ಪ್ರಸಾದಲಿಂಗಮೋಹಿತನಾದಡೆ ಅಂಗರುಚಿಗೆ ಇಚ್ಛೈಸಲಾಗದು.

ವಿಕಿಸೋರ್ಸ್ದಿಂದ



Pages   (key to Page Status)   


ಪ್ರಸಾದಲಿಂಗಮೋಹಿತನಾದಡೆ
ಅಂಗರುಚಿಗೆ
ಇಚ್ಛೈಸಲಾಗದು.
ಪ್ರಸಾದಲಿಂಗಭಕ್ತನಾದಡೆ
ಪೂರ್ವಾಹಾರವ
ಕೈಕೊಳ್ಳಲಾಗದು.
ಪ್ರಸಾದಲಿಂಗಪೂಜಕನಾದಡೆ
ಅಪ್ರಸಾದಿಗೆ
ಉಣಲಿಕ್ಕಲಾಗದು.
ಪ್ರಸಾದಲಿಂಗವೀರನಾದಡೆ
ಅನ್ಯರಿಗೆ
ಕೈಯಾನಲಾಗದು.
ಪ್ರಸಾದಲಿಂಗಪ್ರಸಾದಿಯಾದಡೆ
ಜೀವಹಿಂಸೆಯ
ಮಾಡಲಾಗದು.
ಪ್ರಸಾದಲಿಂಗಪ್ರಾಣಿಯಾದಡೆ
ಆತ್ಮನಿಗ್ರಹವ
ಮಾಡಲಾಗದು.
ಇದು
ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ

ಆರು
ಸಹಿತ
ಪ್ರಸಾದಲಿಂಗಭಕ್ತಿ