ಪ್ರಸಾದ ಪದಾರ್ಥ ಉಚ್ಛಿಷ್ಟವೆನುತಿಪ್ಪಿರಿ?
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಪ್ರಸಾದ ಪದಾರ್ಥ ಉಚ್ಛಿಷ್ಟವೆನುತಿಪ್ಪಿರಿ? ಪ್ರಸಾದವಾವುದು ಪದಾರ್ಥವಾವುದು ಉಚ್ಛಿಷ್ಟವಾವುದು ಹೇಳಾ ಮರುಳೆ? ಪ್ರಸಾದವೆಂದರೆ ಪರಂಜ್ಯೋತಿಸ್ವರೂಪವಪ್ಪ ಶಿವತತ್ವವು; ಪದಾರ್ಥವೆಂದರೆ ಆತ್ಮನು; ಉಚ್ಛಿಷ್ಟವೆಂದರೆ ಮಾಯೆ ನೋಡ; ಮಾಯಾಕಾರ್ಯವಾದುದೇ ದೇಹ. ದೇಹೇಂದ್ರಿಯ ಮನಃಪ್ರಾಣಾದಿಗಳಪ್ಪ ಚತುರ್ವಿಂಶತಿತತ್ವಂಗಳು ಆ ಚತುರ್ವಿಂಶತಿ ತತ್ವಂಗಳಿಗೆ ಆಶ್ರಯವಾಗಿ ಚೈತನ್ಯವಾಗಿ ಆತ್ಮನು; ಅಂತು ಆತ್ಮ ಸಹವಾಗಿ ಪಂಚವಿಂಶತಿ ತತ್ವಂಗಳು. ಇಂತು ದೇಹೇಂದ್ರಿಯಾದಿಗಳ ಕಳೆದು ಆತ್ಮನ ಪರಮಾತ್ಮನಲ್ಲಿ ಸಮರ್ಪಿಸಬಲ್ಲರೆ ಪರಮ ಪ್ರಸಾದಿಯೆಂಬೆನು. ಪರಂಜ್ಯೋತಿಪ್ರಕಾಶನೆಂಬೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.