ಪ್ರಸನ್ನ ಸಂತೇಕಡೂರು

ವಿಕಿಸೋರ್ಸ್ ಇಂದ
Jump to navigation Jump to search

ಪ್ರಸನ್ನ ಸಂತೇಕಡೂರು

ಡಾ. ಪ್ರಸನ್ನ ಸಂತೇಕಡೂರು ಸಮಕಾಲೀನ ಕನ್ನಡ ಕಥೆಗಾರ ಹಾಗೂ ವಿಜ್ಞಾನಿ. ಇವರು ಇತ್ತೀಚೆಗೆ "ಮಾಯಾಪಂಜರ" ಎಂಬ ಕಥಾಸಂಕಲನ ಮತ್ತು "ಎತ್ತಣ ಅಲ್ಲಮ ಎತ್ತಣ ರಮಣ?" ಎಂಬ ಅಲ್ಲಮ ಪ್ರಭು ಮತ್ತು ರಮಣ ಮಹರ್ಷಿಗಳ ಅಧ್ಯಾತ್ಮ ಮತ್ತು ತತ್ವಶಾಸ್ತ್ರದ ಜೀವನವನ್ನ ಕುರಿತು ಒಂದು ಕೃತಿಯನ್ನ ಬರೆದಿದ್ದಾರೆ. ಪ್ರಸನ್ನ ಅವರು ಸುಮಾರು ಹತ್ತು ವರ್ಷಗಳ ಕಾಲ ಅಮೆರಿಕಾದಲ್ಲಿ ನೆಲೆಸಿದ್ದರು. ೨೦೧೮ ರ ನವಂಬರಿನಲ್ಲಿ ಭಾರತಕ್ಕೆ ಮರಳಿ ಸಾಹಿತ್ಯ ಮತ್ತು ವಿಜ್ಞಾನ ಎರಡು ದೋಣಿಯಲ್ಲೂ ಪ್ರಯಾಣ ಮಾಡುತ್ತಿದ್ದಾರೆ. ಈಗ ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಹಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು

1. ಮಾಯಾಪಂಜರ (ಕಥಾಸಂಕಲನ) ಇದರಲ್ಲಿ ಹದಿಮೂರು ಕಥೆಗಳಿವೆ

೧) ಒಲವೇ ಜೀವನ ಸಾಕ್ಷಾತ್ಕಾರ ( ಈ ಕತೆ ವಿಧುರನೊಬ್ಬನ ಅಮರ ಪ್ರೇಮ ಕಥೆ). ಈ ಕಥೆಯ ಬಗ್ಗೆ ಖ್ಯಾತ ಕನ್ನಡ ಲೇಖಕ ಪ್ರಧಾನ ಗುರುದತ್ತ ಅವರು ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಕಥೆಗೆ ಅಮೆರಿಕಾದ ಸ್ವರ್ಣಸೇತು ಸಂಸ್ಥೆಯೂ ಮೊದಲ ಬಹುಮಾನ ನೀಡಿ ಗೌರವಿಸಿದೆ.

೨) ಮಾಯಾಪಂಜರ (ಇಲ್ಲಿ ಪ್ರೇಮಿಯನ್ನು ಕಳೆದುಕೊಂಡು ಪ್ರೀತಿಯನ್ನು ಹುಡುಕುತ್ತಾ ಹೋಗುವ ಪ್ರೇಯಸಿಯೊಬ್ಬಳ ಬದುಕಿನ ದುರಂತವನ್ನ ಕಾಣಬಹುದು. ಇದೊಂದು ಫ್ಯಾಂಟಸಿ, ಮಾಯಾ ವಾಸ್ತವತೆಯನ್ನ ಹೊಂದಿರುವ ಕಥೆ. ಇಲ್ಲಿ ಕಮೂವಿನ ಅಸಂಗತವಾದ ಮತ್ತು ಸಾರ್ತ್ರೆಯ ಅಸ್ತಿತ್ವವಾದದ ಪ್ರಭಾವ ಕೂಡ ಎದ್ದು ಕಾಣುತ್ತದೆ. ಇದು ಕನ್ನಡದ ಅತ್ಯದ್ಭುತ ಕತೆಗಳಲ್ಲಿ ಒಂದು ಎಂದು ಹೇಳಬಹುದಾದ ಎಲ್ಲಾ ಲಕ್ಷಣಗಳನ್ನು ಹೊಂದಿದೆ.).

೩) ಅಸ್ಥಿಪಂಜರದ ಬಾಲಕ (ಇದು ಅಮೆರಿಕಾದ ಪ್ರಖ್ಯಾತ ಟೆನ್ನಿಸ್ ಪಟ್ಟು ಅರ್ಥರ್ ಆಶ್ ದುರಂತ ಜೀವನ ಕತೆಯನ್ನ ತೀವ್ರ ಕುತೂಹಲಕಾರಿಯಾಗಿ ಹೇಳಿರುವ ವಸ್ತುವನ್ನ ಹೊಂದಿದೆ).

೪) ಅತಿಮಾನವನ ವಿಕಾಸ ಮತ್ತು ಅವನತಿ (ಇದು ನುರುವರ್ಷದ ನಂತರದ ಜನಜೀವನ ಹೇಗಿರುತ್ತದೆ ಎಂಬುದನ್ನ ಹೇಳುವ ವೈಜ್ಞಾನಿಕ ಕತೆ)

೫) ಸ್ಟ್ಯಾಟ್ಯೂ ಆಫ್ ಲಿಬರ್ಟಿ ( ಇದು ಅಮೆರಿಕಾದಲ್ಲಿ ಅತಿಯಾದ ಸ್ವಾತಂತ್ರ್ಯ ಮತ್ತು ಗನ್ ಸಂಸ್ಕೃತಿ ಹೇಗೆ ಅವನತಿಯತ್ತ ಕರೆದುಕೊಂಡು ಹೋಗುತ್ತದೆ ಎಂಬುದನ್ನ ಫ್ರಾಂಜ್ ಕಾಫ್ಕನ ಪ್ರಭಾವವಿರುವ ಕತೆ. ಈ ಕತೆ ಸ್ವಲ್ಪ ಮಟ್ಟಿಗೆ ಕಾಫ್ಕನ ದಿ ಟ್ರಯಲ್ ಮತ್ತು ದಿ ಕಾಸಲ್ ಕಾದಂಬರಿಗಳನ್ನ ನೆನಪಿಸುತ್ತದೆ).

೬) ಐಕ್ಯ ( ಇಲ್ಲಿಯ ನಾಯಕಿ ದೇವರನ್ನ ಹುಡುಕುತ್ತಾ ತನ್ನ ಪ್ರೇರಕ ಶಕ್ತಿಯಾಗಿದ್ದ ಅಕ್ಕಮಹಾದೇವಿಯನ್ನ ಹುಡುಕುತ್ತಾ ಹೋಗುವ ಕತೆ)

೭) ವ್ಯಂಗ್ಯ ( ಈ ಕಥೆ ಚಿಕ್ಕದಾದರೂ ಸಮಕಾಲೀನ ಸಮಾಜವನ್ನ ವಿಡಂಬನೆ ಮಾಡಿದೆ. ಇದನ್ನ ಪ್ರಸನ್ನ ಅವರ ತೂಕದ ಕತೆಗಳ ಸಾಲಿಗೆ ಸೇರಿಸಬಹುದು).

೮) ವಂಶವಾಹಿನಿ (ಇದು ಕನ್ನಡದ ಮಹತ್ತರವಾದ ಕಥೆಗಳಲ್ಲಿ ಒಂದು ಎಂದು ನಿರ್ವಿವಾದವಾಗಿ ಹೇಳಬಹುದು. ಈ ಕಥೆ ಸೃಷ್ಟಿ ರಹಸ್ಯ, ಮಶವಾಹಿನಿ, ವಂಶವೃಕ್ಷ ಎಲ್ಲವನ್ನು ತುಂಬಾ ಮನೋಜ್ಞವಾಗಿ ಮೂಡಿಬಂದಿದೆ ಎಂದು ಹೇಳಬಹುದು. ಇದು ಸ್ವಲ್ಪ ಮಟ್ಟಿಗೆ ಎಸ್. ಎಲ್. ಭೈರಪ್ಪನವರ ವಂಶವೃಕ್ಷದ ಪ್ರಭಾವದ ರೀತಿ ಕಂಡರೂ ಇದು ಬೇರೆ ರೀತಿಯ ಕಥೆ ). ಈ ಕಥೆಗೆ ಅಂತರ್ಜಾಲದ ಪ್ರತಿಲಿಪಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿದೆ.

೯) ಎಬೋಲಾ ( ಈ ಕತೆ ಎಬೋಲಾ ವೈರಸ್ಸು ಮತ್ತು ಅದರಿಂದ ಬರುವ ರೋಗದ ಬಗ್ಗೆ ಇದ್ದರೂ ಇದು ಸಮಕಾಲೀನ ಅಮೆರಿಕಾದ ಅರೋಗ್ಯ ವೀಮೆಯನ್ನು ಅದರಿಂದ ಸಾಮಾನ್ಯ ಜನರಿಗೆ ಆಗುವ ಸಮಸ್ಯೆಗಳನ್ನ ವಿಡಂಬನಾತ್ಮಕವಾಗಿ ಟೀಕಿಸುತ್ತದೆ).

೧೦) ಸುಡುಗಾಡು ( ಸುಡುಗಾಡು ಕಥೆ ಆಧುನಿಕತೆಯ ನಾಗಾಲೋಟದಿಂದ ಹಳ್ಳಿಗಳು ಹೇಗೆ ನಾಶವಾಗುತ್ತಿವೆ ಎಂಬುದನ್ನ ತುಂಬಾ ಮನೋಜ್ಞವಾಗಿ ಚಿತ್ರಿಸಿರುವುದನ್ನ ಈ ಕಥೆಯಲ್ಲಿ ಕಾಣಬಹುದು. ಇಲ್ಲಿನ ನಾಯಕ ಆಲನಹಳ್ಳಿ ಶ್ರೀಕೃಷ್ಣರವರ ಪರಸಂಗದ ಗೆಂಡೆತಿಮ್ಮ ಮತ್ತು ಭುಜಂಗಯ್ಯನ್ನ ದಶಾವತಾರದ ಭುಜಂಗಾಯನನ್ನ ನೆನಪಿಸುತ್ತದೆ. ಈ ಕಥೆ ಆ ಕಾದಂಬರಿಗಳ ಮಟ್ಟಕ್ಕೆ ನಿಲ್ಲಬಹುದು ಹೇಳಬಹುದು).

೧೧) ಮಾಯಾಜಿಂಕೆ (ಮಾಯಾಜಿಂಕೆ ಹೆಣ್ಣೊಬ್ಬಳ ದೈಹಿಕ ಮತ್ತು ಮಾನಸಿಕ ತಳಮಳಗಳನ್ನ ಫ್ಯಾಂಟಸಿ ಮತ್ತು ಮಾಯಾ ವಾಸ್ತವತೆಯ ಮೂಲಕ ತೋರಿಸಿದೆ. ಈ ಕಥೆ ಓದುತ್ತಿದ್ದರೆ ವಿಶ್ವ ವಿಖ್ಯಾತ ಸಮಕಾಲೀನ ಜಪಾನಿ ಲೇಖಕ ಹಾರುಕಿ ಮುರಾಕಮಿಯ ಕೃತಿಗಳನ್ನ ಜ್ಞಾಪಕಕ್ಕೆ ತರುತ್ತದೆ).

೧೨) ಮಹಾನವಮಿ ( ಇಲ್ಲಿನ ನಾಯಕಿ ತನಗೆ ಸಾವು ಹತ್ತಿರ ಬರುತ್ತಿದೆ ಎಂದು ಮೊದಲೇ ತಿಳಿದಿದ್ದರೂ ನಗುನಗುತ್ತಾ ಎಲ್ಲರನ್ನು ಮುಗ್ದಗೊಳಿಸಿ ಸಾವನ್ನ ಪ್ರೀತಿಯಿಂದ ಅಪ್ಪಿಕೊಳ್ಳುವ ಘಟನೆಯನ್ನ ತೋರಿಸುತ್ತದೆ).

೧೩) ಎತ್ತಣ ಮಾಮರ ಎತ್ತಣ ಕೋಗಿಲೆ ( ಇದೊಂದು ಬದಲಾದ ಜಗತ್ತಿನ ಪಾತ್ರಗಳು ತಿರುಗು ಮುರುಗಾಗಿ ಅಸ್ತಿತ್ವ ಮತ್ತು ಪ್ರೀತಿಯನ್ನ ಹುಡುಕುತ್ತಾ ಒದ್ದಾಡುವ ಸ್ಥಿತಿಯನ್ನ ಅಮೆರಿಕಾ ಮತ್ತು ಭಾರತದ ಹಿನ್ನೆಲೆಯಲ್ಲಿ ಚಿತ್ರಿಸಿರುವ ಕಥೆ).

[೧]

2. ಎತ್ತಣ ಅಲ್ಲಮ ಎತ್ತಣ ರಮಣ?

ಇದು ಅಲ್ಲಮ ಪ್ರಭುವಿನ ಪ್ರಭಾವ ರಮಣ ಮಹರ್ಷಿಯವರ ತತ್ವ ಮತ್ತು ಜೀವನದ ಮೇಲೆ ಹೇಗೆ ಆಗಿದೆ ಎಂದು ತೋರಿಸುವ ಕೃತಿ. [೨]

K B Ganapathy ಪ್ರಸನ್ನ ಸಂತೇಕಡೂರು (June 24th 2019). "ಎತ್ತಣ ಅಲ್ಲಮ ಎತ್ತಣ ರಮಣ?". ಪ್ರಸನ್ನ ಸಂತೇಕಡೂರು. Mysore, India. Mysore Mithra and Star Of Mysore. p. 3. Retrieved 11 ಜುಲೈ 2019. Check date values in: |access-date=, |date= (help)
ಪ್ರಜಾವಾಣಿ (June 24 2019). "ಪ್ರಸನ್ನಸಂತೇಕಡೂರು ಅವರ ಮಾಯಾಪಂಜರ". ಮಾಯಾಪಂಜರ. Bangalore. Deccan Herald and Prajaavani. pp. 4–4. Retrieved 11 ಜುಲೈ 2019. Check date values in: |access-date=, |date= (help)