ಪ್ರಾಣಲಿಂಗಿಗಳಾದವರು ಪ್ರಸಾದಕಾಯರಪ್ಪರಲ್ಲದೆ ಲಿಂಗಭಾಜನವೆಂತಳವಡುವುದಯ್ಯಾ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪ್ರಾಣಲಿಂಗಿಗಳಾದವರು ಪ್ರಸಾದಕಾಯರಪ್ಪರಲ್ಲದೆ ಲಿಂಗಭಾಜನವೆಂತಳವಡುವುದಯ್ಯಾ? ತನುವಿನಲ್ಲಿ ಪಂಚವಿಂಶತಿ ಗುಣಂಗಳೆಚ್ಚತ್ತಿಪ್ಪನ್ನಕ್ಕ
ಲಿಂಗಭಾಜನವೆಂತಳವಡುವುದಯ್ಯಾ? ಬಂದುದು ಬಾರದುದೆಂಬ ಸಂದೇಹವುಳ್ಳನ್ನಕ್ಕ
ಕೊಂಡುದು ಕಿಲ್ಬಿಷ
ಕೂಡಲಚೆನ್ನಸಂಗಮದೇವಾ.