ಪ್ರಸಾದಿಯೊಳಗಣ ಪ್ರಸಾದಿಯೊಳಗಣ ಭಕ್ತಸ್ಥಲವನಿಂಬುಗೊಂಡರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪ್ರಸಾದಿಯೊಳಗಣ ಭಕ್ತಸ್ಥಲವನಿಂಬುಗೊಂಡರು ಬಸವಣ್ಣನವರು. ಪ್ರಸಾದಿಯೊಳಗಣ ಮಹೇಶ್ವರಸ್ಥಲವನಿಂಬುಗೊಂಡರು ಮಡಿವಾಳಸ್ವಾಮಿಗಳು. ಪ್ರಸಾದಿಯೊಳಗಣ ಪ್ರಸಾದಿಸ್ಥಲವನಿಂಬುಗೊಂಡರು ಚೆನ್ನಬಸವಣ್ಣನವರು. ಪ್ರಸಾದಿಯೊಳಗಣ ಪ್ರಾಣಲಿಂಗಿಸ್ಥಲವನಿಂಬುಗೊಂಡರು ತಂಗಟೂರ ಮಾರಯ್ಯನವರು. ಪ್ರಸಾದಿಯೊಳಗಣ ಶರಣಸ್ಥಲವನಿಂಬುಗೊಂಡರು ಗಜೇಶಮಸಣಯ್ಯನವರು
ಪ್ರಸಾದಿಯೊಳಗಣ ಐಕ್ಯಸ್ಥಲವನಿಂಬುಗೊಂಡರು ಬಿಬ್ಬಿಬಾಚಯ್ಯನವರು. ಇಂತೀ ಪ್ರಸಾದಿ ಷಟ್‍ಸ್ಥಲವನಿಂಬುಗೊಂಡ ಶರಣರ ಪ್ರಸನ್ನವ ಮಾಡಿಕೊಡಯ್ಯಾ ಎನಗೆ ಅಖಂಡೇಶ್ವರಾ.