾದೆವೆಂಬರು. ದ್ವಿತೀಯದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪ್ರಥಮದಲ್ಲಿ ಭಕ್ತರಾದೆವೆಂಬರು. ದ್ವಿತೀಯದಲ್ಲಿ ಮಾಹೇಶ್ವರರಾದೆವೆಂಬರು. ತೃತೀಯದಲ್ಲಿ ಪ್ರಸಾದಿಯಾದೆವೆಂಬರು. ನಾಲ್ಕನೆಯಲ್ಲಿ ಪ್ರಾಣಲಿಂಗಿಯಾದೆವೆಂಬರು. ಅಯ್ದನೆಯಲ್ಲಿ ಶರಣರಾದೆವೆಂಬರು. ಆರನೆಯಲ್ಲಿ ಐಕ್ಯರಾದೆವೆಂಬರು. ಆರುಸ್ಥಲವ ಮೀರಿ ನಿರವಯಸ್ಥಲವನೆಯ್ದಿದೆವೆಂಬರು. ಇದು ಖಂಡಿತ ಷಟ್‍ಸ್ಥಲಬ್ರಹ್ಮಜ್ಞಾನ ನಿರ್ಣಯವಲ್ಲ. ಆವಾವಸ್ಥಲವನಂಗಂಗೊಂಡರು ಆ ಸ್ಥಲದಲ್ಲಿ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲಡೆ ಸದ್ಭಕ್ತನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.